ಮನೆ ಸುದ್ದಿ ಜಾಲ ಇಂದು ಸಂತೇಮರಹಳ್ಳಿ ಉಪವಿಭಾಗ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ

ಇಂದು ಸಂತೇಮರಹಳ್ಳಿ ಉಪವಿಭಾಗ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ

0

ಚಾಮರಾಜನಗರ: ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದಿಂದ ಸಂತೇಮರಹಳ್ಳಿ ಉಪವಿಭಾಗ ವ್ಯಾಪ್ತಿಗೆ ಬರುವ ಹೊಂಗನೂರು ಉಪಕೇಂದ್ರದಿAದ ಹೊರ ಹೊಮ್ಮುವ ೧೧ಕೆವಿ ಮಸಣಾಪುರ ಎನ್.ಜೆ.ವೈ ಫೀಡರ್‌ನ ತುರ್ತು ಕಾಮಗಾರಿಯನ್ನು ಇಂದು ಜೂನ್ ೨೮ರಂದು ಹಮ್ಮಿಕೊಂಡಿರುವುದರಿAದ ಬೆಳಿಗ್ಗೆ ೯ ರಿಂದ ಸಂಜೆ ೬ ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

ಇರಸವಾಡಿ, ಸುತ್ತೂರು, ಹೊಂಗನೂರು, ಜ್ಯೋತಿಗೌಡನಪುರ, ನಲ್ಲೂರು ಮೋಳೆ, ನಂಜರಾಜಪುರ, ಕುರುಬರಹುಂಡಿ, ಕರಳಮೋಳೆ ಹಾಗೂ ಅಮ್ಮನಪುರ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಗ್ರಾಹಕರು ನಿಗಮದ ಜೊತೆ ಸಹಕರಿಸಬೇಕು ಎಂದು ನಿಗಮದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.