ಮನೆ ಅಪರಾಧ ಬೆಳಗಾವಿಯಲ್ಲಿ ಹೃದಯವಿದ್ರಾವಕ ಘಟನೆ : ಹೆಂಡತಿಯ ಕಾಟಕ್ಕೆ ಬೇಸತ್ತು ಗಂಡ ಆತ್ಮಹತ್ಯೆ

ಬೆಳಗಾವಿಯಲ್ಲಿ ಹೃದಯವಿದ್ರಾವಕ ಘಟನೆ : ಹೆಂಡತಿಯ ಕಾಟಕ್ಕೆ ಬೇಸತ್ತು ಗಂಡ ಆತ್ಮಹತ್ಯೆ

0

ಬೆಳಗಾವಿ: ಬೆಳಗಾವಿ ನಗರದ ಅನಗೋಳದ ದುರ್ಗಾ ಕಾಲೋನಿಯಲ್ಲಿ ದಾರುಣ ಘಟನೆ ಸಂಭವಿಸಿದೆ. ʻಮೈ ವೈಫ್ ಈಸ್‌ ರಿಜನ್ ಫಾರ್ ಮೈ ಡೆತ್ʼ ಎಂದು ಡೆತ್ ನೋಟ್ ಬರೆದಿಟ್ಟು 33 ವರ್ಷದ ಸುನೀಲ್ ಮೂಲಿಮಣಿ ಎಂಬ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಸುನೀಲ್ ತನ್ನ ಕಂಪ್ಯೂಟರ್ ಶಾಪ್‌ನಲ್ಲಿಯೇ ವೈಯರ್ ಬಳಸಿ ನೇಣು ಬಿಗಿದುಕೊಂಡು ಮೃತಪಟ್ಟಿದ್ದಾನೆ. ಆತನು ಬರೆದಿದ್ದ ಡೆತ್ ನೋಟ್‌ನಲ್ಲಿ ʻಮೈ ವೈಫ್ ಈಸ್‌ ರಿಜನ್ ಫಾರ್ ಮೈ ಡೆತ್ʼ ಎಂಬ ವಾಕ್ಯವಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸುನೀಲ್ ನಾಲ್ಕು ವರ್ಷಗಳ ಹಿಂದೆ ಪೂಜಾ ಎಂಬಾಕೆಯನ್ನು ಮದುವೆಯಾಗಿದ್ದ. ಈ ದಂಪತಿಗೆ ಈಗ ಮೂರು ವರ್ಷದ ಮಗುವೂ ಇದೆ. ಆದರೆ, ಕಳೆದ ಕೆಲ ಸಮಯದಿಂದ ಕುಟುಂಬದಲ್ಲಿ ಅಸಮಾಧಾನ, ಮನಸ್ತಾಪಗಳು ಹೆಚ್ಚಾಗಿದ್ದವು ಎನ್ನಲಾಗಿದೆ. ಇದುವರೆಗೆ ನಿಖರವಾದ ಕಾರಣಗಳು ಹೊರಬಿದ್ದಿಲ್ಲದಿದ್ದರೂ, ಸದ್ಯ ಅಂದುಕೊಳ್ಳಲಾಗುತ್ತಿರುವುದು ಅವರ ವೈವಾಹಿಕ ಜೀವನದಲ್ಲಿ ಆಳವಾದ ಭಿನ್ನಮತ ಮತ್ತು ಕಲಹವಿದ್ದಿರಬಹುದು ಎಂಬುದಾಗಿದೆ.

ಈ ಬಗ್ಗೆ ಉದ್ಯಮಬಾಗ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 108 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಮೃತದೇಹವನ್ನು ಬಿಮ್ಸ್ ಆಸ್ಪತ್ರೆಯ ಶವಾಗಾರಕ್ಕೆ ಶಿಫ್ಟ್ ಮಾಡಲಾಗಿದೆ. ಪೊಲೀಸರು ಸುನೀಲ್ ಬರೆದ ಡೆತ್ ನೋಟ್ ಅನ್ನು ವಶಪಡಿಸಿಕೊಂಡು, ಪೂಜಾ ಹಾಗೂ ಕುಟುಂಬದ ಇತರ ಸದಸ್ಯರ ವಿಚಾರಣೆ ನಡೆಸುತ್ತಿದ್ದಾರೆ.