ಮನೆ ರಾಜ್ಯ ಯೂಟ್ಯೂಬರ್‌ಗೆ ಎಸ್‌ಐಟಿ ಫುಲ್‌ ಗ್ರಿಲ್‌ – ಲೈಕ್ಸ್, ವ್ಯೂವ್ಸ್‌ಗಾಗಿ ವಿಡಿಯೋ ಮಾಡಿದೆ ಅಂತ ತಪ್ಪೊಪ್ಪಿಗೆ…

ಯೂಟ್ಯೂಬರ್‌ಗೆ ಎಸ್‌ಐಟಿ ಫುಲ್‌ ಗ್ರಿಲ್‌ – ಲೈಕ್ಸ್, ವ್ಯೂವ್ಸ್‌ಗಾಗಿ ವಿಡಿಯೋ ಮಾಡಿದೆ ಅಂತ ತಪ್ಪೊಪ್ಪಿಗೆ…

0

ಮಂಗಳೂರು : ಬುರುಡೆ ಪ್ರಕರಣದ ರಹಸ್ಯ ಹಾಗೂ ಅನನ್ಯಾ ಭಟ್ ಪ್ರಕರಣದಲ್ಲಿ ಎಸ್‌ಐಟಿ ಅಧಿಕಾರಿಗಳು ಯೂಟ್ಯೂಬರ್ ಅಭಿಷೇಕ್‌ನನ್ನು ತೀವ್ರ ವಿಚಾರಣೆ ನಡೆಸಿದ್ದಾರೆ.

ನಿನ್ನೆ ತಡರಾತ್ರಿವರೆಗೂ ಅಭಿಷೇಕ್ ಗ್ರಿಲ್ ಮಾಡಿರೋ ಎಸ್‌ಐಟಿ ಅಧಿಕಾರಿಗಳು ಬುರುಡೆ ಪ್ರಕರಣದ ಕುರಿತು ಯೂಟ್ಯೂಬರ್ ಅಭಿಷೇಕ್ ಬಳಿ ಮಾಹಿತಿ ಪಡೆದುಕೊಂಡಿದ್ದಾರೆ. ತನ್ನ ಯೂಟ್ಯೂಬ್ ವಿಡಿಯೋಗಳಲ್ಲಿ ಸುಳ್ಳು ಮಾಹಿತಿ ಪ್ರಸಾರ ಮಾಡಿದ್ದ ಆರೋಪ ಹಿನ್ನೆಲೆಯಲ್ಲಿ ಅಭಿಷೇಕ್ ವಿಚಾರಣೆ ನಡೆಸಲಾಗಿದೆ.

ಈ ಪ್ರಕರಣ ದಾಖಲಾಗುವ ಮೊದಲೇ ವಿಡಿಯೋಗಳನ್ನು ಮಾಡಿದ್ದ ಅಭಿಷೇಕ್, 6 ತಿಂಗಳ ಹಿಂದೆ ಗಿರೀಶ್ ಮಟ್ಟಣ್ಣವರ್ ಸಂಪರ್ಕ ಮಾಡಿದ್ದ. ಈ ಬಗ್ಗೆ ವಿಚಾರಣೆ ವೆಳೆ ಅಭಿಷೇಕ್ ಬಾಯ್ಬಿಟ್ಟಿದ್ದು ಲೈಕ್ಸ್ ಹಾಗೂ ವ್ಯೂವ್ಸ್‌ಗಾಗಿ ವಿಡಿಯೋ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಎಸ್‌ಐಟಿ ಅಧಿಕಾರಿಗಳ ಮುಂದೆ ಕಣ್ಣೀರು ಹಾಕಿದ್ದಾನೆ.

ಜೊತೆಗೆ ರಾತ್ರಿ ಹೊತ್ತು ಬಂಗ್ಲೆಗುಡ್ಡೆಕ್ಕೆ ಭೇಟಿ ನೀಡಿ ಅಭಿಷೇಕ್ ಹಾಗೂ ಜಯಂತ್ ಟಿ. ವಿಡಿಯೋ ಮಾಡಿದ್ದಾರಂತೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನಷ್ಟು ಯೂಟ್ಯೂಬರ್‌ಗಳಿಗೆ ಎಸ್‌ಐಟಿ ನೋಟಿಸ್ ನೀಡಲು ತಯಾರಿ ನಡೆದಿಸಿದ್ದು, ಬುರುಡೆ ಗ್ಯಾಂಗ್‌ ಮುಖವಾಡ ಕಳಚಲಿದೆ ಎಂದು ತಿಳಿದುಬಂದಿದೆ.