ಮನೆ ರಾಜ್ಯ ಅಗ್ನಿಪಥ್ ಯೋಜನೆಗೆ ವಿರೋಧ: ಹಿಂಸಾತ್ಮಕ ಪ್ರತಿಭಟನೆ ಬೇಡ ಎಂದ ಸಿದ್ಧರಾಮಯ್ಯ

ಅಗ್ನಿಪಥ್ ಯೋಜನೆಗೆ ವಿರೋಧ: ಹಿಂಸಾತ್ಮಕ ಪ್ರತಿಭಟನೆ ಬೇಡ ಎಂದ ಸಿದ್ಧರಾಮಯ್ಯ

0

ಹುಬ್ಬಳ್ಳಿ(Hubballi):  ಕೇಂದ್ರ ಸರ್ಕಾರದ ಅಗ್ನಿಪಥ್ ಯೋಜನೆಗೆ ನಮ್ಮ ವಿರೋಧವಿದೆ. ಆದರೆ ಯಾರೂ ಹಿಂಸಾತ್ಮಕ ಪ್ರತಿಭಟನೆ ನಡೆಸಬಾರದು ಎಂದು ವಿಪಕ್ಷ ನಾಯಕ ಸಿದ್ಧರಾಮಯ್ಯ ಮನವಿ ಮಾಡಿದ್ದಾರೆ.

ಹುಬ್ಬಳ್ಳಿಯಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಸಿದ್ದರಾಮಯ್ಯ, ಅಗ್ನಿ ಪಥ್ ಯೋಜನೆಗೆ ಆಯ್ಕೆಯಾದವರು ನಾಲ್ಕು ವರ್ಷದ ಬಳಿಕ ಏನು ಮಾಡಬೇಕು ಅವರ ಗತಿ ಏನು..? ಎಂದು ಪ್ರಶ್ನಿಸಿದರು.

ಅಂತೆಯೇ ಆದೇಶ ಹಿಂಪಡೆಯುವವರೆಗೆ ಪ್ರತಿಭಟನೆ ನಿಲ್ಲಿಸದಿರಿ, ಆದರೆ ಹಿಂಸಾತ್ಮಕ ಪ್ರತಿಭಟನೆ ಮಾಡಬೇಡಿ ಎಂದು ಸಲಹೆ ನೀಡಿದರು.

ತಮ್ಮ ವಿರುದ್ಧ ಜಾತಿ ನಿಂದನೆ ಕೇಸ್ ದಾಖಲಿಸಿರುವ ಕುರಿತು ಪ್ರತಿಕ್ರಿಯಿಸಿದ ಸಿದ್ಧರಾಮಯ್ಯ, ನಾನು ಜಾತಿ ನಿಂದನೆ ಮಾಡಿಯೇ ಇಲ್ಲ. ಇದು ಆರ್ ಎಸ್ ಎಸ್, ಬಿಜೆಪಿಯವರ ಹುನ್ನಾರ ಎಂದು ಟೀಕಿಸಿದರು.