ಮನೆ ಸುದ್ದಿ ಜಾಲ ಮಂಡ್ಯದಲ್ಲಿ CRPF ನಿವೃತ್ತ ಅಧಿಕಾರಿ ಪಿ.ಎನ್. ರಮೇಶ್‌ಗೆ ಭವ್ಯ ಸ್ವಾಗತ ಸಮಾರಂಭ

ಮಂಡ್ಯದಲ್ಲಿ CRPF ನಿವೃತ್ತ ಅಧಿಕಾರಿ ಪಿ.ಎನ್. ರಮೇಶ್‌ಗೆ ಭವ್ಯ ಸ್ವಾಗತ ಸಮಾರಂಭ

0

ಮಂಡ್ಯ: ಸೈನಿಕ ಹುದ್ದೆ ಎಲ್ಲರಿಗೂ ಲಭಿಸುವುದಿಲ್ಲ ಕೆಲವೇ ಮಂದಿಗಷ್ಟೇ ಆದ್ಯತೆ ದೊರೆಯುತ್ತದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ್ ಬಾಲದಂಡಿ ಹೇಳಿದರು.

ನಗರದ ಬಾಲಭವನದಲ್ಲಿ 37 ವರ್ಷ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಸಿಆರ್ ಪಿ ಎಫ್ ನ ಇನ್ಸ್ಪೆಕ್ಟರ್ ಪಿ ಎನ್ ರಮೇಶ್ ಅವರ ಸ್ವಾಗತ ಸಮಾರಂಭದಲ್ಲಿ  ಭಾಗವಹಿಸಿ ಮಾತನಾಡಿದರು . ಕೆಲವೇ ಮಂದಿಗಷ್ಟೇ ಸೇನೆಯಲ್ಲಿ ಸೇರಲು ಅವಕಾಶ ದೊರೆಯುತ್ತದೆ ಅಂತಹ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು 37 ವರ್ಷಗಳ ಕಾಲ ಸೇನೆಯಲ್ಲಿ ಪಿ ಎನ್ ರಮೇಶ್ ಅವರು ಸೇವೆ ಸಲ್ಲಿಸಿ  ವಯೋನಿವೃತ್ತಿ ಹೊಂದಿದ್ದಾರೆ ಇವರ ಮಾರ್ಗದರ್ಶನವನ್ನು ಇಂದಿನ ಯುವಕರು ಪಡೆದು ಸೇನೆಯಲ್ಲಿ ಹೆಚ್ಚು ಹೆಚ್ಚು ಸೇವೆ ಸಲ್ಲಿಸುವಂತಾಗಲಿ ಎಂದು ಆಶಿಸಿದರು.

ನಿವೃತ್ತ ಯೋಧ ಪಿಎನ್ ರಮೇಶ್‌ ಮಾತನಾಡಿ ಬಿಹಾರ್ ನಲ್ಲಿ ತರಬೇತಿ ಪಡೆದು ಪಂಜಾಬ್. ಛತ್ತೀಸ್ ಘಡ್. ಜಮ್ಮು ಕಾಶ್ಮೀರ. ತ್ರಿಪುರ. ಅಸಾಂ. ಬೆಂಗಳೂರು .ಉತ್ತರಪ್ರದೇಶ. ಕೊಯಂಮತ್ತೂರು ಸೇರಿದಂತೆ ಹಲವು ಭಾಗದಲ್ಲಿ ಸೇವೆ ಸಲ್ಲಿಸಿ ಇಂದು ನಿವೃತ್ತಿ ಹೊಂದಿದ್ದೇನೆ ನನ್ನ ಸ್ವಾಗತಕ್ಕೆ ನಮ್ಮ ಗ್ರಾಮದವರು ಮಾಜಿ ಸೈನಿಕರು ದೇಶಭಕ್ತರು ಸೇರಿ ಭವ್ಯ ಸ್ವಾಗತ ಕೋರಿರುವುದು ನನಗೆ ಸಂತಸ ತಂದಿದೆ ಎಂದರು.

ಇದೇ ಸಂದರ್ಭದಲ್ಲಿ ಗಿಡ ನೆಟ್ಟು  ಗಣ್ಯರು ನೀರನ್ನು ಹಾಕುವ ಮೂಲಕ ಪರಿಸರ ಪ್ರೇಮ ಮೆರೆದರು

ಕಾರ್ಯಕ್ರಮದಲ್ಲಿ ಸಿದ್ದರಾಜು. ಚೆಲುವಪ್ಪ. ಧನಂಜಯ್. ನಾಗೇಶ್. ಯೋಗೇಶ್ ಅಂಗಡಿ ಸ್ವಾಮಿ ಗುರುಮೂರ್ತಿ ವೇಲು ಆನಂದ್ ಪುನೀತ್ ರಾಘು ಗಂಗಾಧರ್ ಭಾಗವಹಿಸಿದ್ದರು