ಮನೆ ಮನರಂಜನೆ ಕ್ಷಮೆ ಕೇಳದ ಕಮಲ್ ಹಾಸನ್‌ಗೆ ಕನ್ನಡಿಗರ ಕಿಡಿ: ‘ಥಗ್ ಲೈಫ್’ ಬಿಡುಗಡೆಗೆ ತಡೆ

ಕ್ಷಮೆ ಕೇಳದ ಕಮಲ್ ಹಾಸನ್‌ಗೆ ಕನ್ನಡಿಗರ ಕಿಡಿ: ‘ಥಗ್ ಲೈಫ್’ ಬಿಡುಗಡೆಗೆ ತಡೆ

0

ಬೆಂಗಳೂರು: ‘ತಮಿಳು ಭಾಷೆಯಿಂದ ಕನ್ನಡ ಹುಟ್ಟಿದ್ದು’ ಎಂದು ಹೇಳಿಕೆ ನೀಡಿಲ್ಲದೇ ತಪ್ಪೇ ಮಾಡಿಲ್ಲ, ಕ್ಷಮೆ ಕೇಳಲ್ಲ ಎಂದು ಪಟ್ಟು ಹಿಡಿದಿರೋ ಕಮಲ್ ಹಾಸನ್‌ ಕನ್ನಡಿಗರ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಇದೇ ಜೂನ್ 5ರಂದು ಬಿಡುಗಡೆಗೆ ಸಿದ್ಧವಾಗಿರುವ ‘ಥಗ್ ಲೈಫ್’ ಚಿತ್ರದ ಪ್ರದರ್ಶನಕ್ಕೆ ಬ್ಯಾನ್ ಬಿಸಿ ತಟ್ಟಿದೆ.

ಕನ್ನಡಪರ ಸಂಘಟನೆಗಳಾದ ಕರ್ನಾಟಕ ರಕ್ಷಣಾ ವೇದಿಕೆ, ಸೇರಿದಂತೆ ಹಲವು ಸಂಘಟನೆಗಳು ಚಿತ್ರ ಪ್ರದರ್ಶನದ ವಿರುದ್ಧ ಎಚ್ಚರಿಕೆ ನೀಡಿದ್ದಾರೆ. “ಕನ್ನಡಿಗರಿಗೇನಾದರೂ ಅಗೌರವ ತೋರಿದರೆ, ಸಹಿಸಲಿಕ್ಕೆ ಸಾಧ್ಯವಿಲ್ಲ” ಎಂದು ಅವರು ಘೋಷಿಸಿದ್ದಾರೆ. ಥಿಯೇಟರ್‌ ಮಾಲೀಕರಿಗೆ ಚಿತ್ರ ಪ್ರದರ್ಶನ ಮಾಡದಂತೆ ಸೂಚನೆ ನೀಡಲಾಗಿದೆ. “ಒಂದು ವೇಳೆ ಈ ಚಿತ್ರ ಬಿಡುಗಡೆ ಮಾಡಿದರೆ ಥಿಯೇಟರ್‌ಗಳಿಗೆ ಬೆಂಕಿ ಹಚ್ಚುವುದಕ್ಕೂ ತಯಾರಾಗಿದ್ದೇವೆ” ಎಂಬ ಕಠಿಣ ಎಚ್ಚರಿಕೆಯನ್ನು ಹಲವರು ನೀಡಿದ್ದಾರೆ.

ಈ ಎಲ್ಲಾ ಪರಿಣಾಮಗಳ ನಡುವೆಯೂ ನಟ ಕಮಲ್ ಹಾಸನ್ ತಮ್ಮ ಹೇಳಿಕೆಗೆ ಬದ್ಧರಾಗಿ ನಿಂತಿದ್ದಾರೆ. ಚೆನ್ನೈನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಕಮಲ್ ಹಾಸನ್, “ನಾನು ಕನ್ನಡಿಗರ ವಿರುದ್ಧ ಏನೂ ತಪ್ಪಾಗಿ ಮಾತನಾಡಿಲ್ಲ. ನಾನು ತಪ್ಪು ಮಾಡಿದರೆ ಖಂಡಿತ ಕ್ಷಮೆ ಕೇಳುತ್ತಿದ್ದೆ. ಆದರೆ ಈಗ ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ. ನನ್ನ ಹೇಳಿಕೆಗೆ ನಾನು ಬದ್ಧನಾಗಿದ್ದೇನೆ” ಎಂದಿದ್ದಾರೆ.

‘ಥಗ್ ಲೈಫ್’ ಚಿತ್ರವನ್ನು ರಾಜ್ಯದಲ್ಲಿ 100ಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ಬಿಡುಗಡೆ ಮಾಡಲು ಯೋಜನೆ ನಡೆದಿತ್ತು. ಚಿತ್ರ ಹಂಚಿಕೆದಾರರಾದ ವೆಂಕಟೇಶ್ ಈಗ ಹಿನ್ನಡೆಯ ಭೀತಿಯಿಂದ ಹಣ ವಾಪಸ್ ಕೊಡಲು ತಯಾರಾಗಿರುವ ಸುದ್ದಿಯೂ ಹರಿದಾಡುತ್ತಿದೆ. ರಿಲೀಸ್‌ಗೆ ಅಡ್ಡಿಯಾದ್ರೂ ಪರ್ವಾಗಿಲ್ಲ ನನ್ನ ಹೇಳಿಕೆಗೆ ಬದ್ಧನಾಗಿದ್ದೇನೆ ಎಂದ ಕಮಲ್ ಈಗಲಾದರೂ ತಪ್ಪು ಅರಿತು ಕ್ಷಮೆಯಾಚಿಸುತ್ತಾರಾ ಎಂದು ಕಾದುನೋಡಬೇಕಾಗಿದೆ.