ಮೈಸೂರು : ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಲ್ಲಿ ಒಂದಾದ “ ಯುವ ನಿಧಿ ‘ ಕಾರ್ಯಕ್ರಮವು ನಿರುದ್ಯೋಗ ಅಭ್ಯರ್ಥಿಗಳ ಆಶಾಕಿರಣವಾಗಿದ್ದು ,
ಈ ಯೋಜನೆಯಲ್ಲಿ ಪದವಿ / ಸ್ನಾತಕೋತ್ತರ ಪದವಿ ಡಿಪ್ಲೋಮ ಪಡೆದ ನಿರುದ್ಯೋಗ ಅಭ್ಯರ್ಥಿಗಳಿಗೆ 2023-2024 ನೇ ಸಾಲಿನಲ್ಲಿ ಯುವ ನಿಧಿ ಕಾರ್ಯಕ್ರಮದ ಅಡಿಯಲ್ಲಿ ಪದವಿಧರರಿಗೆ ಮಾಸಿಕ 3,000/- ಹಾಗೂ ಡಿಪ್ಲೋಮ ದಾರರಿಗೆ ಮಾಸಿಕ 1,500/- ಗಳನ್ನು ಸರ್ಕಾರದ ವತಿಯಿಂದ ನೀಡಲಾಗುತ್ತಿದೆ , 2024-2025 ನೇ ಶಿಕ್ಷಣದಿಂದ ವ್ಯಾಸಂಗ ಮಾಡಿ 2025 ರಲ್ಲಿ ತೇರ್ಗಡೆಯಾಗುವ ಪದವಿ / ಸ್ನಾತಕೋತ್ತರ ಪದವಿ ಡಿಪ್ಲೋಮ ಅಭ್ಯರ್ಥಿಗಳಿಗೆ ಯುವನಿಧಿ ಯೋಜನೆ ಅಡಿ ಮೈಸೂರು ಜಿಲ್ಲೆಯ ಅಭ್ಯರ್ಥಿಗಳನ್ನು ಹೆಚ್ಚಿನ ಸಂಖ್ಯೆಯ ಯುವನಿಧಿ ಯೋಜನೆ ವ್ಯಾಪ್ತಿಗೆ ತರಲು ನೋಂದಾಯಿಸಲು ಸರ್ಕಾರವು ಅನುಮತಿ ನೀಡಿದೆ ಸಂಬ ಎ ಧ ಸಹಾಯಕ ನಿರ್ದೇಶಕರು , ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ , ನಂ . 323, 10 ನೇ ಮೇನ್ , ಸನ್ಮಾರ್ಗ , ಸಿದ್ದಾರ್ಥನಗರ ಮೈಸೂರು -11 ( ಜೆ . ಎಸ್ . ಎಸ್ ಪಬ್ಲಿಕ್ ಸ್ಕೂಲ್ ಹಿಂಭಾಗ ) ಇಲ್ಲಿ ದಿನಾಂಕ : 07-07-2025 ರಿಂದ 07-08-2025 ರ ವರೆಗೆ ವಿಶೇಷ ನೋಂದಣಿ ಅಭಿಯಾನ ‘ ಮಾಡಲಾಗಿದೆ .
ಮೈಸೂರು ಜಿಲ್ಲೆಯ ಸಮಸ್ತ ನಿರುದ್ಯೋಗ ಪದವಿ / ಸ್ನಾತಕೋತ್ತರ ಪದವಿ ಡಿಪ್ಲೋಮ ಅಭ್ಯರ್ಥಿಗಳು ಇದರ ಸದುಪಯೋಗವನ್ನು ಪಡೆಯಬೇಕಾಗಿದೆ . ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 0821-2489972 ಅನ್ನು ಸಂಪರ್ಕಿಸಿ ಮಾಹಿತಿ ಪಡೆಯಲಾಗಿದೆ ಎಂದು ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ ಸಹಾಯಕ ನಿರ್ದೇಶಕರಾದ ಡಿ . ಎಂ . ರಾಣಿ ಅವರು ಪ್ರಕಟಣೆಯಲ್ಲಿ ಪ್ರಕಟಿಸಿದರು .














