ಮನೆ ಅಪರಾಧ ಕಾಂಗ್ರೆಸ್ ಮುಖಂಡ ಟಿಪ್‌ಟಾಪ್ ಬಶೀರ್ ಮನೆ ಮೇಲೆ ಇಡಿ ದಾಳಿ: ದಾಖಲೆಗಳ ಪರಿಶೀಲನೆ

ಕಾಂಗ್ರೆಸ್ ಮುಖಂಡ ಟಿಪ್‌ಟಾಪ್ ಬಶೀರ್ ಮನೆ ಮೇಲೆ ಇಡಿ ದಾಳಿ: ದಾಖಲೆಗಳ ಪರಿಶೀಲನೆ

0

ಸಾಗರ : ರಾಜ್ಯದಲ್ಲಿ ಮತ್ತೊಬ್ಬ ಕಾಂಗ್ರೆಸ್ ಮುಖಂಡನ ಮೇಲೆ ಜಾರಿ ನಿರ್ದೇಶನಾಲಯ ಅಧಿಕಾರಿಗಳ ಕಣ್ಣು ಬಿದ್ದಿದೆ.

ಸಾಗರದ ಇಕ್ಕೇರಿ ರಸ್ತೆಯಲ್ಲಿರುವ ಕಾಂಗ್ರೆಸ್‌ ಪಕ್ಷದ ನಗರಸಭೆ ಸದಸ್ಯ ಟಿಪ್‌ಟಾಪ್ ಬಶೀರ್ ಅವರ ನಿವಾಸದ ಮೇಲೆ ಶನಿವಾರ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಉದ್ಯಮಿ ಬಶೀರ್ ಅವರಿಗೆ ಸೇರಿದ ಆಸ್ತಿ, ಬ್ಯಾಂಕ್ ಖಾತೆಯ ವಿವರಗಳನ್ನು 9 ಅಧಿಕಾರಿಗಳ ತಂಡ ಪರಿಶೀಲಿಸಿದೆ. ಈ ವೇಳೆ ಬಶೀರ್ ಅವರಿಗೆ ಸಾಲು ಸಾಲು ಪ್ರಶ್ನೆ ಕೇಳಲಾಗಿದೆ. ಪ್ರಮುಖವಾಗಿ ಬ್ಯಾಂಕಿಂಗ್ ಟ್ರಾನ್ಸಾಕ್ಷನ್ ಮೇಲೆ ಇಡಿ ಅಧಿಕಾರಿಗಳು ಹೆಚ್ಚು ತಲಾಶ್ ನಡೆಸಿದ್ದಾರೆ.

ಈ ಹಿಂದೆ ಆದಾಯ ತೆರಿಗೆ ಅಧಿಕಾರಿಗಳು ನಡೆಸಿದ ದಾಳಿಯ ಹಿನ್ನೆಲೆಯಲ್ಲಿ ಇಂದು ಇಡಿ ಅಧಿಕಾರಿಗಳು ಬಂದಿದ್ದರು.ಇದಾದ ಬಳಿಕ ಇಡಿ ಅಧಿಕಾರಿಗಳು ರೇಡ್ ಮಾಡಿದ್ದಾರೆ. ಬುಧವಾರ ಮಂಗಳೂರಿನಲ್ಲಿರುವ ಇ.ಡಿ ಕಚೇರಿಗೆ ಬರುವಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.