ಮನೆ ಅಪರಾಧ ತಲೆಯ ಮೇಲೆ ವಿದ್ಯುತ್ ಕಂಬ ಬಿದ್ದು ಲೈನ್‌ಮೆನ್ ಸಾವು!

ತಲೆಯ ಮೇಲೆ ವಿದ್ಯುತ್ ಕಂಬ ಬಿದ್ದು ಲೈನ್‌ಮೆನ್ ಸಾವು!

0

ಮಂಡ್ಯ : ವಿದ್ಯುತ್ ಶಾಕ್ ನಿಂದ ಅನೇಕ ಅವಘಡ ಗಳು ನಡೆಯುತ್ತಿರುತ್ತದೆ. ಅದ್ರಲ್ಲೂ KPTCL ಸಿಬ್ಬಂದಿ ಜೀವವನ್ನು ಕೈಯಲ್ಲಿ ಹಿಡಿದು ಕೆಲಸ ಮಾಡಬೇಕಾಗುತ್ತದೆ.

ಮಂಡ್ಯದಲ್ಲಿ ಇಂದು ಘೋರವಾದ ದುರಂತ ಒಂದು ನಡೆದಿದ್ದು,ವಿದ್ಯುತ್ ಕಂಬವನ್ನು ಅಳವಡಿಸುವ ವೇಳೆ ತಲೆಯ ಮೇಲೆ ವಿದ್ಯುತ್ ಕಂಬ ಮುರಿದುಬಿದ್ದು ಲೈನ್ ಮ್ಯಾನ್ ಒಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ.

ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಹಲಸಹಳ್ಳಿಯಲ್ಲಿ ಈ ಒಂದು ದುರ್ಘಟನೆ ಸಂಭವಿಸಿದೆ.ಮಳವಳ್ಳಿ ತಾಲೂಕಿನ ಹಲಸಹಳ್ಳಿಯಲ್ಲಿ ಇವತ್ತು ವಿದ್ಯುತ್ ಕಂಬವನ್ನು ಅಳವಡಿಸಲಾಗುತ್ತಿತ್ತು. ವಿದ್ಯುತ್ ಕಂಬ ಅಳವಡಿಸುವ ವೇಳೆ ಕಂಬ ಏಕಾಏಕಿ ಮುರಿದುಬಿದ್ದಿದೆ. ಈ ವೇಳೆ ಕರ್ತವ್ಯದಲ್ಲಿದ್ದ ಕುಲುಮೆ ದೊಡ್ಡಿ ಗ್ರಾಮದ ಕುಮಾರ್ (31) ಸಾವನ್ನಪ್ಪಿದ್ದಾರೆ.

ಈ ಕುರಿತು ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತನ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದ್ದು, ಪರಿಹಾರ ನೀಡುವಂತೆ ಒತ್ತಾಯ ಮಾಡಲಾಗಿದೆ.