ಮನೆ ಅಪರಾಧ ನಿವೃತ್ತ ಪೊಲೀಸ್ ಅಧಿಕಾರಿಗೆ ಬೆಂಕಿ ಹಚ್ಚಿ ಕೊಂದ ಬಾಡಿಗೆದಾರ ಮಹಿಳೆ!

ನಿವೃತ್ತ ಪೊಲೀಸ್ ಅಧಿಕಾರಿಗೆ ಬೆಂಕಿ ಹಚ್ಚಿ ಕೊಂದ ಬಾಡಿಗೆದಾರ ಮಹಿಳೆ!

0

ಒಡಿಶಾ: ಒಡಿಶಾ ರಾಜ್ಯದ ಬೆರ್ಹಾಂಪುರದಲ್ಲಿ ಈ ಹೃದಯವಿದ್ರಾವಕ ಘಟನೆ ನಡೆದಿದೆ. ನಿವೃತ್ತ ರಿಸರ್ವ್ ಇನ್‌ಸ್ಪೆಕ್ಟರ್ ಹರಿಹರ ಸಾಹು ಅವರನ್ನು ಅವರ ಮನೆಗೆ ಬಾಡಿಗೆಗೆ ಬಂದು ವಾಸಿಸುತ್ತಿದ್ದ ಮಹಿಳೆಯೊಬ್ಬಳು ಬೆಂಕಿ ಹಚ್ಚಿ ಕೊಲೆ ಮಾಡಿದ್ದಾಳೆ.

ಹರಿಹರ ಸಾಹು ಅವರು ನಿವೃತ್ತ ಪೊಲೀಸ್ ಅಧಿಕಾರಿಯಾಗಿದ್ದು, ತಮ್ಮ ಮನೆಯಲ್ಲಿಯೇ ಬಾಡಿಗೆಗೆ ವಾಸಿಸುತ್ತಿದ್ದ ಸುದೇಷ್ಣು ಜೇನಾ ಎಂಬ 55 ವರ್ಷದ ಮಹಿಳೆಯೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದರು. ಈ ಸಂಬಂಧದಲ್ಲಿ ಇತ್ತೀಚೆಗೆ ಉಂಟಾದ ಉದ್ವಿಗ್ನತೆ, ಜಗಳಗಳು, ದುರಾದೃಷ್ಟಕರ ಅಂತ್ಯಕ್ಕೆ ಕಾರಣವಾಗಿದೆ.

ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಘಟನೆ ನಡೆದ ದಿನ ಸುದೇಷ್ಣು ಅವರು ಸಾಹು ಅವರ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾಳೆ. ತೀವ್ರ ಸುಟ್ಟ ಗಾಯಗಳಿಂದ ಸಾಹು ಅವರನ್ನು ಮೊದಲು ಬೆರ್ಹಾಂಪುರದ ಎಂಕೆಸಿಜಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಅವರನ್ನು ಕಟಕ್‌ನ ಎಸ್‌ಸಿಬಿ ವೈದ್ಯಕೀಯ ಕಾಲೇಜಿಗೆ ಕರೆದೊಯ್ಯಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಪ್ರಾಣ ಬಿಟ್ಟಿದ್ದಾರೆ.

ಬೆರ್ಹಾಂಪುರ ಪೊಲೀಸ್ ವರಿಷ್ಠಾಧಿಕಾರಿ ಶ್ರವಣ್ ವಿವೇಕ್ ಎಂ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ, “ಈ ಕೊಲೆ ಪೂರ್ವನಿಯೋಜಿತವಾಗಿದ್ದು, ಆರೋಪಿಗೆ ಸಂಬಂಧಿತ ಎಲ್ಲಾ ಸಾಕ್ಷ್ಯಾಧಾರಗಳಿದ್ದಂತೆ ನಿಖರ ವಿಚಾರಣೆ ನಡೆಸಲಾಗಿದೆ. ಸುದೇಷ್ಣು ಜೇನಾ ಅವರೇ ಕೊಲೆ ನಡೆಸಿದ್ದು ಎಂಬುದನ್ನು ವಿಚಾರಣೆಯಲ್ಲಿ ತಾನೇ ಒಪ್ಪಿಕೊಂಡಿದ್ದಾಳೆ. ಕೊಲೆಗೂ ಮುನ್ನ ಎಣ್ಣೆ ತಯಾರಿ, ಸಮಯದ ಆಯ್ಕೆ ಮತ್ತು ಆತನ ಪತ್ನಿಯ ಅನುಪಸ್ಥಿತಿಯನ್ನೂ ಬಳಸಿಕೊಂಡಿದ್ದಾಳೆ.”

ಹರಿಹರ ಸಾಹು ಅವರ ಮಗಳು ತಕ್ಷಣವೇ ಪೊಲೀಸರಿಗೆ ದೂರು ಸಲ್ಲಿಸಿದ್ದಾಳೆ. ನೆರೆಹೊರೆಯವರು ಮತ್ತು ಕುಟುಂಬ ಸದಸ್ಯರಿಗೆ ಅವರ ನಡುವಿನ ಸಂಬಂಧ ಹದಗೆಟ್ಟಿರುವುದು ತಿಳಿದಿರಲಿಲ್ಲ ಎಂದು ವರದಿಯಾಗಿದೆ.