ಕಾರ್ಯನಿರತ ವೃತ್ತಿಪರರು ಕೆಲಸದ ಸಮಯದಲ್ಲಿ ಕೆಲಸದ ಒತ್ತಡವನ್ನು ಕಡಿಮೆ ಮಾಡಲು ಸುಲಭವಾಗಿ ಅಭ್ಯಾಸ ಮಾಡಬಹುದಾಗಿದೆ. ಇವು ವೇಗವಾಗಿ ಮತ್ತು ಪರಿಣಾಮಕಾರಿಯಾಗಿ ನಿಮ್ಮ ಮೇಜಿನ ಮೇಲೆ ಕೆಲಸ ಮಾಡುವ ಜಾಗದಲ್ಲಿ, ಅಥವಾ ಕಚೇರಿ ಸ್ಥಳಗಳಲ್ಲಿ ಮಾಡಬಹುದು. ಇದಕ್ಕೆ ಯಾವುದೇ ಉಪಕರಣಗಳು ಅಥವಾ ಯೋಗ ಮ್ಯಾಟ್ ನ ಅವಶ್ಯಕತೆ ಇಲ್ಲ. ಈ ಭಂಗಿಯು ಗಮನವನ್ನು ಸುಧಾರಿಸಲು ಮತ್ತು ಒತ್ತಡ ಕಡಿಮೆ ಮಾಡಲು ಹೇಗೆ ಸಹಾಯ ಮಾಡುತ್ತದೆ.
ಇತ್ತೀಚಿನ ದಿನಗಳಲ್ಲಿ, ನಮ್ಮಲ್ಲಿ ಅನೇಕರು ಗಂಟೆಗಳ ಕಾಲ ಮೇಜಿನ ಬಳಿ ಕುಳಿತು ಸ್ಕ್ರೀನ್ ಗಳನ್ನು ಅಂದರೆ ಕಂಪ್ಯೂಟರ್ ಮತ್ತು ಇತ್ಯಾದಿಗಳನ್ನು ನೋಡುತ್ತಾ ಕಳೆಯುತ್ತೇವೆ. ಈ ದೀರ್ಘ ಕುಳಿತುಕೊಳ್ಳುವ ಸಮಯವು ನಮ್ಮ ಬೆನ್ನಿಗೆ ಮಾತ್ರವಲ್ಲ – ಇದು ನಮ್ಮ ಶಕ್ತಿಯನ್ನು ಕಡಿಮೆ ಮಾಡುತ್ತದೆ, ರಕ್ತದ ಹರಿವನ್ನು ಕಡಿಮೆ ಮಾಡುತ್ತದೆ ಮತ್ತು ನಮ್ಮ ಕುತ್ತಿಗೆ, ಭುಜಗಳು, ಸೊಂಟ ಮತ್ತು ಕೆಳ ಬೆನ್ನನ್ನು ಬಿಗಿಯಾಗಿ ಮತ್ತು ಗಟ್ಟಿಯಾಗಿ ನೋವು ಅನುಭವಿಸುವಂತೆ ಮಾಡುತ್ತದೆ. ಇವೆಲ್ಲದಕ್ಕು ಪರಿಹಾರವಾಗಿ ಯೋಗದಲ್ಲಿ ಸರಳ ಮತ್ತು ಶಕ್ತಿಯುತ ಮಾರ್ಗವಿದೆ. ಯೋಗವು ದೇಹ ಮತ್ತು ಮನಸ್ಸನ್ನು ಸಂಪರ್ಕಿಸಲು ಸಹಾಯ ಮಾಡುತ್ತದೆ.
ನೀವು ಈ ಸರಳವಾದ ಸ್ಟ್ರೆಚಿಂಗ್ಗಳನ್ನು ಎಲ್ಲಿ ಬೇಕಾದರೂ ಮಾಡಬಹುದು – ನಿಮ್ಮ ಮೇಜಿನ ಮೇಲೆ, ನಿಮ್ಮ ಕಚೇರಿಯಲ್ಲಿ ಅಥವಾ ಮನೆಯಲ್ಲಿ. ಇವುಗಳಿಗೆ ಹೆಚ್ಚು ಸ್ಥಳಾವಕಾಶದ ಅಗತ್ಯವಿಲ್ಲ, ಮತ್ತು ನಿಮಗೆ ಯೋಗ ಮ್ಯಾಟ್ ಕೂಡ ಅಗತ್ಯವಿಲ್ಲ . ಈ ಯೋಗದ ಕುರಿತಾಗಿಇದರ ಬಗ್ಗೆ ಮತ್ತಷ್ಟು ಮಾಹಿತಿಯನ್ನು ಹಿಮಾಲಯನ್ ಸಿದ್ಧಾ ಅಕ್ಷರ, ಲೇಖಕರು, ಅಂಕಣಕಾರರು ಮತ್ತು ಅಕ್ಷರ ಯೋಗ ಕೇಂದ್ರದ ಸಂಸ್ಥಾಪಕರು ಈ ರೀತಿ ವಿವರಿಸುತ್ತಾರೆ.
ಮೇಜಿನಲ್ಲಿ ಕುಳಿತು ಕೆಲಸ ಮಾಡುವವರಿಗಾಗಿ ಸರಳ ಸ್ಟ್ರೆಚಿಂಗ್ ವ್ಯಾಯಾಮಗಳು – ಯೋಗವು ಜೀವನ ಶೈಲಿಯ ಒಂದು ಉತ್ತಮ ಅಭ್ಯಾಸವಾಗಿದ್ದು ಜೀವನದ ಪ್ರತಿಯೊಂದು ಅಂಶಗಳನ್ನೂ ಇದು ಸುಧಾರಿಸುತ್ತದೆ. ಸೂಕ್ತವಾದ ಯೋಗಾಭ್ಯಾಸವು ನಿಯಮಿತವಾಗಿ ಮತ್ತು ಶಿಸ್ತುಬದ್ದವಾಗಿರಬೇಕಾದರೂ ಕೆಲವೊಮ್ಮೆ ಕೆಲಸದ ಒತ್ತಡದಿಂದ ಮಾಡಲು ಸಮಯವಿಲ್ಲದಿರಬಹುದು . ಆದರೆ ನೀವು ನಿಮ್ಮ ಒತ್ತಡವನ್ನು ಬಿಡುಗಡೆ ಮಾಡಲು ಕೆಲಸದ ಸ್ಥಳದಲ್ಲಿಯೇ ಮಾಡಬಹುದು ಮತ್ತು ನಿಮ್ಮ ದೇಹವನ್ನು ಚೈತನದಿಂದಿರಿಸಬಹುದು.
ತಾಡಾಸನ – ನೀವು ಮೇಜಿನ ಮೇಲೆ ಕುಳಿತು ಕೆಲಸ ಮಾಡುವ ಪ್ರತಿ ಎರಡು ಗಂಟೆಗಳಿಗೊಮ್ಮೆ ಎದ್ದು ನಿಲ್ಲಿ ಮತ್ತು ನಿಮ್ಮ ಇಡೀ ದೇಹವನ್ನು ಸ್ಟ್ರೆಜ್ ಮಾಡಿ. ಇದಕ್ಕಾಗಿ ನಿಮ್ಮ ಬೆರಳುಗಳನ್ನು ಪರಸ್ಪರ ಬಂಧಿಸಿ ಮತ್ತು ತಲೆಯ ಮೇಲೆ ನಿಮ್ಮ ತೋಳುಗಳನ್ನು ನೇರವಾಗಿ ಎತ್ತಿ ದೇಹದ ತೂಕವನ್ನು ಕಾಲ್ಬೆರಳುಗಳ ಮೇಲೆ ಇರಿಸಿ ಐದು ಬಾರಿ ಪುನರಾವರ್ತಿಸಿ. ಇದು ಕೆಲಸ ಮಾಡುವಾಗ ನಿಮಗೆ ರಕ್ತದ ಹರಿವನ್ನು ಖಚಿತಪಡಿಸುತ್ತದೆ ಮತ್ತು ತಕ್ಷಣವೇ ಸ್ನಾಯುಗಳಿಗೆ ಚೈತನ್ಯ ನೀಡುತ್ತದೆ.
ಪರಿವೃತ್ತ ಸುಖಾಸನ – ಕುರ್ಚಿಯ ಮೇಲೆ ನಿಮ್ಮ ಬೆನ್ನನ್ನು ನೇರವಾಗಿಟ್ಟುಕೊಂಡು ಸಂತೋಷದ ಭಂಗಿಯಲ್ಲಿ ಕುಳಿತುಕೊಳ್ಳಿ. ಎಡಗೈಯನ್ನು ಬಲಮೊಣಕಾಲಿನ ಮೇಲೆ ಇರಿಸಿ ಮತ್ತು ದೇಹದ ಮೇಲ್ಬಾಗವನ್ನು ಬಲ ಭಾಗಕ್ಕೆ ತಿರುಗಿಸಿ. ಬಲಗೈಯಿಂದ ಬೆನ್ನಿನ ಭಾಗವನ್ನು ಹಿಡಿದು, ಎದೆಯನ್ನು ಹೊರತೆ ತಳ್ಳಿ ಬೆನ್ನು ಮೂಳೆಯನ್ನು ಉದ್ದಗೊಳಿಸಿ. 5-8 ಸೆಕೆಂಡುಗಳ ಕಾಲ ಆಳವಾಗಿ ಉಸಿರಾಟವನ್ನು ಹಿಡಿದಿಟ್ಟುಕೊಳ್ಳಿ. ಎರಡೂ ಬದಿಗಳಲ್ಲಿಯೂ ಸುತ್ತುಗಳನ್ನು ಪುನರಾವರ್ತಿಸಿ. ಇದು ತಕ್ಷಣವೇ ಬೆನ್ನುಮೂಳೆಯಿಂದ ಒತ್ತಡವನ್ನು ಬಿಡುಗಡೆ ಮಾಡುತ್ತದೆ. ಹೃದಯ ಮತ್ತು ಶ್ವಾಸ ಕೋಶದ ಕಡೆಗೆ ಶಕ್ತಿಯ ಹರಿವನ್ನು ಹೆಚ್ಚಿಸುತ್ತದೆ ಮತ್ತು ದೇಹವನ್ನು ಮರು ಜೋಡಿಸುತ್ತಾ ವಿಶ್ರಾಂತಿ ನೀಡುತ್ತದೆ.
ಗ್ರೀವ ಸಂಚಲನ ಕ್ರಿಯೆ – ಮೇಜಿನ ಮೇಲೆ ಕುಳಿತು ಕೆಲಸ ಮಾಡುವಾಗ ನಿಮ್ಮ ಬೆನ್ನು ಮೂಳೆಗಳನ್ನು ನೇರಗೊಳಿಸಿ ಮತ್ತು ಕುತ್ತಿಗೆಯನ್ನು ನಿಧಾನವಾಗಿ ಪ್ರದಕ್ಷಿಣಾಕಾರವಾಗಿ ತಿರುಗಿಸಿ. ಕತ್ತು ಮೇಲಕ್ಕೆ ಹೋಗುವಾಗ ಉಸಿರನ್ನು ಒಳಗೆ ತೆಗೆದುಕೊಳ್ಳುತ್ತಾ ಕೆಳಗೆ ಬರುವಾಗ ಉಸಿರನ್ನು ಬಿಡುತ್ತಾ 5-8 ಬಾರಿ ಮಾಡಿ. ಇದನ್ನು ಅಪ್ರದಕ್ಷಿಣಾಕಾರವಾಗಿಯೂ ಪುನರಾವರ್ತಿಸಿ. ಇದು ನಿಮ್ಮ ಕುತ್ತಿಗೆ ಮತ್ತು ಭುಜಗಳಿಂದ ಒತ್ತಡವನ್ನು ಬಿಡುಗಡೆ ಮಾಡುತ್ತದೆ ಮತ್ತು ಮನಸ್ಸನ್ನು ಕೇಂದ್ರೀಕರಿಸುತ್ತದೆ.
ನಾಸಿಕ ಗ್ರಹ ದೃಷ್ಟಿ – ಆರಾಮದಾಯಕ ಭಂಗಿಯಲ್ಲಿ ಕುಳಿತುಕೊಳ್ಳಿ. ನಂತರ ನಿಮ್ಮ ಮೂಗಿನ ತುದಿಯನ್ನು ನೋಡುವ ಪ್ರಯತ್ನ ಮಾಡಿ ಮತ್ತು ಇದನ್ನು ಎಷ್ಟು ಹೊತ್ತು ಸಾಧ್ಯವೋ ಅಷ್ಟು ಹೊತ್ತು ನಿಮ್ಮ ಕಣ್ಣನ್ನು ಮಿಟುಕಿಸದೇ ನೋಡುವ ಪ್ರಯತ್ನ ಮಾಡಿ. ನಂತರ ನಿಮ್ಮ ಕಣ್ಣನ್ನು ಮುಚ್ಚಿ ವಿಶ್ರಾಂತಿ ಪಡೆಯಿರಿ. ಅಥವಾ ನಿಮ್ಮ ಅಂಗೈಗಳನ್ನು ಉಜ್ಜಿ ಕಣ್ಣಿನ ಮೇಲೆ ನಿಧಾನವಾಗಿ ಇರಿಸಬಹುದು. ಈ ವಿಧಾನವು ಮನಸ್ಸಿನ ಸ್ಪಷ್ಟತೆಯನ್ನು ಹೆಚ್ಚಿಸುವುದಲ್ಲದೆ, ಸ್ಥಿರತೆ ಮತ್ತು ಏಕಾಗ್ರತೆಯನ್ನೂ ಹೆಚ್ಚಿಸುತ್ತದೆ ಹಾಗೂ ಕಣ್ಣಿನ ಸ್ನಾಯುಗಳನ್ನು ಬಲಪಡಿಸುತ್ತದೆ ಮತ್ತು ಕಣ್ಣಿನ ಆರೋಗ್ಯವನ್ನು ಪುನಃಸ್ಥಾಪಿಸುತ್ತದೆ.















