ಮನೆ ಅಪರಾಧ 13 ವರ್ಷದ ಮಗಳ ಮೇಲೆಯೇ ಅತ್ಯಾಚಾರಕ್ಕೆ ಸಹಕಾರ: ಮಾಜಿ ಬಿಜೆಪಿ ನಾಯಕಿ ಅನಾಮಿಕಾ ಶರ್ಮಾ ಅರೆಸ್ಟ್!

13 ವರ್ಷದ ಮಗಳ ಮೇಲೆಯೇ ಅತ್ಯಾಚಾರಕ್ಕೆ ಸಹಕಾರ: ಮಾಜಿ ಬಿಜೆಪಿ ನಾಯಕಿ ಅನಾಮಿಕಾ ಶರ್ಮಾ ಅರೆಸ್ಟ್!

0

ಹರಿದ್ವಾರ: ಮಾನವೀಯತೆಯ ಮಟ್ಟವನ್ನು ಕುಗ್ಗಿಸುವಂತ ಘಟನೆ ಉತ್ತರಾಖಂಡದ ಹರಿದ್ವಾರದಲ್ಲಿ ಬೆಳಕಿಗೆ ಬಂದಿದೆ. ಪ್ರಪಂಚದಲ್ಲಿ ಕೆಟ್ಟ ಮಕ್ಕಳಿರುತ್ತಾರೆ, ಆದ್ರೆ ಕೆಟ್ಟ ತಾಯಿ ಇರುವುದಿಲ್ಲ ಎಂಬ ಮಾತಿಗೆ ಅಪಚಾರವೆಂಬಂತೆ, ತನ್ನ ಬಾಯ್‌ಫ್ರೆಂಡ್ ಹಾಗೂ ಆತನ ಸ್ನೇಹಿತನಿಂದಲೇ ಸ್ವಂತ ಅಪ್ರಾಪ್ತ ಮಗಳ ಮೇಲೆಯೇ ಅತ್ಯಾಚಾರ ಮಾಡಿಸಿರುವ ಘಟನೆ ನಡೆದಿದೆ.

2024ರ ಜನವರಿಯಿಂದ ಮಾರ್ಚ್ ತಿಂಗಳವರೆಗೆ, ಅನಾಮಿಕಾ ತನ್ನ ಪ್ರೇಮಿ ಸುಮಿತ್ ಪತ್ವಾಲ್ ಮತ್ತು ಆತನ ಸ್ನೇಹಿತ ಶುಭಂ ಸಹಿತವಾಗಿ, ತಮ್ಮ ಮಗಳ ಮೇಲೆ ಅತ್ಯಾಚಾರ ನಡೆಸಲು ಸಹಾಯ ಮಾಡಿದ್ದಾಳೆ ಎಂದು ಪೊಲೀಸ್ ವರದಿಗಳು ಹೇಳಿವೆ. ಈ ದುಷ್ಕರ್ಮಗಳು ಹರಿದ್ವಾರ, ಬೃಂದಾವನ, ಮತ್ತು ಆಗ್ರಾಗಳಲ್ಲಿ ನಡೆದಿದ್ದು, ಈ ವಿಷಯವನ್ನ ತಂದೆಗೆ ಹೇಳದಂತೆ ಬೆದರಿಕೆಯೂ ಹಾಕಿದ್ದಳು ಎಂದು ವರದಿಗಳಿಂದ ತಿಳಿದುಬಂದಿದೆ.

ಈ ಪ್ರಕರಣ ಸಂಬಂಧ ಆರೋಪಿಗಳಾದ ಅನಾಮಿಕಾ ಶರ್ಮಾ, ಸುಮಿತ್ ಪತ್ವಾಲ್ ಮತ್ತು ಶುಭಂ ಅವರನ್ನು ಈಗಾಗಲೇ ಹರಿದ್ವಾರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಅನಾಮಿಕಾ ಶರ್ಮಾ 2024ರ ವರೆಗೆ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆಯಾಗಿದ್ದಳು. ನಂತರ ಪಕ್ಷದ ಸದಸ್ಯೆ ಆಗಿ ಮುಂದುವರಿದಿದ್ದಳು. ಅನಾಮಿಕಾ, ಗಂಡನಿಂದ ಬೇರ್ಪಟ್ಟಿದ್ದ ಬಳಿಕ ಮಗಳು ತಮ್ಮ ತಂದೆಯೊಂದಿಗೆ ವಾಸವಾಗಿದ್ದಳು ಮತ್ತು ಅಪರೂಪಕ್ಕೆ ಮಾತ್ರ ತಾಯಿಯ ಬಳಿಗೆ ಬರುತ್ತಿದ್ದಳು.

ಈ ವೇಳೆ ಅನಾಮಿಕಾ, ಸುಮಿತ್‌ನ ಪ್ರೇಮ ಸಂಪಾದಿಸಿ ಆತನ ಹೋಟೆಲ್‌ನಲ್ಲಿಯೇ ಉಳಿದುಕೊಂಡಿದ್ದಳು. ಈ ಸಮಯದಲ್ಲಿ ಈ ಕೃತ್ಯಗಳು ನಡೆದಿವೆ. ದುರಂತದ ಸಂಪೂರ್ಣ ಸತ್ಯವನ್ನು ಬಾಲಕಿ ತನ್ನ ತಂದೆಗೆ ವಿವರಿಸಿದ ನಂತರ, ಕೂಡಲೇ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.

ಈ ಭೀಕರ ಪ್ರಕರಣ ಬೆಳಕಿಗೆ ಬಂದ ಬಳಿಕ, ಬಿಜೆಪಿ ಪಕ್ಷ ಕೂಡ ತೀವ್ರವಾಗಿ ಪ್ರತಿಕ್ರಿಯಿಸಿದ್ದು, ಅನಾಮಿಕಾವನ್ನು ತಕ್ಷಣವೇ ಪಕ್ಷದಿಂದ ವಜಾ ಮಾಡಿದೆ.