ಮನೆ ಅಪರಾಧ ತಿರುಪತಿ ದರ್ಶನದಿಂದ ಹಿಂದಿರುಗುತ್ತಿದ್ದ ವೇಳೆ ಭೀಕರ ಅಪಘಾತ: ಮೂವರು ಸ್ಥಳದಲ್ಲೇ ಸಾವು, 9ಕ್ಕೂ ಹೆಚ್ಚು ಮಂದಿ...

ತಿರುಪತಿ ದರ್ಶನದಿಂದ ಹಿಂದಿರುಗುತ್ತಿದ್ದ ವೇಳೆ ಭೀಕರ ಅಪಘಾತ: ಮೂವರು ಸ್ಥಳದಲ್ಲೇ ಸಾವು, 9ಕ್ಕೂ ಹೆಚ್ಚು ಮಂದಿ ಗಾಯ

0

ಆಂಧ್ರಪ್ರದೇಶ : ತಿರುಪತಿ ದೇಗುಲದಿಂದ ಹಿಂದಿರುಗುತ್ತಿದ ವಾಹನವೊಂದು ಅಪಘಾತಕ್ಕೀಡಾಗಿ ಮೂವರು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಅನ್ನಮಯ್ಯ ಜಿಲ್ಲೆಯ ಮದನಪಲ್ಲಿಯ ಕುರುಬಲಕೋಟ ಬಳಿ ನಡೆದಿದೆ. ಚಿಕ್ಕಬಳ್ಳಾಪುರದ ಮೂಲದ ಮೇಘರ್ಷ್‌ (17), ಚರಣ್‌ (17) ಮತ್ತು ಶ್ರಾವಣಿ( 28) ಮೃತ ದುರ್ದೈವಿಗಳು.

ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಈ ದುರಂತ ಸಂಭವಿಸಿದೆ.

ಘಟನೆಯಲ್ಲಿ ಒಂಬತ್ತಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಸಮೀಪದ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ.