ಮನೆ ರಾಜ್ಯ ಯೋಗದ ಮೂಲಕ ದೇಶಕ್ಕೆ ದೊಡ್ಡ ಶಕ್ತಿ ನೀಡಿದ ಪ್ರಧಾನಿ: ಸಚಿವ ಕೆ.ಗೋಪಾಲಯ್ಯ

ಯೋಗದ ಮೂಲಕ ದೇಶಕ್ಕೆ ದೊಡ್ಡ ಶಕ್ತಿ ನೀಡಿದ ಪ್ರಧಾನಿ: ಸಚಿವ ಕೆ.ಗೋಪಾಲಯ್ಯ

0

ಬೆಂಗಳೂರು(Bengaluru) : ಯೋಗದ ಮೂಲಕ ಭಾರತಕ್ಕೆ ದೊಡ್ಡ ಶಕ್ತಿಯನ್ನು ನೀಡಿರುವ ಕೀರ್ತಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಸಲ್ಲುತ್ತದೆ ಎಂದು ಅಬಕಾರಿ ಸಚಿವ ಕೆ.ಗೋಪಾಲಯ್ಯ ಬಣ್ಣಿಸಿದ್ದಾರೆ.

ಮಹಾಲಕ್ಷ್ಮಿ ಎಜುಕೇಶನ್ ಟ್ರಸ್ಟ್ ,ನೆಮ್ಮದಿ ಯೋಗ ಶಾಲೆ ಮತ್ತು ಪ್ರಣವ ಯೋಗ ಪ್ರತಿಷ್ಟಾನದ ಸಹಯೋಗದಲ್ಲಿಂದು ಮಹಾಲಕ್ಷ್ಮಿ ಲೇ ಔಟ್ ವಿಧಾನಸಭಾ ಕ್ಷೇತ್ರದ ಶಂಕರಮಠ ವೃತ್ತದಲ್ಲಿರುವ ಸ್ವಾಮಿ ವಿವೇಕಾನಂದ ಆಟದ ಮೈದಾನದಲ್ಲಿ ಹಮ್ಮಿಕೊಂಡಿದ್ದ ಅಂತರಾಷ್ಟ್ರೀಯ 8 ನೇ ಯೋಗ ದಿನಾಚರಣೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ನಾನಾ ಜಾತಿ, ಧರ್ಮ, ಭಾಷೆ ಮೀರಿ ಎಲ್ಲರನ್ನೂ ಒಗ್ಗೂಡಿಸುವ ಶಕ್ತಿ ಯೋಗಕ್ಕಿದೆ. ಈ ಸತ್ಯವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಇಡೀ ವಿಶ್ವಕ್ಕೆ ಮನವರಿಕೆ ಮಾಡಿಕೊಟ್ಟಿದ್ದರಿಂದ ಯೋಗವನ್ನು ಜೂನ್ 21ರಂದು ವಿಶ್ವದ‌ 190ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಆಚರಿಸಲಾಗುತ್ತದೆ.‌ ಇದು ಭಾರತಿಯರಿಗೆ ಹೆಮ್ಮೆಯ ಸಂಗತಿ ಎಂದು ತಿಳಿಸಿದರು.

ನಾವೆಲ್ಲರೂ ಯೋಗ ಮಾಡುವ ಸಂಕಲ್ಪ ಹೊಂದೋಣ. ಯೋಗ ಮಾಡಲು ಇತರರಿಗೆ ಪ್ರೇರೇಪಿಸೋಣ.  ಇಡೀ ಸಮಾಜವನ್ನು ಒಂದೇ ಸೂತ್ರದಡಿ ತರುವ ಪ್ರಯತ್ನದಡಿ ಯೋಗ ದಿನಾಚರಣೆಗೆ ವಿಶೇಷ ಆದ್ಯತೆ ನೀಡಿದ್ದು, ಹಲವು ಧರ್ಮಿಯರು ಹಲವು ಭಾಷಿಕರನ್ನು ಒಳಗೊಂಡ ಭಾರತ ದೇಶದಲ್ಲಿ ಎಲ್ಲರನ್ನು ಒಗ್ಗೂಡಿಸಲು ಯೋಗದಲ್ಲಿ ಮಾತ್ರ ಅಂತ ಶಕ್ತಿ ಇದೆ ಎಂದರು.

ಯೋಗವು ಭಾರತದ ದೇಶದ ಕೊಡುಗೆಯಾಗಿದೆ. ವರ್ಷವಿಡಿ ಯೋಗವನ್ನು ಮಾಡಿದರೆ ಆರೋಗ್ಯಕ್ಕೆ ಸಹಕಾರಿ ಎಂಬುವುದನ್ಮು ತೋರಿಸಿ ಕೊಟ್ಟ ದೇಶ ನಮ್ಮದಾಗಿದೆ. ಶಾರೀರಿಕ, ಮಾನಸಿಕ ಆರೋಗ್ಯಕ್ಕೆ ಸಹಕಾರಿಯಾಗುವ ಯೋಗವನ್ನು ಪ್ರತಿಯೊಬ್ಬರು ಮೈಗೂಡಿಸಿಕೊಂಡಲ್ಲಿ ಈ ಕಾರ್ಯಕ್ರಮ ಸಾರ್ಥಕವಾಗಲಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ  ಬಿಬಿಎಂಪಿ ಮಾಜಿ ಉಪಮೇಯರ್ ಹೇಮಲತಾ ಕೆ.ಗೋಪಾಲಯ್ಯ, ಎಸ್ ಹರೀಶ್ ,ನೆ.ಲ.ನರೇಂದ್ರ ಬಾಬು ,ವೆಂಕಟೇಶಮೂರ್ತಿ, ಮಹಾಲಕ್ಷ್ಮಿ ‌ಎಜುಕೇಶನಲ್ ಟ್ರಸ್ಟ್ ಅಧ್ಯಕ್ಷ ಜಯರಾಮಯ್ಯ , ವೆಂಕಟೇಶ್ ,ನಿಸರ್ಗ ಜಗದೀಶ್ ,ಇತರರು ಉಪಸ್ಥಿತರಿದ್ದರು. ಸಾವಿರಕ್ಕೂ ಅಧಿಕ‌ ಯೋಗ ಪಟುಗಳು ಭಾಗವಹಿಸಿದ್ದರು.