ಮನೆ ಅಪರಾಧ ಫೋಟೋ ತೆಗೆಯುವ ನೆಪದಲ್ಲಿ ಗಂಡನನ್ನೇ ನದಿಗೆ ತಳ್ಳಿದ ಪತ್ನಿ!

ಫೋಟೋ ತೆಗೆಯುವ ನೆಪದಲ್ಲಿ ಗಂಡನನ್ನೇ ನದಿಗೆ ತಳ್ಳಿದ ಪತ್ನಿ!

0

ರಾಯಚೂರು: ಫೋಟೋ ತೆಗೆಯುವ ನೆಪದಲ್ಲಿ ಪತ್ನಿ ತನ್ನ ಪತಿಯನ್ನೇ ನದಿಗೆ ತಳ್ಳಿದ ಘಟನೆ ರಾಯಚೂರಿನಲ್ಲಿ ನಡೆದಿದೆ. ರಾಯಚೂರಿನ ಗುರ್ಜಾಪುರ ಬ್ರಿಡ್ಜ್ ಕಂ ಬ್ಯಾರೇಜ್ ಬಳಿ ನಡೆದಿದ್ದು, ಫೋಟೂ ಶೂಟ್ ನೆಪದಲ್ಲಿ ಪತ್ನಿಯೇ ತನ್ನ ಪತಿಯನ್ನು ನದಿಗೆ ತಳ್ಳಿದ್ದಾರೆ. ಇದನ್ನು ಕಂಡ ಸ್ಥಳೀಯರು ಕೂಡಲೇ ಹಗ್ಗಗಳ ಸಹಾಯದಿಂದ ಪತಿಯನ್ನು ರಕ್ಷಣೆ ಮಾಡಿದ್ದಾರೆ. ಈ ಕುರಿತ ವಿಡಿಯೋ ಇದೀಗ ವ್ಯಾಪಕ ವೈರಲ್ ಆಗುತ್ತಿದೆ.

ರಾಯಚೂರಿನ ಶಕ್ತಿನಗರ ನಿವಾಸಿ ತಾತಪ್ಪ ನೀರಿಗೆ ಬಿದ್ದ ಪತಿಯಾಗಿದ್ದು, ಅವರ ಪತ್ನಿ ಗದ್ದೆಮ್ಮ ಅವರೇ ನೀರಿಗೆ ತಳ್ಳಿದ್ದಾರೆ. ನೀರಿಗೆ ಬಿದ್ದ ಕೂಡಲೇ ನದಿಯಲ್ಲಿ ಈಜಿ ಕಲ್ಲು ಬಂಡೆಯ ಮೇಲೆ ನಿಂತು ಕಾಪಾಡಿ ಅಂತ ಕೂಗಿಕೊಂಡಿದ್ದಾರೆ. ಈ ವೇಳೆ ಬ್ರಿಡ್ಜ್ ಕಂ ಬ್ಯಾರೇಜ್ ಮಾರ್ಗವಾಗಿ ಹೊರಟಿದ್ದ ಬುಲೆರೋ ವಾಹನದಲ್ಲಿದ್ದವರು ಹಾಗೂ ಕೆಬಿಜೆಎನ್‌ಎಲ್ ಸಿಬ್ಬಂದಿ, ಸ್ಥಳೀಯರು ನದಿಗೆ ಹಗ್ಗ ಎಸೆದು ತಾತಪ್ಪ ಅವರನ್ನು ರಕ್ಷಿಸಿದ್ದಾರೆ. ನದಿಯಿಂದ ಹೊರಗೆ ಬಂದ ಪತಿ ತನ್ನ zಪತ್ನಿಯ ವಿರುದ್ಧ ಗರಂ ಆಗಿದ್ದು, ಫೋನ್‌ನಲ್ಲಿ ಸಂಬಂಧಿಕರಿಗೆ ಮಾಹಿತಿ ನೀಡಿದ್ದಾರೆ. ಕಳೆದ ಎರಡು ದಿನಗಳ ಹಿಂದೆ ನಡೆದ ಘಟನೆಯ ವಿಡಿಯೋ ಈಗ ವೈರಲ್ ಆಗಿದೆ.

ಯಾದಗಿರಿಯ ವಡಗೆರಾ ತಾಲೂಕಿನ ಗದ್ದೆಮ್ಮ ಹಾಗೂ ತಾತಪ್ಪ ಕಳೆದ ಏ.೧೦ರಂದು ಮದುವೆಯಾಗಿದ್ದರು. ಮದುವೆಯಾಗಿ ಮೂರು ತಿಂಗಳಲ್ಲೇ ಸಂಸಾರದಲ್ಲಿ ಬಿರುಕು ಮೂಡಿ, ಜಗಳವಾಡುತ್ತಿದ್ದರು. ಆ ಜಗಳವೇ ಈ ಘಟನೆಗೆ ಕಾರಣ ಎಂದು ತಾತಪ್ಪ ಆರೋಪಿಸಿದ್ದಾರೆ. ಪತ್ನಿಯನ್ನು ತುಂಬಾ ನಂಬಿದ್ದೆ ಇನ್ನು ಘಟನೆ ಕುರಿತು ಮಾತನಾಡಿರುವ ಪತಿ ತಾತಪ್ಪ, ‘ಪತ್ನಿಯನ್ನು ನಂಬಿ ಫೋಟೋ ತೆಗೆಸಿಕೊಳ್ಳಲು ನಿಂತಿದ್ದೆ. ಆದರೆ ಆಕೆ ನನ್ನನ್ನು ನದಿಗೆ ತಳ್ಳಿದ್ದಾಳೆ ಎಂದು ತಾತಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೆ ಪತ್ನಿ ಮಾತ್ರ ಈ ಆರೋಪ ಅಲ್ಲಗಳೆದಿದ್ದು, ನಾನು ಅವರನ್ನು ನದಿಗೆ ತಳ್ಳಿಲ್ಲ. ಅವರೇ ಕಾಲು ಜಾರಿ ನದಿಗೆ ಬಿದ್ದರು ಎಂದು ಹೇಳಿದ್ದಾರೆ.

ಘಟನೆ ಬಳಿಕ ಒಟ್ಟಾಗಿಯೇ ಬೈಕ್‌ನಲ್ಲಿ ಪತಿ-ಪತ್ನಿ ಹೊರಟು ಹೋಗಿದ್ದಾರೆ. ರಾಯಚೂರು ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.