ಮನೆ ರಾಜ್ಯ ಬೆಂಗಳೂರು : 150ರ ಗಡಿ ದಾಟಿದ ಆಕ್ಟೀವ್ ಕೇಸ್‌ಗಳು, ಡೆಂಗ್ಯೂ ಜತೆಗೆ ಡಬಲ್ ಸವಾಲು

ಬೆಂಗಳೂರು : 150ರ ಗಡಿ ದಾಟಿದ ಆಕ್ಟೀವ್ ಕೇಸ್‌ಗಳು, ಡೆಂಗ್ಯೂ ಜತೆಗೆ ಡಬಲ್ ಸವಾಲು

0

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಮತ್ತೊಮ್ಮೆ ತಲೆ ಎತ್ತಿದೆ. ಕಳೆದ ಕೆಲವು ದಿನಗಳಿಂದ ಸಿಲಿಕಾನ್ ಸಿಟಿ ಎಂದೇ ಹೆಸರಾಗಿರುವ ಈ ಮಹಾನಗರದಲ್ಲಿ ಕೋವಿಡ್ ಕೇಸ್‌ಗಳು ನಿತ್ಯ ಹೆಚ್ಚಳ ಕಂಡುಬರುತ್ತಿವೆ. ಇದೀಗ ನಗರದಲ್ಲಿ ಆಕ್ಟೀವ್ ಕೇಸ್‌ಗಳ ಸಂಖ್ಯೆ 150ರ ಗಡಿ ದಾಟಿದೆ.

ಕೋವಿಡ್ ಪ್ರಕರಣಗಳಲ್ಲಿ ರಾಜ್ಯವ್ಯಾಪಿ ಕೆಲಷ್ಟು ಏರಿಕೆ ಕಂಡುಬಂದಿದೆ. ರಾಜ್ಯದ ಒಟ್ಟು ಆಕ್ಟೀವ್ ಕೇಸ್‌ಗಳ ಸಂಖ್ಯೆ ಈಗ 234ಕ್ಕೆ ಏರಿದ್ದು, ಅವುಗಳಲ್ಲಿ ಅತ್ಯಧಿಕವಾದ 150ಕ್ಕೂ ಹೆಚ್ಚು ಕೇಸ್‌ಗಳು ಬೆಂಗಳೂರಿನಲ್ಲಿಯೇ ದಾಖಲಾಗಿವೆ. ಮಹಾದೇವಪುರ, ಪೂರ್ವ ವಲಯ ಮತ್ತು ದಕ್ಷಿಣ ವಲಯಗಳಲ್ಲಿ ಕೇಸ್‌ಗಳ ಪ್ರಮಾಣ ಹೆಚ್ಚು ಕಂಡುಬಂದಿದೆ. ಈ ಭಾಗಗಳಲ್ಲಿ 30ರ ಗಡಿಯನ್ನೂ ದಾಟಿರುವ ಪ್ರಕರಣಗಳ ಸಂಖ್ಯೆ ನಗರದಲ್ಲಿ ಮತ್ತೆ ಆತಂಕ ಹುಟ್ಟಿಸುತ್ತದೆ.

ಮಳೆಗಾಲ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಈಗಾಗಲೇ ಡೆಂಗ್ಯೂ ಪ್ರಕರಣಗಳೂ ಹೆಚ್ಚಾಗಿವೆ. ಇಂತಹ ಸಮಯದಲ್ಲಿ ಕೋವಿಡ್ ಪ್ರಕರಣಗಳ ಏರಿಕೆ ಆರೋಗ್ಯ ವ್ಯವಸ್ಥೆಗೆ ಮತ್ತೊಂದು ಸವಾಲಾಗಿ ಪರಿಣಮಿಸಿದೆ. ಬಿಬಿಎಂಪಿಯ ಆರೋಗ್ಯ ವಿಭಾಗ ಈಗ ಎರಡು ಕಾಯಿಲೆಗಳ ನಿಯಂತ್ರಣಕ್ಕಾಗಿ ಕಠಿಣ ಕ್ರಮ ಕೈಗೊಂಡಿದೆ.

ಬಿಬಿಎಂಪಿ ಈಗ ಐಎಲ್‌ಐ ಮತ್ತು ಸಾರಿ ಪ್ರಕರಣಗಳತ್ತ ಹೆಚ್ಚು ಗಮನ ಹರಿಸುತ್ತಿದ್ದು, 20,000ಕ್ಕೂ ಹೆಚ್ಚು ಜನರಲ್ಲಿ ಈ ರೋಗ ಲಕ್ಷಣಗಳಿರುವ ಬಗ್ಗೆ ಮಾಹಿತಿ ಲಭಿಸಿದೆ. ಇವರಲ್ಲಿ ಕೊರೊನಾ ಟೆಸ್ಟ್ ಕಡ್ಡಾಯವಾಗಿ ನಡೆಸಲು ಸೂಚನೆ ನೀಡಲಾಗಿದೆ. ಎಲ್ಲ ವಲಯಗಳ ಆರೋಗ್ಯ ಅಧಿಕಾರಿಗಳಿಗೆ ನಿಗಾ ವಹಿಸುವಂತೆ ಆದೇಶಿಸಲಾಗಿದೆ.

ಉಸಿರಾಟದ ತೊಂದರೆ ಅಥವಾ ಜ್ವರ, ಕೆಮ್ಮು ಇದ್ದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು. ಐಎಲ್‌ಐ ಅಥವಾ ಸ್ಯಾರಿ ಲಕ್ಷಣಗಳಿದ್ದರೆ ಕಡ್ಡಾಯವಾಗಿ ಕೋವಿಡ್ ಪರೀಕ್ಷೆ ಮಾಡಿಸಬೇಕು. ಸಾರ್ವಜನಿಕ ಸಭೆ, ಸಮಾರಂಭಗಳಲ್ಲಿ ಪಾಲ್ಗೊಳ್ಳುವಾಗ ಮಾಸ್ಕ್ ಧರಿಸಬೇಕು. ಹೃದಯ ಸಂಬಂಧಿತ ಅಥವಾ ಇತರೆ ತೀವ್ರ ಕಾಯಿಲೆಗಳಿರುವವರು ಹೆಚ್ಚು ಎಚ್ಚರಿಕೆಯಿಂದ ಇರಬೇಕು. ಸ್ಯಾನಿಟೈಸೇಷನ್ ಮಾಡಿಕೊಳ್ಳಬೇಕು.