ಮನೆ ಕಾನೂನು ಕೋಲಾರ : 20 ಸಾವಿರ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಪಿಎಸ್ಐ ಹಾಗು...

ಕೋಲಾರ : 20 ಸಾವಿರ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಪಿಎಸ್ಐ ಹಾಗು ಕಾನ್ಸ್‌ಟೇಬಲ್

0

ಕೋಲಾರ: ಲೋಕಾಯುಕ್ತ ಪೊಲೀಸರ ದಾಳಿಯಿಂದ ಕೋಲಾರ ಜಿಲ್ಲೆಯಲ್ಲಿ ಎರಡು ಪೊಲೀಸ್ ಅಧಿಕಾರಿಗಳು ಬಲೆಗೆ ಬಿದ್ದಿದ್ದಾರೆ. ಮುಳಬಾಗಿಲು ತಾಲೂಕಿನ ನಂಗಲಿ ಪೊಲೀಸ್ ಠಾಣೆಯ ಪಿಎಸ್ಐ ಅರ್ಜುನ್ ಗೌಡ ಹಾಗೂ ಕಾನ್ಸ್‌ಟೇಬಲ್ ಸುರೇಶ್ ಬಾರ್ ಮಾಲೀಕರೊಬ್ಬರ ಬಳಿ 20,000 ರೂಪಾಯಿ ಲಂಚ ಸ್ವೀಕರಿಸುತ್ತಿದ್ದ ಸಂದರ್ಭದಲ್ಲಿ ರೆಡ್ ಹ್ಯಾಂಡ್ ಆಗಿ ಹಿಡಿಯಲ್ಪಟ್ಟಿದ್ದಾರೆ.

ಮೂಲಗಳ ಪ್ರಕಾರ, ನಂಗಲಿ ಪಟ್ಟಣದಲ್ಲಿರುವ ಬಾರ್ ಮಾಲೀಕ ಪ್ರಶಾಂತ್ ಅವರಿಂದ ₹50,000 ಲಂಚಕ್ಕೆ ಬೇಡಿಕೆ ಇಡಲಾಗಿತ್ತು. ಈ ಬೇಡಿಕೆಯಲ್ಲಿ ಮೊದಲ ಹಂತವಾಗಿ ₹20,000 ಮೊತ್ತವನ್ನು ಮುಂಗಡವಾಗಿ ನೀಡಲು ಒತ್ತಡ ಹಾಕಲಾಗಿತ್ತು. ಮಾಹಿತಿ ಪಡೆದ ಲೋಕಾಯುಕ್ತ ಅಧಿಕಾರಿಗಳು, ಲಂಚ ಹಣದ ಸ್ವೀಕೃತಿ ವೇಳೆ ಪಿಎಸ್ಐ ಅರ್ಜುನ್ ಗೌಡನನ್ನು ಬಂಧಿಸಿದ್ದಾರೆ.

ಘಟನೆಯ ಬಳಿಕ ಲೋಕಾಯುಕ್ತ ಪೊಲೀಸರು ಅರ್ಜುನ್ ಗೌಡನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಕಾನ್ಸ್ಟೇಬಲ್ ಸುರೇಶ್ ವಿರುದ್ಧವೂ ತನಿಖೆ ಮುಂದುವರೆದಿದ್ದು, ಈತನ ಮೇಲೂ ಕಾನೂನು ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.