ಮನೆ ರಾಷ್ಟ್ರೀಯ ಮಹಿಳಾ ಐಪಿಎಸ್ ಅಧಿಕಾರಿಯೊಂದಿಗೆ, ಡಿಸಿಎಂ ಅಜಿತ್ ಪವಾರ್ ವಾಗ್ವಾದ..!

ಮಹಿಳಾ ಐಪಿಎಸ್ ಅಧಿಕಾರಿಯೊಂದಿಗೆ, ಡಿಸಿಎಂ ಅಜಿತ್ ಪವಾರ್ ವಾಗ್ವಾದ..!

0

ಮುಂಬೈ : ಸೋಲಾಪುರದಲ್ಲಿ ಅಕ್ರಮವಾಗಿ ಮಣ್ಣು ಅಗೆಯುತ್ತಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ಮಹಿಳಾ ಐಪಿಎಸ್ ಅಧಿಕಾರಿಯೊಂದಿಗೆ ತೀವ್ರ ವಾಗ್ವಾದ ನಡೆಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಮಹಿಳಾ ಐಪಿಎಸ್ ಅಧಿಕಾರಿ ಅಂಜನಾ ಕೃಷ್ಣ ಅವರು ರಸ್ತೆ ನಿರ್ಮಾಣಕ್ಕಾಗಿ ಅಕ್ರಮವಾಗಿ ಮಣ್ಣು ಅಗೆಯುತ್ತಿದ್ದ ಸೋಲಾಪುರದ ಕುರ್ದು ಗ್ರಾಮಕ್ಕೆ ತೆರಳಿದ್ದರು. ಈ ವೇಳೆ ಐಪಿಎಸ್ ಅಧಿಕಾರಿಗೆ ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ಅವರು ಕರೆ ಮಾಡಿ, ವಾಗ್ವಾದ ನಡೆಸಿರುವುದು ವೈರಲ್ ಆದ ವಿಡಿಯೋದಲ್ಲಿ ಕಂಡುಬಂದಿದೆ.

ಎರಡು ನಿಮಿಷಗಳ ಈ ವಿಡಿಯೋದಲ್ಲಿ, ನಾನು ಉಪಮುಖ್ಯಮಂತ್ರಿ ಅಜಿತ್ ಪವಾರ್. ಮಣ್ಣು ಅಗೆಯುತ್ತಿರುವುದನ್ನು ತಕ್ಷಣವೇ ನಿಲ್ಲಿಸಬೇಕು. ಇಲ್ಲದಿದ್ದರೆ ನಿಮ್ಮ ಮೇಲಾಧಿಕಾರಿಗಳಿಗೆ ತಿಳಿಸಿ ನಿಮ್ಮ ವಿರುದ್ಧ ಕ್ರಮ ಕೈಗೊಳ್ಳುತ್ತೇನೆ ಎಂದಿದ್ದಾರೆ. ಆದರೆ ಈ ವೇಳೆ ಐಪಿಎಸ್ ಅಧಿಕಾರಿ, ಅಜಿತ್ ಪವಾರ್ ಅವರನ್ನು ಗುರುತಿಸದೇ ನನ್ನ ಮೊಬೈಲ್‌ಗೆ ಕರೆ ಮಾಡಿ ಎಂದು ಹೇಳಿದ್ದಾ.

ಆಗ ಅಜಿತ್ ಪವಾರ್ ಅವರು, ನೀವು ನನ್ನನ್ನು ನೋಡ್ಬೇಕು ಅಲ್ವಾ? ನನಗೆ ನಿಮ್ಮ ಮೊಬೈಲ್ ನಂಬರ್ ಕೊಡಿ ಅಥವಾ ನನಗೆ ವಾಟ್ಸಾಪ್‌ನಲ್ಲಿ ಕರೆ ಮಾಡಿ. ಆಗ ನಾನು ಯಾರು ಅಂತ ಗೊತ್ತಾಗುತ್ತೆ? ನಾನು ಹೇಳಿದರೂ ಕೇಳುವುದಿಲ್ಲ ಎಂದರೆ ನಿಮಗೆ ಎಷ್ಟು ಧೈರ್ಯ? ಎಂದು ಕಿಡಿಕಾರಿದ್ದಾರೆ.