ಮನೆ ರಾಷ್ಟ್ರೀಯ ನೇಪಾಳದ ಪ್ರತಿಭಟನೆ ಬಿಗಿಪಟ್ಟು ಹಿಡಿದ ಬೆನ್ನಲ್ಲೇ; ಪ್ರಧಾನಿ ಕೆಪಿ ಶರ್ಮಾ ಓಲಿ ರಾಜೀನಾಮೆ

ನೇಪಾಳದ ಪ್ರತಿಭಟನೆ ಬಿಗಿಪಟ್ಟು ಹಿಡಿದ ಬೆನ್ನಲ್ಲೇ; ಪ್ರಧಾನಿ ಕೆಪಿ ಶರ್ಮಾ ಓಲಿ ರಾಜೀನಾಮೆ

0

ಕಠ್ಮಂಡು : ನೇಪಾಳದಲ್ಲಿ ಯುವ ಜನತೆಯ ಪ್ರತಿಭಟನೆ ತೀವ್ರಗೊಂಡಿದ್ದು ಪ್ರಧಾನಿ ನಿವಾಸಕ್ಕೆ ಬೆಂಕಿ ಇಟ್ಟಿದ್ದಾರೆ. ನೇಪಾಳದಲ್ಲಿ ಸಾಮಾಜಿಕ ಜಾಲತಾಣ ನಿಷೇಧ ವಾಪಸ್ ಪಡೆದರೂ ಹೋರಾಟಗಾರರು ಪ್ರಧಾನಿ ಕೆ.ಪಿ. ಶರ್ಮಾ ಓಲಿ ರಾಜೀನಾಮೆಗೆ ಬಿಗಿಪಟ್ಟು ಹಿಡಿದಿದ್ದಾರೆ. ಬಿಗಿಪಟ್ಟು ಹಿಡಿದ ಬೆನ್ನಲ್ಲೇ ಕೆ.ಪಿ. ಶರ್ಮಾ ಓಲಿ ಪ್ರಧಾನಿ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ.

ಇಂದು ಸಂಸತ್ ಭವನದ ಆವರಣಕ್ಕೆ ನುಗ್ಗಿದ ಪ್ರತಿಭಟನಾಕಾರರು ಸಂಸತ್‌ ಭವನದ ಗೋಡೆ ಉರುಳಿಸಿ ಆಕ್ರೋಶ ಹೊರಹಾಕಿದ್ದಾರೆ. ಉದ್ರಿಕ್ತರನ್ನು ಚದುರಿಸಲು ಸೇನಾ ಪಡೆ ಈಗ ಕಾರ್ಯಾಚರಣೆಗ ಇಳಿದಿದೆ. ನೇಪಾಳದ ಎಲ್ಲಾ ವಿಮಾನ ನಿಲ್ದಾಣಗಳು ಬಂದ್‌ ಆಗಿವೆ. ದೇಶಿಯ ವಿಮಾನಗಳ ಹಾರಾಟ ಸಂಪೂರ್ಣ ಸ್ಥಗಿತವಾಗಿದೆ ಎಂದು ತಿಳಿದು ಬಂದಿದೆ.