ಮನೆ ರಾಜ್ಯ 10 ರೂ. ನಾಣ್ಯಗಳನ್ನು ನೀಡಿ ಕಾರು ಖರೀದಿಸಿದ ವೈದ್ಯ 

10 ರೂ. ನಾಣ್ಯಗಳನ್ನು ನೀಡಿ ಕಾರು ಖರೀದಿಸಿದ ವೈದ್ಯ 

0

ಧರ್ಮಪುರಿ(Dharmapuri): 10 ರೂ. ನಾಣ್ಯ ಸ್ವೀಕರಿಸಲು ಯಾರು ಸಿದ್ದರಿಲ್ಲ ಎಂಬ ಕಾರಣ ಮನಗಂಡ ಹೋಮಿಯೋಪತಿ ವೈದ್ಯ ಡಾ. ಎ ವೆಟ್ರಿವೇಲ್ (27) ಎಂಬುವವರು 60,000 10 ರೂಪಾಯಿ ನಾಣ್ಯಗಳನ್ನು ನೀಡಿ ಕಾರು ಖರೀದಿಸಿದ್ದು, ಮೂಲಕ ಜನರಲ್ಲಿ ಅರಿವು ಮೂಡಿಸಲು ಮುಂದಾಗಿದ್ದಾರೆ. 

ಶಾಲೆಯನ್ನೂ ನಡೆಸುತ್ತಿರುವ ಈ ವೈದ್ಯ ತಮ್ಮ ನಿರ್ಧಾರದ ಬಗ್ಗೆ ಮಾತನಾಡುತ್ತಾ ” ಕಳೆದ ತಿಂಗಳು ನಾನು ವಿದ್ಯಾರ್ಥಿಗಳೊಂದಿಗೆ ಮಾತನಾಡುತ್ತಿದ್ದಾಗ ಅವರು 10 ರೂಪಾಯಿ ನಾಣ್ಯ ಇಟ್ಟುಕೊಂಡು ಆಡುತ್ತಿದ್ದುದ್ದನ್ನು ಗಮನಿಸಿದೆ. ಹೀಗೇಕೆ ಆಡುತ್ತಿದ್ದೀರಿ? ಎಂದು ಪ್ರಶ್ನಿಸಿದಾಗ 10 ರೂಪಾಯಿ ನಾಣ್ಯವನ್ನು ಧರ್ಮಪುರಿಯಲ್ಲಿ ಯಾವ ಅಂಗಡಿಗಳಲ್ಲೂ ಸ್ವೀಕರಿಸುತ್ತಿಲ್ಲ ಎಂಬ ಮಾಹಿತಿ ಸಿಕ್ಕಿತು. ನಾನು ಈ ಬಗ್ಗೆ ಅರಿವು ಮೂಡಿಸಲು ನಿರ್ಧರಿಸಿ ಕಳೆದ 30 ದಿನಗಳಿಂದ ಮನೆ ಮನೆಗಳಿಗೆ ತೆರಳಿ, ನಾಣ್ಯ ಸಂಗ್ರಹಿಸಿ ಅದನ್ನು 10 ರೂಪಾಯಿ ನೋಟುಗಳೊಂದಿಗೆ ಬದಲಾಯಿಸುತ್ತಿದ್ದೆ. ಬ್ಯಾಂಕ್ ಗಳಿಂದಲೂ ಸಹ ನಾನು ನಾಣ್ಯಗಳನ್ನು ಸಂಗ್ರಹಿಸಿದ್ದೇನೆ ಎಂದು ಹೇಳಿದ್ದಾರೆ.

ಜನರು ನಾಣ್ಯಗಳನ್ನು ನೋಟುಗಳೊಂದಿಗೆ ಬದಲಿಸಲು ಅತ್ಯಂತ ಸಂತಸದಿಂದ ಮುಂದಾಗಿದ್ದರು. 60,000 ನಾಣ್ಯಗಳನ್ನು ಸಂಗ್ರಹಿಸಿ ಶೋ ರೂಮ್ ಗೆ ಅದೇ ನಾಣ್ಯಗಳನ್ನು ನೀಡಿ, ಕಾರನ್ನೂ ಖರೀದಿಸಿದೆ ಎನ್ನುತ್ತಾರೆ ವೈದ್ಯ ಡಾ. ಎ ವೆಟ್ರಿವೇಲ್. 

ವರ್ತಕ ಉಮಾಶಂಕರ್ ಮಾತನಾಡಿ, ಹಲವು ಡೀಲರ್ ಗಳ ಬಳಿ 10 ರೂಪಾಯಿ ನಾಣ್ಯವಿದೆ. ಏಕೆಂದರೆ ಗ್ರಾಹಕರು ಅದನ್ನು ಸ್ವೀಕರಿಸುವುದಿಲ್ಲ. ಬ್ಯಾಂಕ್ ಗಳೂ ಇದಕ್ಕೇನು ಹೊರತಲ್ಲ. ನನ್ನ ಬಳಿ 10 ರೂಪಾಯಿಗಳ 250 ನಾಣ್ಯಗಳಿವೆ ಎಂದು ಹೇಳಿದ್ದಾರೆ.

ಆರ್ ಬಿಐ 10 ರೂಪಾಯಿ ನಾಣ್ಯಗಳು ಸಿಂಧುತ್ವ ಹೊಂದಿದೆ ಎಂಬುದನ್ನು ಸ್ಪಷ್ಟಪಡಿಸಿದೆ.