ಮನೆ ಆರೋಗ್ಯ ಭಾರತದಲ್ಲಿ ಸಕ್ರಿಯ ಕೋವಿಡ್ ಪ್ರಕರಣ 7,400 ಕ್ಕೆ ಏರಿಕೆ, ಕರ್ನಾಟಕದಲ್ಲೂ ಏರಿಕೆ

ಭಾರತದಲ್ಲಿ ಸಕ್ರಿಯ ಕೋವಿಡ್ ಪ್ರಕರಣ 7,400 ಕ್ಕೆ ಏರಿಕೆ, ಕರ್ನಾಟಕದಲ್ಲೂ ಏರಿಕೆ

0

ನವದೆಹಲಿ: ಭಾರತದಲ್ಲಿ ಕೋವಿಡ್ ಸಕ್ರಿಯ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಹೋಗುತ್ತಿವೆ. ಹೀಗಾಗಿ, ಸಕ್ರಿಯ ಪ್ರಕರಣಗಳ ಸಂಖ್ಯೆ 7,400ಕ್ಕೆ ತಲುಪಿದೆ. ಕಳೆದ 24 ಗಂಟೆಗಳಲ್ಲಿ ದೇಶಾದ್ಯಾಂತ 269 ಹೊಸ ಕೋವಿಡ್ ಪ್ರಕರಣಗಳು ವರದಿ ಆಗಿದ್ದು, ಒಂಬತ್ತು ಜನರು ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಇಂದು ಪ್ರಕಟಣೆ ಮಾಡಿದೆ.

ಕರ್ನಾಟಕದಲ್ಲಿ ಒಂದೇ ದಿನ 132 ಹೊಸ ಸಕ್ರಿಯ ಕೋವಿಡ್ ಪ್ರಕರಣಗಳು ದೃಢಪಟ್ಟಿವೆ. ದೇಶಾದ್ಯಾಂತ, ಗುಜರಾತ್ (79), ಕೇರಳ (54) ಮತ್ತು ಮಧ್ಯಪ್ರದೇಶ (20) ನಂತರವು ಕರ್ನಾಟಕದಲ್ಲಿ (527) ಅತಿ ಹೆಚ್ಚು ಸಕ್ರಿಯ ಪ್ರಕರಣಗಳು ವರದಿಯಾಗಿವೆ.

ಸಿಕ್ಕಿಂ (11), ತಮಿಳುನಾಡು (12), ಮತ್ತು ಹರಿಯಾಣ (9) ದೇಶಾದ್ಯಾಂತ ಈ 24 ಗಂಟೆಗಳಲ್ಲಿ ಸ್ವಲ್ಪ ಮಟ್ಟಿಗೆ ಸಕ್ರಿಯ ಕೋವಿಡ್ ಪ್ರಕರಣಗಳಲ್ಲಿ ಏರಿಕೆಯನ್ನು ಕಂಡಿವೆ. ಇನ್ನು, ಅರುಣಾಚಲ ಪ್ರದೇಶ, ಚಂಡೀಗಢ, ಲಡಾಖ್, ಮಿಜೋರಾಂ, ಪಂಜಾಬ್ ಮತ್ತು ಪಶ್ಚಿಮ ಬಂಗಾಳಗಳಲ್ಲಿ ಈ ಅವಧಿಯಲ್ಲಿ ಯಾವುದೇ ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿಲ್ಲ.

ಕಳೆದ 24 ಗಂಟೆಗಳಲ್ಲಿ, ಮಹಾರಾಷ್ಟ್ರದಲ್ಲಿ 4, ಕೇರಳದಲ್ಲಿ 3, ರಾಜಸ್ಥಾನ ಮತ್ತು ತಮಿಳುನಾಡಿನಲ್ಲಿ ತಲಾ 1 ಸಾವನ್ನಪ್ಪಿದ್ದಾರೆ. ಇದರೊಂದಿಗೆ, ಜನವರಿ 1, 2025 ರ ವೇಳೆಗೆ ದೇಶಾದ್ಯಾಂತ ಕೋವಿಡ್ ನಿಂದ 87 ಜನರು ಸಾವನ್ನಪ್ಪಿದ್ದಾರೆ.

ಕಳೆದ 24 ಗಂಟೆಗಳಲ್ಲಿ 991 ಜನರು ಕೋವಿಡ್ ನಿಂದ ಚೇತರಿಸಿಕೊಂಡಿದ್ದು, ಒಟ್ಟು ಚೇತರಿಕೆಯ ಸಂಖ್ಯೆ 11,967 ಕ್ಕೆ ತಲುಪಿದೆ.

ಕೇರಳವು ಅತ್ಯಧಿಕ ಸಕ್ರಿಯ ಕೋವಿಡ್ ಪ್ರಕರಣಗಳನ್ನು ಹೊಂದಿರುವ ರಾಜ್ಯವಾಗಿದೆ, ಇಲ್ಲಿಯವರೆಗೆ 2,109 ಸಕ್ರಿಯ ಪ್ರಕರಣಗಳು ಇದ್ದು, ಇನ್ನು ಗುಜರಾತ್ (1,437) ಮತ್ತು ದೆಹಲಿ (672) ಹೆಚ್ಚು ಸಕ್ರಿಯ ಪ್ರಕರಣಗಳು ಹೊಂದಿರುವ ರಾಜ್ಯಗಳಾಗಿವೆ.