ಯಶ್ ತಾಯಿ ಪುಷ್ಪಾ ಅರುಣ್ಕುಮಾರ್ ಕೊತ್ತಲವಾಡಿ ಸಿನಿಮಾ ನಿರ್ಮಾಣ ಮಾಡಿ, ತೆರೆಗೆ ತಂದಿದ್ದಾರೆ. ಈ ಸಿನಿಮಾ ರಿಲೀಸ್ ಬಳಿಕ ಖಾಸಗಿ ವಾಹಿನಿಯೊಂದಕ್ಕೆ ಸಂದರ್ಶನ ನೀಡಿದ್ದಾರೆ. ಈ ವೇಳೆ ಎದುರಾದ ಪ್ರಶ್ನೆಗೆ ಉತ್ತರಿಸಿರುವ ಪುಷ್ಪಾ ಅರುಣ್ಕುಮಾರ್ ದೀಪಿಕಾ ದಾಸ್ ಬಗ್ಗೆ ಮಾತನಾಡಿದ್ದಾರೆ.
ದೀಪಿಕಾ ದಾಸ್ ಅವರಿಗೆ ಮುಂದಿನ ಸಿನಿಮಾದಲ್ಲಿ ಚಾನ್ಸ್ ಕೊಡುತ್ತಾರಂತೆ ಎನ್ನುವ ಪ್ರಶ್ನೆಗೆ ಉತ್ತರಿಸಿದ ಪುಷ್ಪ ಅರುಣ್ಕುಮಾರ್. ನಮಗೂ ದೀಪಿಕಾ ದಾಸ್ಗೆ ಆಗೊಲ್ಲ. ಅವಳು ಯಾವ ದೊಡ್ಡ ಹೀರೋಯಿನ್ ಅಂತಾ ಆಯ್ಕೆ ಮಾಡಿಕೊಳ್ಳಲಿ, ಅವಳು ಏನು ಸಾಧನೆ ಮಾಡಿದ್ದಾಳೆ. ಅವಳು ಸಂಬಂಧ ಆದರೂ ದೂರದಲ್ಲೇ ಇಟ್ಟಿದ್ದೀವಿ, ಈಥರ ಪ್ರಶ್ನೆ ಕೇಳಬೇಡಿ ನಮ್ಮ ಮಗ ಬೈಯೋದಿಲ್ವಾ..? ಎಂದು ಗರಂ ಆಗಿ ಉತ್ತರಿಸಿದ್ದಾರೆ.
ಹೊಸ ಕಲಾವಿದರನ್ನ ಬೆಳೆಸೋ ಜನರು ಕಲಾವಿದರಿಗೆ ಬೆಲೆ ಕೊಡುವುದನ್ನ ಕಲಿತಿರಬೇಕು. ಇಲ್ಲಿಯವರೆಗೂ ಯಾರ ಹೆಸರನ್ನೂ ಹೇಳಿಕೊಂಡು ಬಂದಿಲ್ಲ ಮುಂದೆನೂ ಬರೊಲ್ಲ. ಕೆಲವರಿಗೆ ಬೆಲೆಕೊಟ್ಟ ಮಾತ್ರಕ್ಕೆ ಯಾರನ್ನು ಕಂಡು ಭಯ ಯಾರಿಗೂ ಇಲ್ಲ. ಅದು ಅಮ್ಮ ಆದರೂ ಸರಿ, ದೊಡ್ಡöಮ್ಮ ಆದರೂ ಸರಿ.
ವಿಥ್ ಡ್ಯೂ ರೆಸ್ಪೆಕ್ಟ್ ಟು ಸ್ಟಾರ್ ಆಫ್ ಅವರ್ ಇಂಡಸ್ಟ್ರಿ. ನಾನು ಯಾವ ದೊಡ್ಡ ನಟಿ ಅಲ್ಲದಿದ್ದರೂ, ಏನು ಸಾಧನೆ ಮಾಡದಿದ್ದರೂ.. ನನ್ನ ಬಗ್ಗೆ ಹೀನಾಯವಾಗಿ ಮಾತನಾಡುವ ಯೋಗ್ಯತೆ ಯಾರಿಗೂ ಇಲ್ಲ’ ಎಂದು ಯಶ್ ತಾಯಿಗೆ ದೀಪಿಕಾ ತಿರುಗೇಟು ಕೊಟ್ಟಿದ್ದಾರೆ.
ಪುಷ್ಪ ಅರುಣ್ಕುಮಾರ್ ಮಾತನಾಡಿರುವ ಈ ವಿಡಿಯೋ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದ್ದಂತೆ. ಈ ವಿಡಿಯೋ ಬಗ್ಗೆ ನಟಿ ದೀಪಿಕಾ ದಾಸ್ ಸಾಮಾಜಿಕ ಜಾಲತಾಣದ ಮೂಲಕ ತಿರುಗೇಟು ನೀಡಿದ್ದಾರೆ.















