ಮನೆ ಸ್ಥಳೀಯ ಶಕ್ತಿ ಯೋಜನೆಯು ಸಾಧಿಸಿದ ಐತಿಹಾಸಿಕ ಮೈಲಿಗಲ್ಲು: 500 ಕೋಟಿ ಮಹಿಳೆಯರ ಪ್ರಯಾಣ : ಜುಲೈ...

ಶಕ್ತಿ ಯೋಜನೆಯು ಸಾಧಿಸಿದ ಐತಿಹಾಸಿಕ ಮೈಲಿಗಲ್ಲು: 500 ಕೋಟಿ ಮಹಿಳೆಯರ ಪ್ರಯಾಣ : ಜುಲೈ 14ರಂದು ರಾಜ್ಯಾದ್ಯಂತ ಸಂಭ್ರಮ

0

ಮೈಸೂರು: ಈವರೆಗೆ ಶಕ್ತಿ ಯೋಜನೆಯಲ್ಲಿ ೫೦೦ ಕೋಟಿ ಮಹಿಳೆಯರು ಓಡಾಡಿದ್ದಾರೆ. ಇದೊಂದು ದೊಡ್ಡ ಮೈಲಿಗಲ್ಲಾಗಿದ್ದು ಈ ಮೂಲಕ ನಮ್ಮ ಸರ್ಕಾರ ಇಡೀ ದೇಶದಲ್ಲೇ ದೊಡ್ಡ ದಾಖಲೆ ಬರೆದಿದೆ. ಇದನ್ನು ಜು.೧೪ರಂದು ಸಂಭ್ರಮಿಸುವ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಗ್ಯಾರೆಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷೆ ಡಾ.ಪುಷ್ಪಾ ಅಮರನಾಥ್ ನುಡಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈವರೆಗೆ ನಮ್ಮ ಶಕ್ತಿ ಯೋಜನೆಯಲ್ಲಿ ೫೦೦ ಕೋಟಿ ಮಹಿಳೆಯರು ಓಡಾಡಿದ್ದಾರೆ. ಈ ಹಿನ್ನೆಲೆಯಲ್ಲಿ ನಮ್ಮ ರಾಜ್ಯ ಸರ್ಕಾರ ಜಿಲ್ಲಾ ತಾಲೂಕು ಮಟ್ಟದಲ್ಲಿ ೫ ಶತಕ ಮಹಿಳಾ ಸಂಭ್ರಮ ಆಚರಿಸುತ್ತಿದೆ. ನಮ್ಮದು ಮೊದಲೇ ಬಡವರ ಪರ ಮಹಿಳೆಯರ ಪರವಾದ ಸರ್ಕಾರ. ಮಹಿಳೆಯರಿಗೆ ಶಕ್ತಿ ತುಂಬುವ ಮೂಲಕ ನಮ್ಮ ಸರ್ಕಾರ ಇಡೀ ದೇಶದಲ್ಲೇ ದೊಡ್ಡ ದಾಖಲೆ ಬರೆದಿದೆ. ನಮ್ಮ ರಾಜ್ಯದಲ್ಲಿ ಮಹಿಳೆಯರು ಸಾರಿಗೆ ಸ್ವಾತಂತ್ರ್ಯ ಅನುಭವಿಸುವ ಅವಕಾಶವನ್ನ ನಮ್ಮ ಸರ್ಕಾರ ಮಾಡಿಕೊಟ್ಟಿದೆ. ಇದೇ ೧೪ ನೇ ತಾರೀಕು ಈ ಯಶಸ್ಸನ್ನ ಸಿಹಿ ಹಂಚಿ ಮಹಿಳೆಯರೊಂದಿಗೆ ಪ್ರಯಾಣಿಸಿ ಸಂಭ್ರಮಿಸಲು ತೀರ್ಮಾನಿಸಿದ್ದೇವೆ ಎಂದರು.

ಈವರೆಗೆ ಮೈಸೂರಲ್ಲಿ ಶಕ್ತಿ ಯೋಜನೆಗೆ ೭೭೬.೮ ಕೋಟಿ ಹಣ ವ್ಯವವಾಗಿದೆ. ರಾಜ್ಯದಲ್ಲಿ ೧೨೦೦೦,೭೩೩.೮೦ ಕೋಟಿ ಹಣ ವ್ಯಯವಾಗಿದೆ. ಇಷ್ಟು ದೊಡ್ಡ ಮೊತ್ತವನ್ನ ಇಡೀ ದೇಶದಲ್ಲೇ ಯಾವ ಸರ್ಕಾರವೂ ಕೊಟ್ಟಿಲ್ಲ. ಈ ಸಂಭ್ರಮದ ಹಿನ್ನೆಲೆಯಲ್ಲಿ ಜು.೧೪ರಂದು ದೃಷ್ಟಿ ಹೀನರಿಗಾಗಿ ವಿಶೇಷ ಉಪಕರಣ ಅಳವಡಿಸಿರುವ ನೂತನ ಸಾರಿಗೆ ಬಸ್ ಗಳನ್ನ ಸಚಿವ ರಾಮಲಿಂಗರೆಡ್ಡಿ ಮೈಸೂರಿನಲ್ಲಿ ಲೋಕಾರ್ಪಣೆ ಮಾಡಲಿದ್ದಾರೆ. ನಗರ ಬಸ್ ನಿಲ್ದಾಣದಲ್ಲಿ ಮೊದಲ ಹಂತದಲ್ಲಿ ೨೦೦ ಬಸ್ ಲೋಕಾರ್ಪಣೆ ಆಗಲಿದೆ. ಈ ವೇಳೆ ಜಿಲ್ಲಾ ಉಸ್ತುವಾರಿ ಸಚಿವರು, ಸ್ಥಳೀಯ ಜನ ಪ್ರತಿನಿಧಿಗಳು ಭಾಗಿಯಾಗಲಿದ್ದಾರೆ ಎಂದು ತಿಳಿಸಿದರು.
ಆಷಾಢ ಶುಕ್ರವಾರ ಮೈಸೂರು ಸಾಕಷ್ಟು ಕಳೆಗಟ್ಟಿಕೊಂಡಿದೆ. ಈ ಬಾರಿ ವಿಶೇಷವಾಗಿ ಹೆಚ್ಚು ಮಹಿಳೆಯರು ಭಾಗವಹಿಸಿದ್ದಾರೆ. ದಸರೆಗೂ ಹೆಚ್ಚಿನ ಮಹಿಳೆಯರು ಬರುವ ನಿರೀಕ್ಷೆಯಿದೆ. ಲಕ್ಷಾಂತರ ಮಂದಿ ಮಹಿಳೆಯರು ಆಗಮಿಸಲು ಗ್ಯಾರಂಟಿ ಯೋಜನೆಗಳೇ ಕಾರಣವಾಗಿದೆ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಅಧ್ಯಕ್ಷ ಅರುಣ್ ಕುಮಾರ್, ಉಪಾಧ್ಯಕ್ಷ ಪ್ರೊ.ಶಿವಕುಮಾರ್, ಕೆಎಸ್ ಆರ್ಟಿಸಿ ಜಿಲ್ಲಾಧಿಕಾರಿ ದಿನೇಶ್ ಕುಮಾರ್, ಮಾಜಿ ಮೇಯರ್ ಮೋದಾಮಣಿ ಇನ್ನಿತರರು ಉಪಸ್ಥಿತರಿದ್ದರು.