ಮನೆ ಸುದ್ದಿ ಜಾಲ ದೇಶಿ ತಳಿ ಹಾಗೂ ಸಾವಯವ ಕೃಷಿಯನ್ನು ಪ್ರೋತ್ಸಾಹಿಸಿ: ಕೆ.ಆರ್.ನಂದಿನಿ

ದೇಶಿ ತಳಿ ಹಾಗೂ ಸಾವಯವ ಕೃಷಿಯನ್ನು ಪ್ರೋತ್ಸಾಹಿಸಿ: ಕೆ.ಆರ್.ನಂದಿನಿ

0

ಮಂಡ್ಯ: ಜಿಲ್ಲೆಯ ರೈತರು ಹೆಚ್ಚಾಗಿ ಸಾವಯವ ಅಥವಾ ನೈಸರ್ಗಿಕ ಕೃಷಿ ಪದ್ಧತಿಯನ್ನು ಬಳಸಿಕೊಂಡು ದೇಶಿ ತಳಿಗಳನ್ನು ಬೆಳೆಯುವಂತೆ ರೈತರನ್ನು ಪ್ರೋತ್ಸಾಹಿಸುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಆರ್ ನಂದಿನಿ ಅವರು ತಿಳಿಸಿದರು.

ಅವರು ಇಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕೃಷಿ ಇಲಾಖೆಯ ವಿವಿಧ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದರು. ದೇಶಿ ತಳಿ ಬೆಳೆಯುವ ಸಂದರ್ಭದಲ್ಲಿ ನೈಸರ್ಗಿಕ ಗೊಬ್ಬರ ಬಳಸುವುದರಿಂದ ಹೆಚ್ಚು ಇಳುವರಿ ಸಿಗುತ್ತದೆ. ಇದಕ್ಕಾಗಿ ರೈತರಿಗೆ ಹಳ್ಳಿಕಾರ್ ಹಸುಗಳನ್ನು ಸಾಕಲು ಪ್ರೇರೇಪಿಸಬೇಕು ಎಂದರು.

ಪಶುಸAಗೋಪನ ಇಲಾಖೆಯಿಂದ ಅಮೃತ್ ಮಹಲ್ ಯೋಜನೆಯಡಿ ಹಳ್ಳಿಕರ್ ಹಸುಗಳನ್ನು ನೈಸರ್ಗಿಕ ಕೃಷಿ ಅನುಸರಿಸುತ್ತಿರುವ ರೈತರನ್ನು ಆಯ್ಕೆ ಮಾಡಿ ಒದಗಿಸಿಕೊಡಿ. ಈ ಯೋಜನೆಯಡಿ ಗುರಿ ಕಡಿಮೆ ಇದ್ದು ಇದನ್ನು ಹೆಚ್ಚಿಸುವಂತೆ ಹಾಗೂ ಅದರ ಅಗತ್ಯತೆ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಎಂದರು.

 ನೈಸರ್ಗಿಕ ಕೃಷಿ ಪದ್ಧತಿಯನ್ನು ರೈತರು ಅಳವಡಿಸಿಕೊಳ್ಳಲು ರಾಸಾಯನಿಕ ಗೊಬ್ಬರ ದೊರೆಯುವ ದರದಲ್ಲೇ ಅಥವಾ ಅದಕ್ಕಿಂತ ಕಡಿಮೆ ದರದಲ್ಲಿ ನೈಸರ್ಗಿಕ ಗೊಬ್ಬರ ದೊರಕಬೇಕು ಎಂದರು.

ನೈಸರ್ಗಿಕ ಗೊಬ್ಬರವನ್ನು ಬಳಸಿ ಬೆಳೆದ ಬೆಳೆಯಲ್ಲಿ ಉತ್ತಮ ಇಳುವರಿ ಸಿಗಬೇಕು. ಅಥವಾ ರಾಸಾಯನಿಕ ಗೊಬ್ಬರ ಬಳಸಿ ಶೇ 10 ರಿಂದ 20 ಇಳುವರಿ ಹೆಚ್ಚು ದೊರೆತರು, ಸಾವಯವ ಪದ್ಧತಿಯಲ್ಲಿ ಬೆಳೆದ ಆಹಾರ ಪದಾರ್ಥಗಳ ಬೇಡಿಕೆ ಹೆಚ್ಚಿದ್ದು, ಹೆಚ್ಚಿನ ದರಕ್ಕೆ ಮಾರಾಟವಾಗುತ್ತದೆ. ಈ ಹಿನ್ನೆಲೆಯಲ್ಲಿ ನೈಸರ್ಗಿಕ ಕೃಷಿ ಲಾಭದಾಯಕವಾಗಿದೆ ಎಂಬುದನ್ನು ತಿಳಿಸಿಕೊಡಬೇಕು. ಇದಕ್ಕಾಗಿ ನೈಸರ್ಗಿಕ ಪದ್ಧತಿಯಲ್ಲಿ ಬೆಳೆ ಬೆಳೆದು ಉತ್ತಮ ಸಾಧನೆ ಮಾಡಿರುವ ರೈತರಿಂದ ಕಾರ್ಯಾಗಾರ ಆಯೋಜಿಸಿ ಎಂದರು.

 ರಾಸಾಯನಿಕ ರೀತಿಯಲ್ಲೇ ಬೆಳೆ ಬೆಳೆದು ಸಾವಯವ ಎಂದು ಗ್ರಾಹಕರಿಗೆ ಹಾಗೂ ಸಾವಯವ ಪದ್ಧತಿಯಲ್ಲಿ ಬೆಳೆ ಬೆಳೆದ ರೈತರಿಗೆ ಸಹ ಮೋಸ ಮಾಡುತ್ತಾರೆ. ಸಾವಯವ ಆಹಾರ ಪದಾರ್ಥಗಳಿಗೆ ಉತ್ತಮ ದರ ಸಿಗಲು ಅವುಗಳ ಬ್ರ‍್ಯಾಂಡಿAಗ್ ಆಗಬೇಕು. ಬ್ರ‍್ಯಾಂಡಿAಗ್ ಆದರೆ ಮಾತ್ರ ಉತ್ತಮ ಮಾರುಕಟ್ಟೆ ಹಾಗೂ ದರ ಸಿಗುತ್ತದೆ ಎಂದರು.

ಸAಪ್ರದಾಯಿಕ ಎಣ್ಣೆ ಗಾಣಗಳನ್ನು ಸ್ವಸಹಾಯ ಸಂಘಗಳು ಪ್ರಾರಂಭಿಸಲು ಎಣ್ಣೆಕಾಳುಗಳ ಅವಶ್ಯಕತೆ ಇದೆ. ರೈತರು ತಮ್ಮ ಜಮೀನಿನ ಸುತ್ತ ಹಾಗೂ ಬೆಳೆಗಳ ಮಧ್ಯದಲ್ಲಿ ಎಣ್ಣೆ ಕಾಳುಗಳನ್ನು ಬೆಳೆಯಬಹುದು ಹಾಗೂ ಬೆಳೆದ ಎಣ್ಣೆಕಾಳುಗಳನ್ನು ಜಿಲ್ಲೆಯಲ್ಲಿ ಸಂಪ್ರದಾಯಿಕ ಎಣ್ಣೆ ಗಾಣಗಳನ್ನು ಬಳಸುವ ಮಹಿಳಾ ಸಂಘಗಳಿಗೆ ಮಾರಾಟ ಮಾಡುವಂತೆ ಸಮನ್ವಯ ಮಾಡಿಕೊಡಿ ಎಂದರು.

ಜಿಲ್ಲೆಯಲ್ಲಿ ಸಾವಯವ ಬೆಲ್ಲವನ್ನು ತಯಾರಿಸುತ್ತೇವೆ.ಇದರೊಂದಿಗೆ ಸಾವಯವ ಪದ್ಧತಿಯಲ್ಲಿ ಕಡಲೆಕಾಯಿ ಬೆಳೆದು ಕಡಲೆಕಾಯಿ ಚಿಕ್ಕಿಯನ್ನು ಜಿಲ್ಲೆಯಲ್ಲೇ ತಯಾರಿಸಿ ಬೇರೆ ಜಿಲ್ಲೆ ಹಾಗೂ ರಾಜ್ಯದಲ್ಲಿ ಮಾರಾಟ ಮಾಡಬಹುದು ಎಂದರು.

ಜAಟಿ ಕೃಷಿ ನಿರ್ದೇಶಕ ಅಶೋಕ್ ಅವರು ಮಾತನಾಡಿ ನ್ಯಾಷನಲ್ ಮಿಷನ್ ಹಾಗೂ ನ್ಯಾಚುರಲ್ ಫಾರ್ಮಿಂಗ್ ಯೋಜನೆಯಡಿ ಜಿಲ್ಲೆಯಲ್ಲಿ ಸುಮಾರು 278 ದೇಶಿ ತಳಿಗಳನ್ನು ಪತ್ತೆ ಮಾಡಿ ಸಂರಕ್ಷಿಸಲಾಗುತ್ತದೆ. ಒಟ್ಟು 400 ತಳಿಗಳನ್ನು ಸಂರಕ್ಷಿಸುವ ಗುರಿ ಹೊಂದಲಾಗಿದೆ ಎಂದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಲಕ್ಷ್ಮಿ, ಕೃಷಿ ಇಲಾಖೆ ಹರ್ಷ, ತಾಲ್ಲೂಕು ಕೃಷಿ ಇಲಾಖೆ ಸಹಾಯಕ ನಿರ್ದೇಶಕರು ಸೇರಿದಂತೆ ಪ್ರಗತಿಪರ ರೈತರು ಉಪಸ್ಥಿತರಿದ್ದರು.