ಮನೆ ಉದ್ಯೋಗ ವಾಯುಪಡೆಯಲ್ಲಿ ಅಗ್ನಿವೀರರ ನೇಮಕಾತಿಗೆ ಅರ್ಜಿ ಆಹ್ವಾನ

ವಾಯುಪಡೆಯಲ್ಲಿ ಅಗ್ನಿವೀರರ ನೇಮಕಾತಿಗೆ ಅರ್ಜಿ ಆಹ್ವಾನ

0

ಭಾರತೀಯ ವಾಯುಪಡೆಯು (ಇಂಡಿಯನ್ ಏರ್‌ ಫೋರ್ಸ್‌) ಅವಿವಾಹಿತ ಪುರುಷ ಅಭ್ಯರ್ಥಿಗಳಿಂದ (ಭಾರತೀಯ ಮತ್ತು ನೇಪಾಳಿ) ಅಗ್ನಿಪಥ್ ಯೋಜನೆಯಡಿಯಲ್ಲಿ ಅಗ್ನಿವೀರರನ್ನು ನೇಮಕಾತಿ ಮಾಡಿಕೊಳ್ಳಲು ಇದೀಗ ಅಧಿಕೃತ ನೋಟಿಫಿಕೇಶನ್‌ ಬಿಡುಗಡೆ ಮಾಡಿದೆ.

4 ವರ್ಷದ ಅವಧಿಗೆ ಸೇನೆಯಲ್ಲಿ ಕೆಲಸ ಮಾಡಲು ಆಸಕ್ತಿ ಇರುವವರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು.

ಜೂನ್‌ 24ರ ಬೆಳಿಗ್ಗೆ 10 ಗಂಟೆಯಿಂದ ಆನ್‌ ಲೈನ್‌ ಅಪ್ಲಿಕೇಶನ್‌ ಸಲ್ಲಿಸಲು ಅವಕಾಶವಿದೆ. ಜುಲೈ 5 ಅರ್ಜಿ ಸಲ್ಲಿಸಲು ಕೊನೆಯ ದಿನ. ಜುಲೈ 24 ರಂದು ಆನ್‌ ಲೈನ್‌ ಪರೀಕ್ಷೆ ನಡೆಯಲಿದೆ.

ಅರ್ಜಿ ಸಲ್ಲಿಸುವ ಅಭ್ಯರ್ಥಿ 12ನೇ ತರಗತಿಯಲ್ಲಿ ಕಡ್ಡಾಯವಾಗಿ ಗಣಿತ, ಭೌತಶಾಸ್ತ್ರ, ಇಂಗ್ಲಿಷ್‌ ಓದಿದ್ದು, ಕನಿಷ್ಠ ಶೇ.50 ಅಂಕಗಳೊಂದಿಗೆ ಪಾಸ್‌ ಮಾಡಿರಬೇಕು. ಇಂಗ್ಲಿಷ್‌ನಲ್ಲಿ ಶೇ.50 ಅಂಕ ಗಳಿಸಿರಬೇಕು ಅಥವಾ
3 ವರ್ಷದ ಡಿಪ್ಲೊಮ ಇಂಜಿನಿಯರಿಂಗ್ ಓದಿರಬೇಕು. ಕನಿಷ್ಠ ಶೇ.50 ಅಂಕಗಳೊಂದಿಗೆ ಪಾಸ್‌ ಮಾಡಿರಬೇಕು. ಇಂಗ್ಲಿಷ್‌ನಲ್ಲಿ ಶೇ.50 ಅಂಕಗಳಿಸಿರಬೇಕು.

ಅರ್ಜಿ ಸಲ್ಲಿಸುವ ಅಭ್ಯರ್ಥಿ 1999 ರ ಡಿಸೆಂಬರ್ 29 ಮತ್ತು 2005 ರ ಜೂನ್ ನಡುವೆ ಜನಿಸಿರಬೇಕು. ಗರಿಷ್ಠ 23 ವರ್ಷ ವಯಸ್ಸು ಮೀರದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಲಿಖಿತ ಪರೀಕ್ಷೆ , ದೈಹಿಕ ಸಾಮರ್ಥ್ಯ ಪರೀಕ್ಷೆ, ವೈದ್ಯಕೀಯ ಪರೀಕ್ಷೆ, ಸಹಿಷ್ಣುತೆ ಪರೀಕ್ಷೆ ನಡೆಸಿ, ಅಭ್ಯರ್ಥಿಗಳ ಆಯ್ಕೆ ಮಾಡಲಾಗುತ್ತದೆ. ಐಎಎಫ್‌ ಅಗ್ನಿವೀರ್ ಹುದ್ದೆಗಳನ್ನು ದೇಶದ ಯಾವುದೇ ಮೂಲೆಯ ಐಎಎಫ್‌ ರಕ್ಷಣಾ ಘಟಕಗಳಲ್ಲಿ ನೇಮಕ ಮಾಡಲಾಗುತ್ತದೆ.

ವಾಯುಪಡೆ ಅಗ್ನಿವೀರರಿಗೆ ವೇತನ, ತ್ಯೆ:

ಮೊದಲನೇ ವರ್ಷ : ರೂ.30,000 ಜತೆಗೆ ಇತರೆ ಭತ್ಯೆಗಳು.
ಎರಡನೇ ವರ್ಷ : ರೂ.33,000 ಜತೆಗೆ ಇತರೆ ಭತ್ಯೆಗಳು.
ಮೂರನೇ ವರ್ಷ : ರೂ.36,500 ಜತೆಗೆ ಇತರೆ ಭತ್ಯೆಗಳು.
ನಾಲ್ಕನೇ ವರ್ಷ : ರೂ.40,000 ಜತೆಗೆ ಇತರೆ ಭತ್ಯೆಗಳು.

ಅಗ್ನಿವೀರ್ ಹುದ್ದೆಯಿಂದ ನಿವೃತ್ತಿ ಪಡೆದ ಸಂದರ್ಭದಲ್ಲಿ ಸೇವಾನಿಧಿ ಪ್ಯಾಕೇಜ್‌ – 10.04 ಲಕ್ಷ ರೂ ಅನ್ನು ಅಭ್ಯರ್ಥಿಗೆ ನೀಡಲಾಗುತ್ತದೆ.

ಇಂಡಿಯನ್ ಏರ್‌ ಫೋರ್ಸ್‌ ಅಗ್ನಿವೀರರ ಹುದ್ದೆಗೆ ಅರ್ಜಿ ಸಲ್ಲಿಸಲು ಮೊದಲಿಗೆ ರಿಜಿಸ್ಟ್ರೇಷನ್‌ ಪಡೆಯಬೇಕು. ರಿಜಿಸ್ಟ್ರೇಷನ್‌ ಪಡೆಯಲು https://agnipathvayu.cdac.in ಭೇಟಿ ನೀಡಬಹುದು.