ಮಂಡ್ಯ: ನಾಡಪ್ರಭು ಕೆಂಪೇಗೌಡ ಅವರು ಒಂದು ಜಾತಿಗೆ ಸೇರಿದವರಲ್ಲ ಎಲ್ಲ ಜಾತಿ ಧರ್ಮ ದವರಿಗೂ ಬದುಕು ಕಟ್ಟಿಕೊಳ್ಳಲು ಸುಸಜ್ಜಿತ ಬೆಂಗಳೂರು ನಗರ ನಿರ್ಮಾಣವಾಗಲು ಅವರ ದೂರ ದೃಷ್ಟಿಯೇ ಕಾರಣ ಎಂದು ಬಿಜೆಪಿ ಮುಖಂಡರು ಸಚ್ಚಿದಾನಂದ ಹೇಳಿದರು.
ನಗರದ ಕಾರಸವಾಡಿ ರಸ್ತೆಯ ಅರಳಿಕಟ್ಟೆ ಸರ್ಕಲ್ ನಲ್ಲಿ ಜಿಲ್ಲಾ ಒಕ್ಕಲಿಗರ ಸಂಘ, ಅರಳಿ ಕಟ್ಟೆ ಸಂಘ, ಕನ್ನಡ ಪರ ಸಂಘಟನೆಗಳ ವತಿಯಿಂದ ನಾಡಪ್ರಭು ಕೆಂಪೇಗೌಡ ಅವರ 516ನೇ ಜಯಂತಿ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿ ಮಾತನಾಡಿದರು.ಮುಂದಿನ ದಿನಗಳಲ್ಲಿ ಮಂಡ್ಯ ಶ್ರೀರಂಗಪಟ್ಟಣ ಗಡಿಭಾಗವಾದ ಈ ಅರಳಿ ಕಟ್ಟೆ ಸರ್ಕಲ್ ನಲ್ಲಿ ನಾಡಪ್ರಭು ಕೆಂಪೇಗೌಡರ ಭವ್ಯವಾದ ಕಂಚಿನ ಪ್ರತಿಮೆ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸೋಣ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಒಕ್ಕಲಿಗರ ಸಂಘದ ಜಿಲ್ಲಾಧ್ಯಕ್ಷ ಗೌಡಯ್ಯನದೊಡ್ಡಿ ತಿಮ್ಮೇಗೌಡ ಮಾತನಾಡಿ ಕೆಂಪೇಗೌಡ ಅವರು ಬೆಂಗಳೂರು ನಗರ ನಿರ್ಮಾಣ ಹಾಗೂ ಕೆರೆ ಕಟ್ಟೆಗಳನ್ನು ನಿರ್ಮಿಸಿ ಎಲ್ಲಾ ವರ್ಗ ಸಮುದಾಯದವರಿಗೆ ಪೇಟೆಗಳನ್ನು ನಿರ್ಮಾಣ ಮಾಡಿ ಎಲ್ಲವರ್ಗದವರು ಬದುಕು ಕಟ್ಟಿ ಕೊಳ್ಳಲು ಸಹಕಾರ ನೀಡಿದವರು ಇಂತಹ ಹತ್ತಾರು ಕೆಲಸಗಳಿಂದ ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳೆದು ನಿಂತರು ನಾಡಪ್ರಭು ಕೆಂಪೇಗೌಡರು ಎಂದು ಗುಣಗಾನ ಮಾಡಿದರು.
ನಾಡಪ್ರಭು ಕೆಂಪೇಗೌಡರ 516ನೇ ಜಯಂತಿ ಅಂಗವಾಗಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಕಾರ್ಯಕ್ರಮದಲ್ಲಿ ಮುಖಂಡರಾದ ಶಿವಪ್ರಕಾಶ್‌ಬಾಬು, ಬೀರೇಶ್, ವೀರಭದ್ರ, ಕೇಶವ್, ಬಸವರಾಜು, ಕಲ್ಲಹಳ್ಳಿ ಶ್ರೀಧರ್, ಮಧುಸೂದನ್, ಪುಟ್ಟಸ್ವಾಮಿ, ಲಿಂಗಣ್ಣ, ಸೌಭಾಗ್ಯ ಸೇರಿದಂತೆ ಹಲವರು ಭಾಗವಹಿಸಿದ್ದರು.














