ಬೆಂಗಳೂರು: ಕೆಐಎಡಿಬಿನಲ್ಲಿ ಸ್ಕೆಚ್‌ಗೆ ಅನುಮೋದನೆ ನೀಡುವ ಹೆಸರಲ್ಲಿ ₹1.50 ಲಕ್ಷ ಲಂಚವನ್ನು ಸ್ವೀಕರಿಸುತ್ತಿದ್ದ ಸರ್ವೆ ಸೂಪರ್‌ವೈಸರ್ ನರೇಂದ್ರ ಕುಮಾರ್ ಅವರನ್ನು ಲೋಕಾಯುಕ್ತ ಪೊಲೀಸರು ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾರೆ.
ರವಿ ಎಂಬುವವರು ಕೆಐಎಡಿಬಿಗೆ ಸ್ಕೆಚ್ ಸಲ್ಲಿಸಿದ್ದರು. ಈ ಅರ್ಜಿಗೆ ಅನುಮೋದನೆ ನೀಡುವಂತೆ ಕೇಳಿದಾಗ, ಸರ್ವೆ ಸೂಪರ್‌ವೈಸರ್ ನರೇಂದ್ರ ಕುಮಾರ್ ₹1.50 ಲಕ್ಷ ಲಂಚದ ಬೇಡಿಕೆ ಇಟ್ಟಿದ್ದರು. ಲಂಚದ ಬೇಡಿಕೆಯಿಂದ ತೀವ್ರ ಬೇಸರಗೊಂಡ ರವಿ, ಲೋಕಾಯುಕ್ತ ಪೊಲೀಸ್ ಇಲಾಖೆಗೆ ದೂರು ಸಲ್ಲಿಸಿದರು.
ಲೋಕಾಯುಕ್ತ ಎಸ್ಪಿ ಡಾ. ವಂಶಿ ಕೃಷ್ಣ ಅವರ ಮಾರ್ಗದರ್ಶನದಲ್ಲಿ, ಪಿಎಸ್‌ಐ ಅನೀಲ್ ಕುಮಾರ್, ಪ್ರಶಾಂತ್ ಮತ್ತು ಅಂಜನ್ ಕುಮಾರ್ ನೇತೃತ್ವದ ತಂಡ, ಕಾರ್ಯಾಚರಣೆ ನಡೆಸಿ, ಲಂಚದ ಹಣವನ್ನು ಸ್ವೀಕರಿಸುತ್ತಿದ್ದ ವೇಳೆಯಲ್ಲೇ ನರೇಂದ್ರ ಕುಮಾರ್ ಅವರನ್ನು ಬಂಧಿಸಿದೆ.
ಈ ಸಂಬಂಧ ಲೋಕಾಯುಕ್ತ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಆರಂಭಿಸಿದ್ದಾರೆ.














