ತಮ್ಮ ಹುಟ್ಟುಹಬ್ಬದ ದಿನವೇ ತಮಿಳು ನಟ ವಿಶಾಲ್ ಅಭಿಮಾನಿಗಳಿಗೆ ಸರ್‌ಪ್ರೈಸ್ ನ್ಯೂಸ್ ಕೊಟ್ಟಿದ್ದು, ನಟಿ ಸಾಯಿ ಧನ್ಸಿಕಾ ಜೊತೆ ಚೆನ್ನೈನಲ್ಲಿ ನಡೆದ ಸರಳ ಸಮಾರಂಭದಲ್ಲಿ ನಿಶ್ಚಿತಾರ್ಥ ಮಾಡಿಕೊಂಡು ಫೋಟೋಸ್‌ಗಳನ್ನ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ನಟ ವಿಶಾಲ್ ಹೆಸರು ಹಿಂದೆ ಹಲವು ನಟಿಯರ ಜೊತೆ ಥಳುಕು ಹಾಕಿಕೊಂಡಿದ್ದರೂ ಮದುವೆವರೆಗೆ ಬಂದಿರಲಿಲ್ಲ. ಇದೀಗ ತಮ್ಮ 48ನೇ ವಯಸ್ಸಿನಲ್ಲಿ ಧನ್ಸಿಕಾ ಜೊತೆ ವಿವಾಹಕ್ಕೆ ಸಜ್ಜಾಗಿದ್ದಾರೆ. ಉಂಗುರ ಬದಲಿಸಿಕೊಂಡು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ಹಿಂದೆ ಯೋಗಿಡಾ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿದ್ದ, ವಿಶಾಲ್ ಧನ್ಸಿಕಾ ಜೊತೆಗಿನ ಪ್ರೀತಿ ಖಚಿತಪಡಿಸಿ ಬಳಿಕ ಮದುವೆ ದಿನಾಂಕ ಘೋಷಿಸಿದ್ದರು. ಆದರೆ ಈ ದಿನ ಸಿನಿ ಜೋಡಿ ನಿಶ್ಚಿತಾರ್ಥ ಮಾಡಿಕೊಂಡಿದೆ. ನಿಶ್ಚಿತಾರ್ಥ ಮಾಡಿಕೊಂಡಿದ್ದರೂ ಮದುವೆ ದಿನವನ್ನು ಜೋಡಿ ಇನ್ನೂ ಪ್ರಕಟಿಸಿಲ್ಲ.
ವಿಶಾಲ್ ಇದುವರೆಗೂ 40ಕ್ಕೂ ಹೆಚ್ಚು ಚಿತ್ರಗಳಲ್ಲಿ ನಾಯಕರಾಗಿ ಅಭಿನಯಿಸಿದ್ದಾರೆ. ಧನ್ಸಿಕಾ 15 ವರ್ಷಗಳಲ್ಲಿ 20ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಕಲಾವಿದರ ಸಂಘ ನಾಡಿಗೇರ್ ಸಂಘದ ಜನರಲ್ ಕಾರ್ಯದರ್ಶಿಯಾಗಿರುವ ವಿಶಾಲ್ ಸಂಘದ ಕಟ್ಟಡ ಸಂಪೂರ್ಣವಾದ ಬಳಿಕ ಮದುವೆಯಾಗುವುದಾಗಿ ತಿಳಿಸಿದ್ದಾರೆ.














