ದಾವಣಗೆರೆ: ರಾಜ್ಯದಲ್ಲಿ ಹೃದಯಾಘಾತದಿಂದ ಸಾವಿನ ಸರಣಿ ಮುಂದುವರೆದಿದೆ. ದಾವಣಗೆರೆಯಲ್ಲಿ ದೈಹಿಕ ಶಿಕ್ಷಕನೊಬ್ಬ ಹೃದಾಯಾಘತಕ್ಕೆ ಒಳಗಾಗಿ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ.
ದಾವಣಗೆರೆ ಜಿಲ್ಲೆಯ ಹೊನ್ನಾಳಿ ಪಟ್ಟಣದ ಬಿವಿಎಸ್ ಶಾಲೆಯ ದೈಹಿಕ ಶಿಕ್ಷಕ ರವಿಕುಮಾರ್(28) ಸಾವನ್ನಪ್ಪಿದ್ದಾರೆ. ಶಾಲೆಯಲ್ಲೇ ಕುಸಿದು ಬಿದ್ದು ದೈಹಿಕ ಶಿಕ್ಷಕ ರವಿಕುಮಾರ್ ಸಾವನ್ನಪ್ಪಿದ್ದಾರೆ.
ದೈಹಿಕ ಶಿಕ್ಷಕ ರವಿಕುಮಾರ್ 8 ವರ್ಷದ ಪುತ್ರಿ, 6 ವರ್ಷದ ಪುತ್ರನ ಜೊತೆಗೆ ಶಾಲೆಗೆ ಬರುತ್ತಿದ್ದರು. ಇದು ಶಾಲೆಯಲ್ಲಿ ಇದ್ದಾಗಲೇ ಹೃದಯಾಘಾತದಿಂದ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ.














