ಮನೆ ಸ್ಥಳೀಯ ವ್ಯಾಪಕ ಮಳೆ: ಕಬಿನಿ ಭರ್ತಿಗೆ ಕೇವಲ ನಾಲ್ಕು ಅಡಿ ಬಾಕಿ

ವ್ಯಾಪಕ ಮಳೆ: ಕಬಿನಿ ಭರ್ತಿಗೆ ಕೇವಲ ನಾಲ್ಕು ಅಡಿ ಬಾಕಿ

0

ಮೈಸೂರು: ಕೇರಳದ ವೈನಾಡು ಭಾಗದಲ್ಲಿ ಆಗುತ್ತಿರುವ ವ್ಯಾಪಕ ಮಳೆಯ ಪರಿಣಾಮ, ಮೈಸೂರು ಜಿಲ್ಲೆಯ ಹೆಚ್‌.ಡಿ. ಕೋಟೆ ತಾಲ್ಲೂಕಿನ ಕಬಿನಿ ಜಲಾಶಯಕ್ಕೆ ನೀರಿನ ಒಳಹರಿವು ಗಣನೀಯವಾಗಿ ಹೆಚ್ಚಿದೆ. ಜಲಾಶಯವು ಇದೀಗ ತನ್ನ ಗರಿಷ್ಠ ಮಟ್ಟವಾದ 2284 ಅಡಿಗೆ ಕೇವಲ 4 ಅಡಿ ಮಾತ್ರ ಬಾಕಿ ಇದೆ.

  • ಗರಿಷ್ಠ ಮಟ್ಟ: 2284 ಅಡಿ
  • ಇಂದಿನ ನೀರಿನ ಮಟ್ಟ: 2280.67 ಅಡಿ
  • ಒಳ ಹರಿವು: 9024 ಕ್ಯೂಸೆಕ್
  • ಹೊರ ಹರಿವು: 8000 ಕ್ಯೂಸೆಕ್

ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ಒಂದಾದ ಕಬಿನಿ, ಪ್ರತಿ ವರ್ಷವೂ ರಾಜ್ಯದಲ್ಲಿ ಮೊಟ್ಟ ಮೊದಲಿಗೆ ತುಂಬುವ ಜಲಾಶಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಬಾರಿಯೂ ವಾಡಿಕೆಯಂತೆ ಮೊದಲನೆ ಸ್ಥಾನದಲ್ಲಿ ಭರ್ತಿಗೆ ತಲುಪಲಿದೆ ಎಂಬ ನಿರೀಕ್ಷೆ ಇದೆ.