ಮೈಸೂರು: “ಇಷ್ಟು ದಿನ ಹಿಂದೂ ವಿರೋಧಿಯಾಗಿದ್ದ ಸಿದ್ದರಾಮಯ್ಯ ಇದೀಗ ಪೊಲೀಸ್ ಇಲಾಖೆ ವಿರೋಧಿಯಾಗಿದ್ದಾರಾ?” ಎಂಬ ಗುಡುಗು ಪ್ರಶ್ನೆಯನ್ನು ಮಾಜಿ ಸಂಸದ ಪ್ರತಾಪ್ ಸಿಂಹ ಎಸೆದಿದ್ದಾರೆ. ಹಿಂದುಳಿದವರ ಉದ್ಧಾರಕ ಎಂದು ಹೇಳುವ ಸಿಎಂ ವಾಲ್ಮೀಕಿ ಸಮುದಾಯದ ನಿಷ್ಠಾವಂತ ಅಧಿಕಾರಿ ದಯಾನಂದ್ ರನ್ನ ಯಾಕೆ ಟಾರ್ಗೆಟ್ ಮಾಡಿದ್ದಾರೆ? ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಪ್ರಶ್ನಿಸಿದ್ದಾರೆ.
ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವಾಲ್ಮೀಕಿ ಸಮುದಾಯದ ಹಿರಿಯ ಸಮರ್ಥ, ನಿಷ್ಠಾವಂತ ಪೊಲೀಸ್ ಅಧಿಕಾರಿ ದಯಾನಂದ್ ರನ್ನು ಟಾರ್ಗೆಟ್ ಮಾಡಿರುವ ಸಿಎಂ ಸಿದ್ದರಾಮಯ್ಯನವರಿಗೆ ನಾಯಕ ಸಮುದಾಯದ ವ್ಯಕ್ತಿ ಮೇಲೆ ಯಾಕೆ ಇಷ್ಟು ಕೋಪ. ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪೋಲೀಸ್ ಇಲಾಖೆ ಅನ್‌ಫಿಟ್ ಅಲ್ಲ, ಸರ್ಕಾರವೇ ಅನ್‌ಫಿಟ್ ಆಗಿದೆ ಎಂದು ಗಂಭೀರವಾಗಿ ಟೀಕಿಸಿರುವ ಅವರು, “ಘಟನೆ ನಡೆದೂ ಒಂದು ವಾರವಾಗಿದ್ದು, ಸಿಎಂ ಸಿದ್ಧರಾಮಯ್ಯ ಯಾವುದೇ ನೈತಿಕ ಹೊಣೆವಹಿಸಿಲ್ಲ. ಸಿಎಂ ನಾಲ್ಕು ಹನಿ ಕಣ್ಣೀರು ಹಾಕಿಲ್ಲ. ಅನುಕಂಪ, ಪಶ್ಚಾತ್ತಾಪದ ಮಾತು ಬಂದಿಲ್ಲ.
ಕಾಲ್ತುಳಿತದ ಬೆಳವಣಿಗೆಗಳ ಕುರಿತು ಗಂಭೀರ ಪ್ರಶ್ನೆಗಳು:
- ಸಿಎಂಗೆ ಕಾಲ್ತುಳಿತದ ವಿಚಾರಕ್ಕೆ ತಿಳಿಯಲು ಎರಡು ಗಂಟೆ ತಡವಾಯಿತು ಎಂದಾದರೆ, ರಾಜ್ಯವನ್ನು ಹೇಗೆ ನಿಭಾಯಿಸುತ್ತಿದ್ದಾರೆ?
- ರಾಜಕೀಯ ಕಾರ್ಯದರ್ಶಿ ಗೋವಿಂದರಾಜ್‌ರನ್ನು ಯಾಕೆ ತೆಗೆದುಹಾಕಿದರು? ಇದರ ಹಿಂದಿನ ಸತ್ಯ ಏನು?
- ಎಸ್. ಸತ್ಯವತಿ ಅವರು ಯಾಕೆ ಒತ್ತಡ ಹೇರಿ ಕಾರ್ಯಕ್ರಮ ಮಾಡಿಸಿದರು?
- ಎಸ್. ಸತ್ಯವತಿ ಅವರು ಅಭಿಮಾನಿಗಳಿಗೆ ಚಿನ್ನಸ್ವಾಮಿ ಸ್ಟೇಡಿಯಂಗೆ ಹೋಗಿ ಎಂದು ಸೂಚಿಸಿದ್ದೇಕೆ? ಅವರನ್ನು ಇನ್ನೂ ನೀವು ಸಂಸ್ಪೆಡ್ ಮಾಡಿಲ್ಲ? ಯಾರನ್ನ ರಕ್ಷಣೆ ಮಾಡುತ್ತಿದ್ದಿರಿ?
ಎಂದು ಪ್ರಶ್ನೆಗಳ ಮಳೆ ಸುರಿಸಿದ್ದಾರೆ.














