ಚಾಮರಾಜನಗರ: ಕೊಳ್ಳೇಗಾಲ ಪಟ್ಟಣದಲ್ಲಿ ೨೦೨೫-೨೬ನೇ ಶೈಕ್ಷಣಿಕ ಸಾಲಿನಿಂದ ನೂತನವಾಗಿ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಯನ್ನು ಪ್ರಾರಂಭಿಸಲಾಗುತ್ತಿದೆ. ಸದರಿ ವಸತಿ ಶಾಲೆಗೆ ಹತ್ತಿರವಿರುವ ೮೮೦ ಮೀಟರ್ ಅಳತೆಯ ಸುಸುಜ್ಜಿತ ಕಟ್ಟಡ ಬಾಡಿಗೆಗೆ ಅಗತ್ಯವಿದ್ದು, ಕಟ್ಟಡ ಮಾಲೀಕರಿಂದ ಅರ್ಜಿ ಆಹ್ವಾನಿಸಲಾಗಿದೆ.
ವಸತಿ ಶಾಲೆಗೆ ೨೦ ಕೊಠಡಿಗಳು, ೧೫ ಶೌಚಾಲಯ ಮತ್ತು ಸ್ನಾನಗೃಹಗಳು, ೧ ಡೈನಿಂಗ್ ಹಾಲ್, ೧ ಅಡುಗೆ ಕೋಣೆ, ೨೪*೭ ನೀರು ಹಾಗೂ ವಿದ್ಯುತ್ ಸರಬರಾಜು ವ್ಯವಸ್ಥೆ ಹೊಂದಿರುವ ಕಟ್ಟಡ ಅಗತ್ಯವಿದೆ.
ಕೊಳ್ಳೇಗಾಲ ಪಟ್ಟಣ ಮತ್ತು ಸುತ್ತಮುತ್ತಲ ೩ ಕಿ.ಮೀ ವ್ಯಾಪ್ತಿಯಲ್ಲಿನ ಆಸಕ್ತಿಯಿರುವ ಸ್ವಂತ ಕಟ್ಟಡ ಮಾಲೀಕರು ತಮ್ಮ ಕಟ್ಟಡದಲ್ಲಿನ ಮೂಲಭೂತ ಸೌಕರ್ಯಗಳ ಸಂಪೂರ್ಣ ಮಾಹಿತಿಯೊಂದಿಗೆ ನಗರದ ಜಿಲ್ಲಾಡಳಿತ ಭವನದ ಮಲ್ಟಿ ಪರ್ಪಸ್ ಹಾಲ್‌ನಲ್ಲಿರುವ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆÀಯ ಜಿಲ್ಲಾ ಅಧಿಕಾರಿಗಳ ಕಚೇರಿಗೆ ಜೂನ್ ೧೩ರೊಳಗೆ ಅರ್ಜಿ ಸಲ್ಲಿಸಬಹುದು ಎಂದು ಪ್ರಕಟಣೆ ತಿಳಿಸಿದೆ.














