ಮನೆ ರಾಷ್ಟ್ರೀಯ ಅಹಮದಾಬಾದ್ ವಿಮಾನ ದುರಂತ ; ಕರ್ನಾಟಕ ಮೂಲಕ ಕೋ ಪೈಲಟ್ ‘ಕ್ಲೈವ್ ಕುಂದರ್’ ದುರ್ಮರಣ

ಅಹಮದಾಬಾದ್ ವಿಮಾನ ದುರಂತ ; ಕರ್ನಾಟಕ ಮೂಲಕ ಕೋ ಪೈಲಟ್ ‘ಕ್ಲೈವ್ ಕುಂದರ್’ ದುರ್ಮರಣ

0

ಅಹಮದಾಬಾದ್ : ಗುಜರಾತ್’ನ ಅಹಮದಾಬಾದ್ ವಿಮಾನ ನಿಲ್ದಾಣದ ಬಳಿ ಏರ್ ಇಂಡಿಯಾ ವಿಮಾನ ಘೋರ ಅಪಘಾತಕ್ಕೀಡಾಗಿದ್ದು, ಇದ್ರಲ್ಲಿದ್ದ ಎಲ್ಲಾ 242 ಜನರು ಸಾವನ್ನಪ್ಪಿದ್ದಾರೆ. ಈ ಪೈಕಿ ವಿಮಾನದಲ್ಲಿ ಕೋ ಪೈಲಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಕರ್ನಾಟಕ ಮೂಲಕ ಕ್ಲೈವ್ ಕುಂದರ್ ಕೂಡ ಸಾವನ್ನಪ್ಪಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಅಹಮದಾಬಾದ್’ನಿಂದ ಲಂಡನ್’ಗೆ ಪ್ರಯಾಣ ಬೆಳೆಸುತ್ತಿದ್ದ ಈ ವಿಮಾನದಲ್ಲಿ ಗುಜರಾತ್‌’ನ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಸೇರಿ ಎಲ್ಲಾ 242 ಜನರು ಇದ್ದರು. ದುರದೃಷ್ಟವಾಶತ್ ವಿಮಾನದಲ್ಲಿದ್ದ ಎಲ್ಲರೂ ಸಾವನ್ನಪ್ಪಿದ್ದಾರೆ ಎಂದು ಅಹಮದಾಬಾದ್ ಪೊಲೀಸ್ ಆಯುಕ್ತರಾದ ಜ್ಞಾನೆಂದ್ರ ಸಿಂಗ್ ಮಲಿಕ್ ಈ ಮಾಹಿತಿ ನೀಡಿದ್ದಾರೆ.

232 ಪ್ರಯಾಣಿಕರು ಮತ್ತು 10 ಸಿಬ್ಬಂದಿಯನ್ನು ಹೊತ್ತ ಏರ್ ಇಂಡಿಯಾ ವಿಮಾನ ಮಧ್ಯಾಹ್ನ 1.17 ಕ್ಕೆ ಲಂಡನ್‌’ಗೆ ಹೊರಟಾಗ ಈ ಘಟನೆ ಸಂಭವಿಸಿದೆ.

ವಿಮಾನದಲ್ಲಿ 169 ಭಾರತೀಯರು, 53 ಬ್ರಿಟಿಷ್ ಪ್ರಜೆಗಳು, 7 ಪೋರ್ಚುಗೀಸರು ಮತ್ತು ಒಬ್ಬ ಕೆನಡಾದ ಪ್ರಯಾಣಿಕ ಇದ್ದರು. ಅಹಮದಾಬಾದ್‌ನ ಮೇಘನಿನಗರ ಪ್ರದೇಶದ ಬಳಿಯ ಧಾರ್ಪುರದಿಂದ ದಟ್ಟ ಹೊಗೆ ಕಾಣಿಸಿಕೊಂಡಿತ್ತು. ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸಿದ್ದು, ತುರ್ತು ಪ್ರತಿಕ್ರಿಯೆ ತಂಡಗಳನ್ನ ನಿಯೋಜಿಸಲಾಯ್ತು. ಅಪಘಾತದ ಕಾರಣವನ್ನು ಅಧಿಕಾರಿಗಳು ಇನ್ನೂ ದೃಢಪಡಿಸಿಲ್ಲ.