ಮನೆ ಸುದ್ದಿ ಜಾಲ ದೇಶದ ಆಹಾರ ಸ್ವಾವಲಂಬನೆಗೆ ಬಾಬೂಜಿ ಕೊಡುಗೆ ಅಪಾರ: ಪ್ರಾಂಶುಪಾಲ ಪಿ.ಕೆ.ಮಹದೇವ್

ದೇಶದ ಆಹಾರ ಸ್ವಾವಲಂಬನೆಗೆ ಬಾಬೂಜಿ ಕೊಡುಗೆ ಅಪಾರ: ಪ್ರಾಂಶುಪಾಲ ಪಿ.ಕೆ.ಮಹದೇವ್

0

ಡಾ.ಬಾಬು ಜಗಜೀವನ್‌ ರಾಮ್ ಅವರ 39 ನೇ ವರ್ಷದ ಪುಣ್ಯ ಸ್ಮರಣೆ ಕಾರ್ಯಕ್ರಮ

ಪಿರಿಯಾಪಟ್ಟಣ:ದೇಶದ ಆಹಾರ ಕ್ಷೇತ್ರದ ಸ್ವಾವಲಂಬನೆಗೆ ಹಸಿರು ಕ್ರಾಂತಿಯ ಹರಿಕಾರ ಡಾ.ಬಾಬು ಜಗಜೀವನ್‌ ರಾಮ್ ಅವರ ಕೊಡುಗೆ ಅಪಾರವಾಗಿದೆ ಎಂದು ಪಟ್ಟಣದ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಪಿ.ಕೆ.ಮಹದೇವ್ ಅಭಿಪ್ರಾಯಪಟ್ಟರು.

ಪಟ್ಟಣದ ತಾಲ್ಲೂಕು ಆಡಳಿತ ಭವನದಲ್ಲಿ ತಾಲ್ಲೂಕು ಆಡಳಿತ ಹಾಗೂ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಆಯೋಜಿಸಿದ್ದ ಭಾರತದ ಮಾಜಿ ಉಪಪ್ರಧಾನಿ, ಮಾತನಾಡಿದರು.

ರಾಜಕೀಯ ಮುತ್ಸದ್ದಿಯಾಗಿದ್ದ ಬಾಬೂಜೀ, ದೇಶವು ಆಹಾರ ಸಮಸ್ಯೆ ಎದುರಿಸಿದ ಸಮಯದಲ್ಲಿ ಸಮಗ್ರ ಆಹಾರ ನೀತಿಯನ್ನು ಜಾರಿಗೊಳಿಸಿ ಭಾರತವು ಆಹಾರ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ದೇಶದ ದಲಿತ ಚರಿತ್ರೆಯಲ್ಲಿ ಅಸಮಾನತೆ, ಹಸಿವು, ಅಪಮಾನ, ದೌರ್ಜನ್ಯಕ್ಕೊಳಗಾದವರನ್ನು ಸಂಕಷ್ಟದಿಂದ ಮೇಲೆತ್ತಿ ಸಮಾನತೆಯ ಬೆಳಕು ಚೆಲ್ಲಿದವರಲ್ಲಿ ಬಾಬೂಜೀ ಹಾಗೂ ಅಂಬೇಡ್ಕರ್ ಅಗ್ರಗಣ್ಯರು. ವ್ಯಕ್ತಿತ್ವ, ನಡೆ-ನುಡಿ ಬದ್ದತೆ, ಕ್ರೀಯಾಶೀಲತೆಯಲ್ಲಿ ಇಂದಿನ ರಾಜಕಾರಣಿಗಳಿಗೆ ಬಾಬೂಜೀ ಮಾದರಿಯಾಗಿದ್ದಾರೆ ಇವರು, ಅಂಬೇಡ್ಕರ್ ರವರು ಕಾರ್ಮಿಕ ಕಾಯ್ದೆಗೆ ಭದ್ರ ಬುನಾದಿ ಹಾಕಿದರು. ಅದರ ಅನುಷ್ಠಾನದಲ್ಲಿ ಬಾಬೂಜೀ ಕಾಣಿಕೆ ಅಪಾರವಾಗಿದೆ. ಕಾರ್ಮಿಕರ ರಕ್ಷಣೆ, ಸಬಲೀಕರಣಕ್ಕೆ ನಾಂದಿ ಹಾಡಿ, ಕಾರ್ಮಿಕರು ದೇಶದಲ್ಲಿ ಸುಭದ್ರ ಜೀವನ ನಡೆಸಲು ಈ ಇಬ್ಬರು ಮಹನೀಯರು ಕಾರಣೀಭೂತರಾಗಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ಅಂಚೆ ಕಚೇರಿ ಸ್ಥಾಪನೆ ಮೂಲಕ ಪ್ರತಿ ಹಳ್ಳಿ ಹಳ್ಳಿಗಳಲ್ಲಿಯೂ ಜನರ ಹೂಡಿಕೆಯನ್ನು ಪ್ರೋತ್ಸಾಹಿಸಿ ಜನಸಾಮಾನ್ಯರು ಆರ್ಥಿಕ ಸದೃಢತೆ ಹೊಂದಲು ನೆರವಾದರು ಎಂದರು.

ಕಾರ್ಯಕ್ರಮದಲ್ಲಿ ತಹಶೀಲ್ದಾರ್ ನಿಸರ್ಗ ಪ್ರಿಯಾ ಮಾತನಾಡಿ ಹಸಿರು ಕ್ರಾಂತಿಯ ಹರಿಕಾರ ಡಾ.ಬಾಬು ಜಗಜೀವನ ರಾಮ್ ದೇಶದಲ್ಲಿ ಉತ್ತಮ ಆಹಾರ ನೀತಿಯನ್ನು ಅನುಷ್ಠಾನಗೊಳಿಸಿ ರೈತರ ಬೆನ್ನೆಲುಬಾಗಿ ನಿಂತರು. ಶೋಷಿತರ ಪರವಾಗಿ ವಿದ್ಯಾರ್ಥಿ ದೆಸೆಯಲ್ಲಿಯೇ ಹೋರಾಡಿದ ಬಾಬೂಜೀ ಹಲವಾರು ಮಹೋನ್ನತ ಸ್ಥಾನಗಳನ್ನು ಅಲಂಕರಿಸಿ ದೇಶದ ರಾಜಕೀಯ ಕ್ಷೇತ್ರಕ್ಕೆ ಮೆರುಗು ತಂದಿದ್ದಾರೆ. ಸಮಾಜ ಸುಧಾರಕರು, ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಜಗಜೀವನರಾಮ್ ಚಿಂತನೆಗಳು, ರಾಜಕೀಯ ಮಜಲುಗಳು ದೇಶದ ಜನರಿಗೆ ಅರ್ಥವಾಗಬೇಕಿದೆ. ಅವರ ರಾಜಕೀಯ ಸಾಧನೆ ಅವಿಸ್ಮರಣೀಯ ವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಎಡಿಎಲ್ಆರ್ ಮುನಿಯಪ್ಪ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಶಿರಸ್ಥೇದಾರ್ ಸಣ್ಣಸ್ವಾಮಿ, ತಾಪಂ ಸಹಾಯಕ ನಿರ್ದೆಶಕ ರಂಗನಾಥ್, ಅಬಕಾರಿ ನಿರೀಕ್ಷಕ ವೆಂಕಟೇಶ್, ಕೆಸ್ಆರ್ಟಿಸಿ ವ್ಯವಸ್ಥಾಪಕ ದರ್ಶನ್ ರಾಮಚಂದ್ರ, ಸರ್ಕಾರಿ ನೌಕಕರ ಸಂಘದ ಅಧ್ಯಕ್ಷ ಕೃಷ್ಣೇಗೌಡ, ಎಪಿಎಂಸಿ ಸಹಾಕಯ ಅಧಿಕಾರಿ ಟಿ.ಎಸ್.ಚಲುವರಾಯಿ, ಆದಿ ಜಾಬಂವ ಸಂಘದ ಗೌರವಾಧ್ಯಕ್ಷ ಭೂತನಹಳ್ಳಿ ಶಿವಣ್ಣ, ದಸಂಸ ಮುಖಂಡರಾದ ಪಿ.ಮಹದೇವ್, ಭೀಮ್ ಆರ್ಮಿ ಗಿರೀಶ್, ಸಮಾಜ ಕಲ್ಯಾಣ ಇಲಾಖೆ ಸಿಬ್ಬಂಧಿಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು