ಮನೆ ಸುದ್ದಿ ಜಾಲ ಕೀಲಾರದಲ್ಲಿ ಗ್ರಂಥಾಲಯ ಕಟ್ಟಡ ಉದ್ಘಾಟನೆ

ಕೀಲಾರದಲ್ಲಿ ಗ್ರಂಥಾಲಯ ಕಟ್ಟಡ ಉದ್ಘಾಟನೆ

0

ಮಂಡ್ಯ: ತಾಲ್ಲೂಕಿನ ಕೀಲಾರ ಗ್ರಾಮದಲ್ಲಿ ರೋಟರಿ ಕ್ಲಬ್‌ ವಿಜಯನಗರ, ಬೆಂಗಳೂರು ಮತ್ತು ಶಾಲೆಯ ಹಳೆ ವಿದ್ಯಾರ್ಥಿಗಳ ಹಾಗೂ ದಾನಿಗಳಾದ ಅರುಣ್‌ ಮುದ್ದೇಗೌಡ ಮತ್ತು ಕಿರಣ್‌ಕುಮಾರ್ ಇವರ ಸಹಾಯದಡಿ ಗ್ರಂಥಾಲಯ ಕಟ್ಟಡ ನಿರ್ಮಿಸಿರುವ ಹಿನ್ನಲೆಯಲ್ಲಿ ಇದರ ಉದ್ಘಾಟನಾ ಸಮಾರಂಭ ನಡೆಯಿತು.

ಅರುಣ್‌ ಮುದ್ದೇಗೌಡ ಮಾತನಾಡಿ, ಒಂದರಿಂದ ಏಳನೇ ತರಗತಿವರೆಗೆ ಇದೇ ಶಾಲೆಯಲ್ಲಿ ವ್ಯಾಸಂಗ ಮಾಡಿ ಈಗ ನಮ್ಮ ಶಾಲೆಯನ್ನು ಅಭಿವೃದ್ಧಿ ಮಾಡಲು ನನಗೆ ಅಭಿಮಾನವಿದೆ. ಗ್ರಾಮಸ್ಥರ ಸಹಕಾರದಿಂದ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ಕೆಲಸ ಮಾಡುತ್ತೇನೆ ಎಂದರು.

ಶಾಲೆಯ ಉಳಿವಿಗೆ ಹಾಗೂ ಅದರ ಅಭಿವೃದ್ಧಿಗೆ ಶಾಲೆಯಲ್ಲಿ ಓದಿದವರೆಲ್ಲರೂ ಸಹಕರಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಮನವಿ ಮಾಡಿದರು.

ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ.ಎನ್‌.ರಮೇಶ್‌ ಮಾತನಾಡಿ, ಇವತ್ತು ನಮ್ಮ ಶಾಲೆಯಲ್ಲಿ ಗ್ರಂಥಾಲಯ ಮಾಡಬೇಕೆಂದು ಕೇಳಿಕೊಂಡಾಗ ಅರುಣ್‌ ಮುದ್ದೇಗೌಡ ಅವರ ಪರವಾಗಿ ನಿಂತಿದ್ದೇವೆ, ಆಟದ ಮೈದಾನ ಮತ್ತು ಕೊಠಡಿ ಕಟ್ಟಿಸಿಕೊಡುವುದು ಸೇರಿದಂತೆ ಹಲವು ಸೌಲಭ್ಯವನ್ನು ನೀಡಿದ್ದಾರೆ, ಜೊತೆಗೆ ರೋಟರಿಯವರಿಗೆ ಧನ್ಯವಾದವನ್ನು ತಿಳಿಸುತ್ತೇನೆ ಎಂದರು.

ನಿವೃತ್ತ ಶಿಕ್ಷಕ ಕೆ.ಪಿ.ವೀರಪ್ಪ ಮಾತನಾಡಿ, ಈ ಕೀಲಾರ ಗ್ರಾಮ ಹುಟ್ಟಿ ಪಾವನವಾಯಿತು. ಬಡಕುಟುಂಬದಲ್ಲಿ ಹುಟ್ಟಿರುವಂತಹ ಕೆ.ವಿ.ಶಂಕರಗೌಡ ಅವರು ರಾಜ್ಯಕ್ಕೇ ಜ್ಞಾನ ಜ್ಯೋತಿಯನ್ನು ಬೆಳೆಗಿಸಿರುವ ಇವರು ನಮ್ಮೂರಲ್ಲಿ ಜನಿಸಿದ್ದಾರೆ. ಇವರ ಹಾದಿಯಲ್ಲಿಯೇ ಸಾಗುವ ಮನೋಭಾವ ಇಟ್ಟುಕೊಂಡಿರುವ ಅರುಣ್‌ ಮುದ್ದೇಗೌಡ ಸೇರಿದಂತೆ ಈ ಶಾಲೆಯ ಅಭಿವೃದ್ಧಿಗೆ ಶ್ರಮಿಸುತ್ತಿರುವವರಿಗೆ ಕೃತಜ್ಙತೆ ಸಲ್ಲಿಸುತ್ತೇನೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಗ್ರಾ.ಪಂ.ಅಧ್ಯಕ್ಷ ಶಿವಶಂಕರ್‌, ದಾನಿಗಳಾದ ಕಿರಣ್‌ ಹೊನ್ನಾಯಕನಹಳ್ಳಿ, ಎಸ್‌ಡಿಎಂಸಿ ಉಪಾಧ್ಯಕ್ಷೆ ಭವ್ಯಾ, ಸದಸ್ಯರಾದ ಚಂದ್ರಶೇಖರ್, ಶಿವರಾಂ, ವೀರೇಶ್‌, ಮುಖ್ಯ ಶಿಕ್ಷಕ ಸುಂದರ್‌ರಾಜ್‌, ಬಿಆರ್‌ಸಿ ಅಂಜುಂ ಭಾಗವಹಿಸಿದ್ದರು. ಮುಖಂಡರಾದ ಉಮಾ ಅರುಣ್‌ಮುದ್ಧೇಗೌಡ, ಮಹೇಂದ್ರ, ಕುಮಾರಸ್ವಾಮಿ ಭಾಗವಹಿಸಿದ್ದರು.