ಮನೆ ರಾಜ್ಯ ಸರ್ಕಾರದ ವೆಚ್ಚದಲ್ಲಿ ವಿಮಾನ ಪ್ರಯಾಣ ಮಾಡುವವರಿಗೆ ಕೇಂದ್ರದಿಂದ ನೂತನ ಆದೇಶ

ಸರ್ಕಾರದ ವೆಚ್ಚದಲ್ಲಿ ವಿಮಾನ ಪ್ರಯಾಣ ಮಾಡುವವರಿಗೆ ಕೇಂದ್ರದಿಂದ ನೂತನ ಆದೇಶ

0

ನವದೆಹಲಿ(New Delhi) :  ಸರ್ಕಾರಿ ಉದ್ಯೋಗಿಗಳು ಸರ್ಕಾರದ ವೆಚ್ಚದಲ್ಲಿ ಪ್ರಯಾಣ ನಡೆಸುವಾಗ ಲಭ್ಯವಿರುವ ಅತಿ ಅಗ್ಗದ ಬೆಲೆಯಲ್ಲಿ ವಿಮಾನದ ಟಿಕೆಟ್‌ಗಳನ್ನು ಖರೀದಿಸಬೇಕು ಹಾಗೂ ಪ್ರವಾಸದ 21 ದಿನಗಳ ಮುಂಚಿತವಾಗಿ ಟಿಕೆಟ್‌ ಬುಕ್‌ ಮಾಡಬೇಕು ಎಂದು ಸಚಿವಾಲಯ ಆದೇಶ ಹೊರಡಿಸಿದೆ.

ಸರ್ಕಾರಿ ವೆಚ್ಚದಲ್ಲಿ ಪ್ರಯಾಣ ಮಾಡುವಾಗ ಉದ್ಯೋಗಿಗಳು, ಬಾಲ್ಮರ್‌ ಲೌರಿ ಮತ್ತು ಕೊ, ಅಶೋಕ ಟ್ರಾವೆಲ್ಸ್‌ ಆ್ಯಂಡ್‌ ಟೂ​ರ್ಸ್ ಹಾಗೂ ಐಆರ್‌ಸಿಟಿಸಿ ಈ ಮೂರು ಅಧಿಕೃತ ಟ್ರಾವೆಲ್‌ ಏಜೆಂಟ್‌ಗಳ ಬಳಿಯಿಂದ ಮಾತ್ರ ವಿಮಾನ ನಿಲ್ದಾಣದ ಟಿಕೆಟ್‌ಗಳನ್ನು ಖರೀದಿಸಬಹುದಾಗಿದೆ. ಉದ್ಯೋಗಿಗಳು ತಮ್ಮ ನಿಗದಿತ ಪ್ರಯಾಣ ವರ್ಗದಲ್ಲಿ ಲಭ್ಯವಿರುವ ಅತಿ ಅಗ್ಗದ ಬೆಲೆಯ ವಿಮಾನಗಳ ಟಿಕೆಟ್‌ ಖರೀದಿಸಬೇಕು ಎಂದು ಸೂಚಿಸಿದೆ.

ಉದ್ಯೋಗಿಗಳು ಪ್ರವಾಸದ ಕಾರ್ಯಕ್ರಮವು ಅನುಮೋದನೆ ಪ್ರಕ್ರಿಯೆಯಲ್ಲಿದ್ದರೂ ಉದ್ದೇಶಿತ ಪ್ರಯಾಣಕ್ಕಾಗಿ ಬುಕಿಂಗ್‌ ಮಾಡಬಹುದು. ಆದರೆ ಅನಗತ್ಯವಾಗಿ ಟಿಕೆಟ್‌ ರದ್ದು ಮಾಡಬಾರದು ಎಂದು ಸೂಚಿಸಿದೆ.

ಒಂದು ವೇಳೆ ಪ್ರಯಾಣದ 72 ಗಂಟೆಗಳ ಒಳಗಾಗಿ ಅಧಿಕ ಬೆಲೆಯಲ್ಲಿ ಟಿಕೆಟ್‌ ಬುಕ್‌ ಮಾಡಿದರೆ, ಅಥವಾ ಪ್ರಯಾಣದ 24 ಗಂಟೆಗಳ ಒಳಗಾಗಿ ಟಿಕೆಟ್‌ ರದ್ದುಗೊಳಿಸಿದರೆ ಉದ್ಯೋಗಿ ಸ್ವಯಂ ಘೋಷಿತ ಸಮರ್ಥನೆಯನ್ನು ಸಲ್ಲಿಸುವುದು ಅನಿವಾರ್ಯವಾಗಿದೆ ಎಂದು ನಿರ್ದೇಶನ ನೀಡಲಾಗಿದೆ