ಮನೆ ಅಪರಾಧ ಮಹಿಳೆಯ ನಗ್ನ ವಿಡಿಯೋ ರೆಕಾರ್ಡ್ ಮಾಡಿ ಬ್ಲ್ಯಾಕ್‌ಮೇಲ್: ಪ್ರತಿಷ್ಠಿತ ದೇವಾಲಯದ ಅರ್ಚಕನ ಬಂಧನ

ಮಹಿಳೆಯ ನಗ್ನ ವಿಡಿಯೋ ರೆಕಾರ್ಡ್ ಮಾಡಿ ಬ್ಲ್ಯಾಕ್‌ಮೇಲ್: ಪ್ರತಿಷ್ಠಿತ ದೇವಾಲಯದ ಅರ್ಚಕನ ಬಂಧನ

0

ಬೆಂಗಳೂರು: ಧಾರ್ಮಿಕ ಸ್ಥಳಗಳಲ್ಲಿ ಜನರ ನಂಬಿಕೆಯನ್ನು ದುರ್ಬಳಕೆಮಾಡಿ ಮಹಿಳೆಯ ಶೋಷಣೆಗೆ ಮುಂದಾದ ಕೇರಳದ ದೇವಾಲಯದ ಅರ್ಚಕನೊಬ್ಬನನ್ನು ಬೆಂಗಳೂರು ಪೊಲೀಸರು ಬಂಧಿಸಿರುವ ಘಟನೆ ಬೆಳಕಿಗೆ ಬಂದಿದೆ. ತ್ರಿಶೂರ್ ಜಿಲ್ಲೆಯ ಪ್ರತಿಷ್ಠಿತ ಪೆರಿಗೊಟ್ಟುಕ್ಕಾರ ದೇವಾಲಯದ ಅರ್ಚಕ ಅರುಣ್ ಎಂಬಾತನನ್ನು ಬೆಳ್ಳಂದೂರು ಪೊಲೀಸರು ಬಂಧಿಸಿದ್ದಾರೆ. ಈ ಅರ್ಚಕ ಮಹಿಳೆಯೊಬ್ಬರ ನಗ್ನ ವಿಡಿಯೋವನ್ನು ರೆಕಾರ್ಡ್ ಮಾಡಿರುವುದಲ್ಲದೆ, ಅದನ್ನು ಬ್ಲ್ಯಾಕ್‌ಮೇಲ್‌ ಮಾಡಲು ಬಳಸುತ್ತಿದ್ದ.

ಬಳ್ಳಾರಿಯ ಮೂಲದ ಈ ಮಹಿಳೆ ಮಾಟಮಂತ್ರ ಪರಿಹಾರಕ್ಕಾಗಿ ದೇವಾಲಯಕ್ಕೆ ಭೇಟಿ ನೀಡಿದ್ದರು. ದೇವಾಲಯದ ಅರ್ಚಕ ಅರುಣ್ ಪರಿಚಯವಾಯಿತು. ಅರ್ಚಕನು ₹24,000 ರೂಪಾಯಿ ಪಾವತಿಸಿದರೆ ವಿಶೇಷ ಪೂಜೆ ಮಾಡಿ ಮಾಟದಿಂದ ಬಿಡುಗಡೆ ಮಾಡುತ್ತೇನೆ ಎಂದು ಆಶ್ವಾಸನೆ ನೀಡಿದ್ದ. ಪೂಜೆಗಾಗಿ ಸಮಯ ನಿಗದಿಪಡಿಸಿ ಮಹಿಳೆಯ ಮೊಬೈಲ್ ಸಂಖ್ಯೆಯನ್ನು ಪಡೆದುಕೊಂಡಿದ್ದ ಅರ್ಚಕ, ಬಳಿಕ ನಿರಂತರವಾಗಿ ವಾಟ್ಸಪ್ ಕರೆಗಳನ್ನು ಮಾಡುತ್ತಿದ್ದ.

ಅನುಚಿತವಾಗಿ ರಾತ್ರಿ ವೇಳೆ ಕಿರುಕುಳ ನೀಡಿದ ಅರ್ಚಕ, ತಾನೇ ಬೆತ್ತಲೆಯಾಗಿ ವಿಡಿಯೋ ಕರೆ ಮಾಡುತ್ತಿದ್ದ. ಇನ್ನು ಮುಂದೆ ಮಾಟದಿಂದ ಪೂರ್ಣವಾಗಿ ಬಿಡುಗಡೆ ಬೇಕಾದರೆ ನೀವೂ ಸಂಪೂರ್ಣ ಬೆತ್ತಲಾಗಬೇಕು ಎಂಬ ಬಲವಂತ ಒಡ್ಡಿದ. ಮಹಿಳೆ ಇದನ್ನು ನಿರಾಕರಿಸಿದಾಗ, “ನಿಮ್ಮ ಮಕ್ಕಳಿಬ್ಬರೂ ಸಾಯುವಂತೆ ರಿಟರ್ನ್ ಪೂಜೆ ಮಾಡುತ್ತೇನೆ” ಎಂಬ ಬೆದರಿಕೆ ನೀಡಿದ. ಈ ರೀತಿಯ ಬಲವಂತದಿಂದ ಮಹಿಳೆ ಕೊನೆಗೆ ಬೆತ್ತಲಾಗುವ ಅನುಚಿತ ಸ್ಥಿತಿಗೆ ಬಿದ್ದಳು. ಈ ಸಂದರ್ಭದಲ್ಲಿ ಅರ್ಚಕ ಆ ದೃಶ್ಯವನ್ನು ವಿಡಿಯೋದಲ್ಲಿ ರೆಕಾರ್ಡ್ ಮಾಡಿಕೊಂಡ.

ಬಳಿಕ ಈ ನಗ್ನ ವಿಡಿಯೋವನ್ನು ಬ್ಲ್ಯಾಕ್‌ಮೇಲ್ ಮಾಡಲು ಉಪಯೋಗಿಸಿ, “ನೀನು ಕೇರಳಕ್ಕೆ ಬಾ, ನಾನು ರೂಮ್ ಬುಕ್ ಮಾಡ್ತೀನಿ” ಎಂದು ಒತ್ತಾಯಿಸುತ್ತಿದ್ದ. ಆಕೆ ಎಷ್ಟೇ ನಿರಾಕರಿಸಿದರೂ ಅಶ್ಲೀಲ ಸಂದೇಶ, ಕರೆಗಳ ಮೂಲಕ ಮಹಿಳೆಯನ್ನು ಬಲವಂತ ಪಡಿಸುತ್ತಿದ್ದ. ದಿನೇದಿನೇ ಈ ಕಿರುಕುಳ ತೀವ್ರಗೊಂಡ ಪರಿಣಾಮ ಮಹಿಳೆ ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಲು ಮುಂದಾದರು.

ಈ ಪ್ರಕರಣದ ಹಿನ್ನೆಲೆಯಲ್ಲಿ ಪೊಲೀಸರು ಅರ್ಚಕ ಅರುಣ್ ಅವರನ್ನು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಇನ್ನೊಬ್ಬ ಮುಖ್ಯ ಅರ್ಚಕ ಉನ್ನಿ ದಾಮೋದರ್ ಕೂಡ ಒಳಗೊಂಡಿದ್ದು, ಅವರು ಪ್ರಕರಣ ಹೊರಬಿದ್ದ ನಂತರ ಪರಾರಿಯಾಗಿದ್ದಾರೆ. ಈಗ ಪೊಲೀಸರು ಅವರ ಪತ್ತೆಗೆ ಬಲೆ ಬೀಸಿದ್ದಾರೆ. ಮಹಿಳೆ ನೀಡಿದ ದೂರುದಲ್ಲಿ ಅಸಭ್ಯ ವರ್ತನೆ, ಅತ್ಯಾಚಾರ ಯತ್ನ, ಮತ್ತು ಬ್ಲ್ಯಾಕ್‌ಮೇಲ್ ಸೇರಿದಂತೆ ಹಲವು ಗಂಭೀರ ಆರೋಪಗಳಿವೆ.