ಮನೆ ರಾಜ್ಯ ಡಿಸಿಸಿ ಬ್ಯಾಂಕಿನ ಅಧ್ಯಕ್ಷರಾಗಿ ಕೆಎನ್ ರಾಜಣ್ಣ ಅವಿರೋಧ ಆಯ್ಕೆ..!

ಡಿಸಿಸಿ ಬ್ಯಾಂಕಿನ ಅಧ್ಯಕ್ಷರಾಗಿ ಕೆಎನ್ ರಾಜಣ್ಣ ಅವಿರೋಧ ಆಯ್ಕೆ..!

0

ತುಮಕೂರು : ಸತತ 6ನೇ ಬಾರಿ ತುಮಕೂರು ಡಿಸಿಸಿ ಬ್ಯಾಂಕಿನ ಅಧ್ಯಕ್ಷರಾಗಿ ಮಾಜಿ ಸಚಿವ ಕೆಎನ್ ರಾಜಣ್ಣ ವಿರಾಜಮಾನರಾಗಿದ್ದಾರೆ. ಇಂದು ನಡೆದ ಅಧ್ಯಕ್ಷರ ಸ್ಥಾನದ ಚುನಾವಣೆಯಲ್ಲಿ ರಾಜಣ್ಣ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಉಪಾಧ್ಯಕ್ಷರಾಗಿ ರಾಜಣ್ಣರ ಆಪ್ತ ಜಿ.ಜೆ.ರಾಜಣ್ಣ ಪಟ್ಟಕ್ಕೇರಿದ್ದಾರೆ. ಈ ವೇಳೆ ಮಾತನಾಡಿದ ಮಾಜಿ ಸಚಿವ ರಾಜಣ್ಣ, ರೈತರ ಬದುಕನ್ನು ಹಸನಗೊಳಿಸೋದೆ ನಮ್ಮ ಉದ್ದೇಶ. ದೇಶದ ಜಿಡಿಪಿಗೆ ಹಳ್ಳಿಗಳ ರೈತರ ಕೊಡುಗೆ ಅಪಾರ. ಅವರಿಗೆ ಅನುಕೂಲ ಆಗುವ ರೀತಿಯಲ್ಲಿ ಬ್ಯಾಂಕಿನ ಯೋಜನೆ ಇರಲಿದೆ ಎಂದರು.

ನಬಾರ್ಡ್ನಿಂದ ಅಫೆಕ್ಸ್ ಬ್ಯಾಂಕಿಗೆ 5500 ಕೋಟಿ ರೂ. ಬರಬೇಕಿತ್ತು. ಆದರೆ ಈ ಬಾರಿ ಕೇವಲ 2,340 ಕೋಟಿಯಷ್ಟೇ ಬಂದಿದೆ. ಅದರಿಂದ ಜಿಲ್ಲಾ ಬ್ಯಾಂಕುಗಳಿಗೆ ನಷ್ಟ ಆಗಲಿದೆ. ರೈತರ ಸಾಲ ಮನ್ನಾ ಮಾಡಲು ನಾನು ಒತ್ತಾಯ ಮಾಡೋದಿಲ್ಲ. ಆದರೆ ಕುಮಾರಸ್ವಾಮಿ ಕಾಲದಲ್ಲಿ ಮನ್ನಾ ಆಗಿದ್ದ ರೈತರ 258 ಕೋಟಿ ರೂ. ಬಿಡುಗಡೆ ಮಾಡುವಂತೆ ಒತ್ತಾಯ ಮಾಡೋದಾಗಿ ತಿಳಿಸಿದರು.

ರಾಜಣ್ಣ ಮತ್ತೇ ಸಹಕಾರಿ ಸಚಿವರಾಗುತ್ತಾರಾ ಎಂಬ ಪ್ರಶ್ನೆಗೆ ಉತ್ತರಿಸಿ, ರಾಜಣ್ಣ ಏನಾಗ್ತಾನೋ ಏನೋ ಗೊತ್ತಿಲ್ಲ. ಅದೇನಾಗುತ್ತೋ ಯಾವ ಸಂದರ್ಭಕ್ಕೆ ಅದನ್ನು ಅನುಭವಿಸಿಕೊಂಡು ಹೋಗಬೇಕು ಎಂದು ತಿಳಿಸಿದರು.