ಮನೆ ಸುದ್ದಿ ಜಾಲ ಸಿಎಂ ಸಿದ್ದರಾಮಯ್ಯ ಮನೆ ಬಳಿಯೇ ಹಾಡಹಗಲೇ ಕಳ್ಳತನ : ಸಿಸಿಟಿವಿಯಲ್ಲಿ ಕಳ್ಳನ ಕೈಚಳಕ ಸೆರೆ!

ಸಿಎಂ ಸಿದ್ದರಾಮಯ್ಯ ಮನೆ ಬಳಿಯೇ ಹಾಡಹಗಲೇ ಕಳ್ಳತನ : ಸಿಸಿಟಿವಿಯಲ್ಲಿ ಕಳ್ಳನ ಕೈಚಳಕ ಸೆರೆ!

0

ಬೆಂಗಳೂರು: ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿವಾಸದ ಸಮೀಪದ ಪ್ರದೇಶದಲ್ಲಿ ಹಾಡಹಗಲೇ ಕಳ್ಳತನ ನಡೆದಿದೆ. ಇದು ಸಿಎಂ ನಿವಾಸದಿಂದ ಕೇವಲ ಕೂಗಳತೆ ದೂರದಲ್ಲಿದೆ.

ಘಟನೆ ಕುಮಾರ ಕೃಪಾ ವೆಸ್ಟ್ ಪ್ರದೇಶದಲ್ಲಿ ನಡೆದಿದೆ. ಖದೀಮನೊಬ್ಬ ಹಾಡಹಗಲೇ ಕಂಪೌಂಡ್ ಜಿಗಿದು ಸಂಪ್ ಮುಚ್ಚಳವನ್ನು ಖದೀಮ ಕಳ್ಳತನ ಮಾಡಿದ್ದಾನೆ. ಕಳ್ಳತನ ಮಾಡಿದ್ದ ಸಂಪ್ ಮುಚ್ಚಳವನ್ನ ಮನೆಯ ಮರೆಯಲ್ಲಿಟ್ಟಿದ್ದ ಆರೋಪಿ, ಜನರ ಓಡಾಟ ಕಡಿಮೆಯಾದ ನಂತರ ಕದ್ದೊಯ್ದಿದ್ದಾನೆ. ಕಳ್ಳನ ಕೈಚಳಕ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಈ ದುಸ್ಸಾಹಸ ಭರಿತ ಕೃತ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸಂಪೂರ್ಣವಾಗಿ ಸೆರೆಯಾಗಿದ್ದು, ಈಗ ಅದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಈ ಘಟನೆ ಹೈಗ್ರೌಂಡ್ಸ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಂಭವಿಸಿದ್ದು, ಸ್ಥಳೀಯ ಪೊಲೀಸರು ಕಳ್ಳನ ಗುರುತು ಪತ್ತೆ ಹಚ್ಚುವಲ್ಲಿ ತೊಡಗಿದ್ದಾರೆ.