ಮನೆ ಸುದ್ದಿ ಜಾಲ ಸ್ವಚ್ಚತೆ ಕಾಪಾಡುವುದರ ಮೂಲಕ ಅತಿಸಾರ ಬೇಧಿಯನ್ನು ತಡೆಗಟ್ಟಿ: ಡಾ.ಕುಮಾರ

ಸ್ವಚ್ಚತೆ ಕಾಪಾಡುವುದರ ಮೂಲಕ ಅತಿಸಾರ ಬೇಧಿಯನ್ನು ತಡೆಗಟ್ಟಿ: ಡಾ.ಕುಮಾರ

0

ಮಂಡ್ಯ: ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಇರುವ ಪ್ರದೇಶದಲ್ಲಿ ಅಸ್ವಸ್ಥತೆ ಇದ್ದರೆ, ಮಕ್ಕಳಲ್ಲಿ ಅತಿಸಾರ ಬೇಧಿ ಉಂಟಾಗುತ್ತದೆ. ಎಳೆಯ ಮಕ್ಕಳಲ್ಲಿ ಅತಿಸಾರ ಬೇಧಿಯಿಂದ ಹಲವಾರು ಆರೋಗ್ಯದ ತೊಂದರೆ ಉಂಟಾಗಿ ಸಾವನ್ನಪ್ಪುವ ಸಂಭವ ಇರುತ್ತದೆ. ಆದ್ದರಿಂದ ಸ್ವಚ್ಛತೆ ಕಾಪಾಡುವುದರ ಮೂಲಕ ಅತಿಸಾರಬೇಧಿಯನ್ನು ತಡೆಗಟ್ಟೋಣ ಎಂದು ಜಿಲ್ಲಾಧಿಕಾರಿ ಕುಮಾರ ಅವರು ಹೇಳಿದರು.

ಗುರುವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ಆಯೋಜಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಜಿಲ್ಲೆಯಲ್ಲಿ ಜುಲೈ 16 ರಿಂದ 31 ರವರೆಗೆ ಅತಿಸಾರಭೇದಿ ತಡೆಗಟ್ಟುವಿಕೆ ಅಭಿಯಾನವನ್ನು ಆಯೋಜಿಸಲಾಗುವುದು ಎಂದರು.

ಅಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರ ಬಳಿ 5 ವರ್ಷದೊಳಗಿನ ಮಕ್ಕಳು ಇರುವ ಮನೆಗಳ ಮಾಹಿತಿ ಲಭ್ಯವಿದ್ದು, ಅತಿಸಾರ ವೇದಿ ತಡೆಗಟ್ಟುವಿಕೆ ಅಭಿಯಾನದ ಅಂಗವಾಗಿ 5 ವರ್ಷಗಳ ವಳಗಿನ ಮಕ್ಕಳ ಮನೆಗಳಿಗೆ ಓ ಆರ್ ಎಸ್ ಮತ್ತು ಜಿಂಕ್ ಮಾತ್ರಗಳನ್ನು ಹಂಚಲಾಗುವುದು ಎಂದರು.

ಅತಿಸಾರ ಬೇಧಿಯಿಂದ ಮಕ್ಕಳಲ್ಲಿ ಮೊದಲು ನಿರ್ಜಲೀಕರಣ ಉಂಟಾಗುತ್ತದೆ ಅಂತಬ ಸಂದರ್ಭದಲ್ಲಿ ಓ.ಆರ್.ಎಸ್ ಜಿಂಕ್ ಮಾತ್ರೆಗಳನ್ನು ನೀಡುವ ಪಮಾಣ ಕುರಿತಂತೆ ಪೋಷಕರಿಗೆ ತಿಳಿಸಿಕೊಡಲಾಗುವುದು. ಅಂಗನವಾಡಿ ಕೇಂದ್ರಗಳಲ್ಲಿ ಅತಿಸಾರ ಚಿಕಿತ್ಸೆಗಾಗಿ ಓ ಆರ್ ಎಸ್ ಮತ್ತು ಜಿಂಕ್ ಕಾರ್ನರ್ ಗಳನ್ನು ಸ್ಥಾಪನೆ ಮಾಡಲಾಗುವುದು ಎಂದು ಹೇಳಿದರು.

ಕಬ್ಬು ಕಟಾವು ಸಮಯ ಬಂದಿರುವುದರಿAದ 30000ಕ್ಕೂ ಅಧಿಕ ವಲಸೆ ಕಾರ್ಮಿಕರು ಜಿಲ್ಲೆಗೆ ಆಗಮಿಸಿದ್ದಾರೆ. ಇವರು ವಾಸಿಸುವ ಸ್ಥಳ, ಸ್ಲಂ ಗಳು ಸೇರಿದಂತೆ ಹೆಚ್ಚಾಗಿ ಅತಿಸಾರ ಬೇಧಿ ಪ್ರಕರಣಗಳು ಕಂಡು ಬರುವ ಸ್ಥಳಗಳನ್ನು ಗುರುತಿಸಿ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಿ ಎಂದರು.

 ಅಂಗನವಾಡಿ ಕೇಂದ್ರಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮಕ್ಕಳಲ್ಲಿ ಅತಿಸಾರಭೇದಿಯ ಲಕ್ಷಣಗಳು ಕಂಡುಬAದರೆ ಸ್ಥಳೀಯ ಆರೋಗ್ಯ ಅಧಿಕಾರಿಗಳ ಗಮನಕ್ಕೆ ತರಬೇಕು. ಸ್ವಚ್ಛತೆಯ ಕುರಿತು ನಿರ್ಲಕ್ಷ್ಯ ಇರುವ ಸ್ಥಳಗಳಿಗೆ ಭೇಟಿ ನೀಡಿ ಸ್ವಚ್ಛತೆಯ ಕುರಿತಾಗಿ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.

ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಹಾಸ್ಟಲ್ ಗಳಲ್ಲಿ, ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಆಹಾರ ಸೇವಿಸುವ ಮೊದಲು ಕೈ ತೊಳೆಯುವ ಅಭ್ಯಾಸವನ್ನು ರೂಢಿಸಬೇಕು ಎಂದರು.

ದಢಾರಾ ಮತ್ತು ರುಬೆಲ್ಲಾ ಕಾಯಿಲೆಗಳು ಮಾರಣಾಂತಿಕವೆAದು ಸಾಬೀತಾಗಿದ್ದು ದಢಾರ ರುಬೆಲ್ಲಾ ಕಾಯಿಲೆಯಿಂದ ಮಕ್ಕಳನ್ನು ರಕ್ಷಿಸಲು ಸಾರ್ವತ್ರಿಕ ಲಸಿಕ ಕಾರ್ಯಕ್ರಮದಲ್ಲಿ 9 ರಿಂದ 11 ತಿಂಗಳುಗಳಲ್ಲಿ ಮೊದಲನೆಯ ಲಸಿಕೆ ಹಾಗೂ 16 ರಿಂದ 24 ನೇ ತಿಂಗಳಲ್ಲಿ ಎರಡನೇ ಲಸಿಕೆ ನೀಡಲಾಗುವುದು. ಪೋಷಕತು ತಮ್ಮ ಮಕ್ಕಳಿಗೆ ತಪ್ಪದೇ ಲಸಿಕೆ ಕೊಡಿಸಬೇಕು ಎಂದರು.

ಗ್ರಾಮಮಟ್ಟದ ಸಭೆಗಳನ್ನು ನಡೆಸಿ ದಡಾರ ರುಬೆಲ್ಲಾ ಕಾಯಿಲೆ ಕುರಿತಾಗಿ ಜಾಗೃತಿ ಮೂಡಿಸುವುದು ಹಾಗೂ ಸಾರ್ವಜನಿಕರಿಗೆ ಮಾಹಿತಿ ನೀಡಬೇಕು, ದಢಾರ ರುಬೆಲ್ಲಾ ಕುರಿತಾಗಿ ಜಿಂಗಲ್ ಗಳನ್ನು ಮಾಡಿ ಕಸ ವಿಲೇವಾರಿ ವಾಹನದ ಮೂಲಕ ಜಾಗೃತಿ ಮೂಡಿಸಿ ಎಂದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಕೆ.ಮೋಹನ್ ಅವರು ಮಾತನಾಡಿ ರುಬೆಲ್ಲಾ ಹಾಗೂ ದಢಾರ ರೋಗಗಳ ಪತ್ತೆ ಹಚ್ಚಲು ಜನವರಿ ಮಾಹೆಯಿಂದ ಇಲ್ಲಿಯವರೆಗೆ ಒಟ್ಟು ಜ್ವರ ಹಾಗೂ ರೋಗದ ಲಕ್ಷಣವುಳ್ಳ ಮಕ್ಕಳ 78 ಮಕ್ಕಳನ್ನು ಪರೀಕ್ಷೆಗೆ ಒಳಪಡಿಸಿ ಒಂದು ರುಬಲ್ಲಾ ಹಾಗೂ 4 ಮೀಸಲ್ಸ್ ಪ್ರಕರಣ ವರದಿಯಾಗಿರುತ್ತದೆ ಹಾಗೂ ಗುಣ ಪಡಿಸಲಾಗಿದೆ. ಇದಕ್ಕೆ ಸಂಬAಧಿಸಿದAತೆ ವರದಿಯಾದ ಸ್ಥಳಗಳಲ್ಲಿ ವಾಸಿಸುವ ಮಕ್ಕಳನ್ನು ಸಹ ಪರೀಕ್ಷೆಗೆ ಒಳಪಡಿಸಲಾಗಿದ್ದು, ಯಾವುದೇ ಪ್ರಕರಣ ವರದಿಯಾಗಿರುವುದಿಲ್ಲ ಎಂದರು.

ಸಭೆಯಲ್ಲಿ ನಿವೃತ್ತ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ . ಟಿ.ಎನ್.ಮರಿಗೌಡ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ರಾಜಮೂರ್ತಿ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.