ಮನೆ ರಾಜ್ಯ ಧರ್ಮಸ್ಥಳದ ಅಪಪ್ರಚಾರಕ್ಕೆ ಫಂಡಿಂಗ್; ಸಮೀರ್ ವಿರುದ್ಧ ಐಟಿಗೆ ದೂರು ನೀಡಲು ಸಜ್ಜು..!

ಧರ್ಮಸ್ಥಳದ ಅಪಪ್ರಚಾರಕ್ಕೆ ಫಂಡಿಂಗ್; ಸಮೀರ್ ವಿರುದ್ಧ ಐಟಿಗೆ ದೂರು ನೀಡಲು ಸಜ್ಜು..!

0

ಮಂಗಳೂರು : ಶ್ರೀ ಕ್ಷೇತ್ರದ ಧರ್ಮಸ್ಥಳದಲ್ಲಿ ಶಿವ ತಾಂಡವ ಶುರುವಾಗಿದ್ದು, ಕ್ಷೇತ್ರದ ಬಗ್ಗೆ ಅಪಪ್ರಚಾರ ಮಾಡಿದವರ ಕಂತೆ ಕಂತೆ ಸುಳ್ಳುಗಳು ಒಂದೊಂದೇ ಹೊರಬರುತ್ತಿದೆ. ಅಪಪ್ರಚಾರ ಮಾಡಿದವರು ಒಬ್ಬೊಬ್ಬರೇ ಕಂಬಿ ಹಿಂದೆ ಸೇರುತ್ತಿದ್ದಾರೆ.

ಈ ಧರ್ಮಸ್ಥಳದ ಬಗ್ಗೆ ಎಪಿಸೋಡ್‌ಗಳ ಮೇಲೆ ಎಪಿಸೋಡ್ ಮಾಡಿಕೊಂಡು ನಾನೇ ಸತ್ಯವಂತ ಅಂತಿದ್ದ ಸಮೀರ್‌ಗೆ ಭಾನುವಾರ ಧರ್ಮಸ್ಥಳದ ಪೊಲೀಸರು ಡ್ರಿಲ್ ಮಾಡಿದ್ದು, ಇಂದು ವಿಚಾರಣೆಗೆ ಕರೆದಿದ್ದಾರೆ. ಇತ್ತ ಈ ದೂತನ ವಿರುದ್ಧ ಐಟಿಗೆ ದೂರು ನೀಡಲು ಹಿಂದೂ ಪರ ಹೋರಾಟಗಾರರು ಸಜ್ಜಾಗಿದ್ದಾರೆ.

ಧರ್ಮಸ್ಥಳದ ಕ್ಷೇತ್ರದ ಬಗ್ಗೆ ಅಪಪ್ರಚಾರ ಮಾಡಿದವರ ಕಂತೆ ಕಂತೆ ಸುಳ್ಳುಗಳು ಒಂದೊಂದೇ ಹೊರಬರುತ್ತಿದೆ. ಈ ಕಟ್ಟು ಕತೆಗಳಲ್ಲಿ ದೂತ ಸಮೀರ್‌ನ ಪಾತ್ರ ಬಹಳ ದೊಡ್ಡದು. ಸಮೀರ್ ಮಾಡಿದ ವಿಡಿಯೋ, ಅವನ ಐಎ ತಂತ್ರಜ್ಞಾನದ ಬಳಕೆಯಿಂದ ಜನ ಅರೇ ಹೀಗೆಲ್ಲಾ ಆಗಿದ್ಯಾ ಅನ್ನೋ ಮಟ್ಟಕ್ಕೆ ನಂಬಿಸೋ ಯತ್ನ ಆಗಿತ್ತು. ಇವನ ಮಾತುಗಾರಿಕೆ, ತಾನೇ ಕದ್ದು ನೋಡಿದ್ದೇನೆ ಅನ್ನೋ ರೀತಿಯ ವಿವರಣೆಗೆ ಜನ ಮಾರುಹೋಗಿದ್ರು. ಈಗ ಈತನ ಧಾರ್ಮಿಕ ಅಂಧತ್ವ ನಮ್ಮ ಧರ್ಮವನ್ನ ಹೊಡೆಯೋ ನೀಚತನ ಹೊರಬರುತ್ತಿದೆ.

ಸಮೀರ್ ವಿರುದ್ಧ ಈಗಾಗಲೇ ಜುಲೈನಲ್ಲೇ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಿದ್ದ ಹಿಂದೂ ಪರ ಹೋರಾಟಗಾರ ತೇಜಸ್‌ಗೌಡ, ಇಂದು ಹಿಂದೂ ಮುಖಂಡರೊಂದಿಗೆ ಆದಾಯ ಇಲಾಖೆಗೆ ದೂರು ನೀಡಲು ಮುಂದಾಗುತ್ತಿದ್ದಾರೆ.

ಸಮೀರ್ ಸೇರಿದಂತೆ ಧರ್ಮಸ್ಥಳದ ಹಿಂದೆ ಪಿತೂರಿ ಮಾಡಿದವರಿಗೆ ಬೇರೆ ಬೇರೆ ಕಡೆಯಿಂದ ಹಣ ಬಂದಿದೆ. ಇವನ ವೀಡಿಯೋಗೆ ಯಾರು ಫಂಡ್ ಮಾಡುತ್ತಾರೆ, ಇದರ ಹಿಂದೆ ದೊಡ್ಡ ದೊಡ್ಡವರು ಎಡಪಂಥೀಯರು, ನಿಷೇಧಿತ ಸಂಘಟನೆಗಳು ಇದೆ. ಸಮೀರ್‌ನ ಆರ್ಥಿಕ ವಹಿವಾಟನ್ನು ತನಿಖೆ ಮಾಡಬೇಕು ಅಂತಾ ಐಟಿಗೆ ದೂರು ನೀಡೋದಾಗಿ ತೇಜಸ್ ಗೌಡ ಹೇಳಿದ್ದಾರೆ.

ಸಮೀರ್ ವಿರುದ್ಧ ರಾಷ್ಟ್ರೀಯ ತನಿಖಾ ತಂಡಗಳಿಂದ ತನಿಖೆಯಾಗಬೇಕು. ಆಗ ಇದರ ಮೂಲ ಯಾರು? ಇದಕ್ಕೆ ಕಾರಣಕರ್ತರು ಯಾರೆಲ್ಲ ಇದ್ದಾರೆ ಅನ್ನೋದು ಬಹಿರಂಗವಾಗಲಿದೆ. ಹಾಗೆಯೇ ಸರ್ಕಾರ ಕೂಡ ಈ ಸುಳ್ಳುಸುದ್ದಿ ಹರಿಡಿಸಿದವರ ಯೂಟ್ಯೂಬ್ ಚಾನಲ್ ಬ್ಯಾನ್ ಮಾಡಬೇಕು ಅಂತಾ ತೇಜಸ್ ಗೌಡ ಒತ್ತಾಯ ಮಾಡಿದ್ದಾರೆ ಎನ್ನಲಾಗಿದೆ.