ಬೀಜಿಂಗ್ : ಶಾಂಘೈ ಸಹಕಾರ ಶೃಂಗಸಭೆಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರ ನೆಚ್ಚಿನ ಹಾಂಗ್ಕಿ ಕಾರನ್ನು ನೀಡಲಾಗಿದೆ.
ಪ್ರಧಾನಿ ಮೋದಿ ಅವರು ಎರಡು ದಿನಗಳ ಕಾಲ ಟಿಯಾಂಜಿನ್‌ನಲ್ಲಿ ಈ ಕಾರಿನಲ್ಲೇ ಸಂಚರಿಸಲಿದ್ದಾರೆ. ರೆಡ್ ಫ್ಲ್ಯಾಗ್ ಎಂದೂ ಕರೆಯಲ್ಪಡುವ ಹಾಂಗ್ಕಿ L5 ಕಾರನ್ನು ಕ್ಸಿ ಅವರು 2019 ರಲ್ಲಿ ತಮಿಳುನಾಡಿನ ಮಹಾಬಲಿಪುರಂನಲ್ಲಿ ಮೋದಿ ಅವರನ್ನು ಭೇಟಿ ಮಾಡಿದಾಗ ಬಳಸಿದ್ದರು.
ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಚೀನಾದ ರಾಜತಾಂತ್ರಿಕ ಪರವಾನಗಿ ಫಲಕಗಳನ್ನು ಹೊಂದಿರುವ ತಮ್ಮ ಅಧ್ಯಕ್ಷೀಯ ʼಔರಸ್ʼ ಕಾರನ್ನು ನೀಡಲಾಗಿದೆ. ಔರಸ್ ರಷ್ಯಾದ ವಾಹನ ತಯಾರಕ ಔರಸ್ ಮೋಟಾರ್ಸ್ ತಯಾರಿಸಿದ ರೆಟ್ರೋ-ಶೈಲಿಯ ಐಷಾರಾಮಿ ವಾಹನವಾಗಿದೆ.
ದ್ವಿಪಕ್ಷೀಯ ಸಭೆಯಲ್ಲಿ, ಕ್ಸಿ ಜಿನ್‌ಪಿಂಗ್ ಪ್ರಧಾನಿ ಮೋದಿಗೆ ಡ್ರ್ಯಾಗನ್ ಮತ್ತು ಆನೆ ಒಟ್ಟಿಗೆ ಸೇರುವುದು ಮತ್ತು ಸ್ನೇಹಿತರಾಗುವುದು ಅತ್ಯಗತ್ಯ ಎಂದು ಹೇಳಿದರು.














