ಮೈಸೂರು : ಮೋದಿ ಅವರು ನನಗೆ ಕಂಗ್ರಾಜುಲೇಟ್ ಮಾಡುತ್ತಾರೆ ಅಂತ ಅಂದುಕೊಂಡಿದ್ದೇನೆ. ಐ ಯಾಮ್ ಹೋಪ್ಫುಲ್ ಎಬೌಟ್ ಇಟ್ ಎಂದು ಬೂಕರ್ ಪ್ರಶಸ್ತಿ ಪುರಸ್ಕೃತ ಲೇಖಕಿ ಬಾನು ಮುಷ್ತಾಕ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಶನಿವಾರ ನಗರದ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಮಠಕ್ಕೆ ಭೇಟಿ ನೀಡಿದ ಬಳಿಕ ಸುತ್ತೂರು ಶ್ರೀಗಳಿಂದ ಆಶೀರ್ವಾದ ಪಡೆದು ನಂತರ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.
ಪ್ರಶಸ್ತಿ ಬಂದು ಈಗಾಗಲೇ ಎರಡು ತಿಂಗಳು ಆಗಿದೆ. ಮತ್ತೆ ಅದೇ ಸಂಭ್ರಮ, ಅದೇ ಉತ್ಸಾಹ, ಅದೇ ಅಭಿಮಾನವನ್ನ ಕನ್ನಡಗರಲ್ಲಿ ಇವತ್ತು ನೋಡುತ್ತಿದ್ದೇನೆ. ಜನರು ತಮ್ಮ ಮನೆ ಹಬ್ಬ ಮತ್ತು ವೈಯಕ್ತಿಕ ಗೆಲುವು ಎನ್ನುವ ರೀತಿಯಲ್ಲಿ ಆಚರಣೆ ಮಾಡುತ್ತಿದ್ದಾರೆ. ಅವರೆಲ್ಲರಿಗೂ ನನ್ನ ಮನದುಂಬಿದ ವಂದನೆಗಳು, ಧನ್ಯವಾದಗಳನ್ನು ಹೇಳುತ್ತೇನೆ ಎಂದರು.
ಮಹಿಳಾ ಸಾಹಿತ್ಯ ಎಂದು ವರ್ಗೀಕರಣ ಮಾಡಬೇಡಿ : ಮಹಿಳೆ ಮತ್ತು ಸಾಹಿತ್ಯ, ಮಹಿಳಾ ಸಾಹಿತ್ಯ ಎಂಬುದನ್ನು ವರ್ಗೀಕರಣ ಮಾಡಬೇಡಿ. ಮಹಿಳೆ ಸಹ ಮನುಷ್ಯಳು ಎಂದು ಹೇಳಿ. ಸಾಹಿತ್ಯ ಮತ್ತು ಮನಸ್ಸಿನ ಅಂತರ್ ಸಂಬಂಧವನ್ನು ಗಮನಿಸಬೇಕು ಎಂದು ಹೇಳಿದರು. ತುಂಬಾ ಚೆನ್ನಾಗಿ ರಚನಾತ್ಮಕ ಹಾಗೂ ಸೃಜನಶೀಲವಾಗಿ ಭಾಗಿ ಆಗಿದ್ದಾರೆ ಮಹಿಳೆಯರು. ಇದರಿಂದ ಆತ್ಮವಿಶ್ವಾಸ ಹೆಚ್ಚಿದೆ. ಈ ನಡುವೆ ಪ್ರಾದೇಶಿಕ ಭಾಷೆಗೆ ಪ್ರಶಸ್ತಿ ಮೂಲಕ ಜಾಗತಿಕ ಮನ್ನಣೆ ಸಿಕ್ಕಂತಾಗಿದೆ. ಎಲ್ಲರೂ ಕೂಡ ಹೆಚ್ಚಾಗಿ ಇನ್ವಾಲ್ ಆಗುತ್ತಿರುವುದು ಸಂತೋಷ ತಂದಿದೆ ಎಂದು ಹೇಳಿದರು.
ಸೋಶಿಯಲ್ ಮೀಡಿಯಾದಲ್ಲಿ ಈ ಬಾರಿ ನೀವು ದಸರಾ ಉದ್ಘಾಟನೆ ಮಾಡಬೇಕೆಂಬ ಚರ್ಚೆ ಶುರುವಾಗಿದೆ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನನಗೆ ಗೊತ್ತಿಲ್ಲ, ಕೂಸು ಹುಟ್ಟುವ ಮುನ್ನವೇ ನಾನು ಕುಲಾವಿ ಹೊಲಿಸುವುದಿಲ್ಲ ಎಂದಿದ್ದಾರೆ.














