ಮನೆ ರಾಜ್ಯ ಚೆನ್ನೈನಲ್ಲಿ ಮೇಘಸ್ಫೋಟ; ಫ್ಲೈಟ್​ಗಳ ಮಾರ್ಗಬದಲಾವಣೆ…!

ಚೆನ್ನೈನಲ್ಲಿ ಮೇಘಸ್ಫೋಟ; ಫ್ಲೈಟ್​ಗಳ ಮಾರ್ಗಬದಲಾವಣೆ…!

0

ಚೆನ್ನೈ : ತಮಿಳುನಾಡು ರಾಜಧಾನಿ ನಗರಿಯಲ್ಲಿ ಭಾರೀ ಮಳೆಯಾಗುತ್ತಿದೆ. ಶನಿವಾರ ರಾತ್ರಿ ಚೆನ್ನೈನ ಕೆಲವೆಡೆ ಮೇಘಸ್ಫೋಟ ಸಂಭವಿಸಿ ತೀವ್ರ ಮಟ್ಟದ ಮಳೆಯಾಗಿದೆ. ಹಲವೆಡೆ 200 ಎಂಎಂಗಿಂತಲೂ ಹೆಚ್ಚು ಮಟ್ಟದ ಮಳೆ ಸುರಿದಿದೆ ಎಂದು ಭಾರತೀಯ ಹವಾಮಾನ ಇಲಾಖೆ ಭಾನುವಾರ ಮಾಹಿತಿ ನೀಡಿದೆ.

ಮನಾಲಿಯಲ್ಲಿ 270 ಎಂಎಂ, ನ್ಯೂ ಮನಾಲಿ ಟೌನ್​ನಲ್ಲಿ 260 ಎಂಎಂ, ವಿಮ್ಕೋ ನಗರ್​ನಲ್ಲಿ 230 ಎಂಎಂ ಮಳೆಯಾಗಿದೆ ಎಂದು ಹೇಳಲಾಗಿದೆ. ಒಟ್ಟು ಆರು ಸ್ಥಳಗಳಲ್ಲಿ ಮೇಘಸ್ಫೋಟ ಸಂಭವಿಸಿದೆ ಎಂದು ಐಎಂಡಿ ಹೇಳಿದೆ.

ಈ ಮೇಲಿನ ಸ್ಥಳಗಳಲ್ಲಿ ಮೇಘಸ್ಫೋಟದಿಂದ ಇಷ್ಟು ತೀವ್ರ ಮಳೆಯಾಗಿದೆ. ಇವಲ್ಲದೇ ಚೆನ್ನೈ ಇನ್ನೂ ಹಲವು ಸ್ಥಳಗಳಲ್ಲೂ ಭಾರೀ ಮಳೆಯಾಗಿದೆ. ಇಂದು ಭಾನುವಾರಕ್ಕೆ ಹವಾಮಾನ ಇಲಾಖೆಯು ಮಳೆಯ ಮುನ್ಸೂಚನೆ ಕೊಟ್ಟಿಲ್ಲ ಎನ್ನಲಾಗಿದೆ.

ನಿನ್ನೆ ಶನಿವಾರ ರಾತ್ರಿ ಆರು ಸ್ಥಳಗಳಲ್ಲಿ ಗಂಟೆಗೆ 10 ಸೆಂಟಿ ಮೀಟರ್​ನಷ್ಟು ಮಳೆಯಾಗಿದ್ದು, ಇದು ಮೇಘ ಸ್ಫೋಟವಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ. ಮನಾಲಿ, ವಿಮ್ಕೋ ನಗರ್, ಕೊರಟ್ಟೂರು, ನ್ಯೂ ಮಲಾನಿ ಟೌನ್, ಎಣ್ಣೋರ್ ಮೊದಲಾದ ಸ್ಥಳಗಳಲ್ಲಿ ಭಾರೀ ಮಳೆಯಾಗಿದೆ. ಅಯಪಕ್ಕಂ, ಪ್ಯಾರಿಸ್, ಅಂಬತ್ತೂರು, ನೇರಕುಂಡ್ರಂ, ಕೊಳತ್ತೂರು, ಕಾಸಿಮೆಡು, ರೆಡ್ ಹಿಲ್ಸ್ ಸೇರಿದಂತೆ ಚೆನ್ನೈ ಬಹುತೇಕ ಸ್ಥಳಗಳಲ್ಲಿ ಜೋರು ಮಳೆಯಾಗಿದೆ.

ಚೆನ್ನೈನಲ್ಲಿ ಭಾರೀಯ ಮಳೆಯಾಗುತ್ತಿದ್ದುದರಿಂದ, ಅಲ್ಲಿಗೆ ಹೊರಟಿದ್ದ ಮೂರು ಫ್ಲೈಟ್​ಗಗಳನ್ನು ಬೆಂಗಳೂರಿಗೆ ಮಾರ್ಗಬದಲಾವಣೆ ಮಾಡಿ ಕಳುಹಿಸಲಾಗಿದೆ. ಫ್ರಾಂಕ್​ಫುರ್ಟ್, ಮಂಗಳೂರು ಮತ್ತು ನವದೆಹಲಿಯಿಂದ ಚೆನ್ನೈಗೆ ಹೋಗಿದ್ದ ವಿಮಾನಗಳಿಗೆ, ಚೆನ್ನೈನಲ್ಲಿ ಇಳಿಯಲು ಸಾಧ್ಯವಾಗದ ಕಾರಣ ಬೆಂಗಳೂರು ಏರ್​ಪೋರ್ಟ್​ಗೆ ಬರಬೇಕಾಯಿತು ಎಂದು ವರದಿಯಾಗಿದೆ.