ಮನೆ ರಾಜ್ಯ ಮಂಡ್ಯ – ಕೊಡಗು ಜಿಲ್ಲೆಯ ಹಲವೆಡೆ ಕಂಪಿಸಿದ ಭೂಮಿ: ಜನರಲ್ಲಿ ಆತಂಕ

ಮಂಡ್ಯ – ಕೊಡಗು ಜಿಲ್ಲೆಯ ಹಲವೆಡೆ ಕಂಪಿಸಿದ ಭೂಮಿ: ಜನರಲ್ಲಿ ಆತಂಕ

0

ಮಂಡ್ಯ/ ಕೊಡಗು:  ಮಂಡ್ಯದ ಕೆಲವು ಹಳ್ಳಿಗಳಲ್ಲಿ ಹಾಗೂ ಕೊಡಗು ಜಿಲ್ಲೆ ಹಲವೆಡೆ ಭೂಮಿ ಕಂಪಿಸಿದ ಅನುಭವವಾಗಿದ್ದು, ಜನರಲ್ಲಿ ಆತಂಕ ಮನೆ ಮಾಡಿದೆ.

ಮುಂಜಾನೆ 4.30ರಿಂದ 4.45ರ ಸಮಯದಲ್ಲಿ ಮಂಡ್ಯ ಜಿಲ್ಲೆ ತಾಲೂಕಿನ ಗ್ರಾಮಗಳಾದ  ಮಾದಾಪುರ, ಗೊಂದಿಹಳ್ಳಿ, ಚಿನ್ನೇನಹಳ್ಳಿ ಸೇರಿದಂತೆ ಸುತ್ತಮುತ್ತ ಗ್ರಾಮದಲ್ಲಿ ಘಟನೆ ನಡೆದಿದೆ.

ಇದರಿಂದ ಜನರು ಭಯಭೀತರಾಗಿದ್ದು, ಮನೇಲಿದ್ದ ಪಾತ್ರೆ ಮತ್ತಿತರ ವಸ್ತುಗಳು ಚೆಲ್ಲಾಪಿಲ್ಲಿಯಾಗಿವೆ.

ಮಡಿಕೇರಿಯಲ್ಲಿ 3.4 ತೀವ್ರತೆಯ ಭೂಕಂಪ:

ಮಡಿಕೇರಿ ತಾಲೂಕಿನ ದೇವಸ್ತೂರು ಸೇರಿದಂತೆ ಮಡಿಕೇರಿ ನಗರದಲ್ಲೂ ಸಣ್ಣ ಪ್ರಮಾಣದ ಕಂಪಿಸಿದೆ. ಮುಂಜಾನೆ 4:37ರ ಗಂಟೆಗೆ ರಿಕ್ಟರ್ ಮಾಪಕದಲ್ಲಿ 3.4 ಮ್ಯಾಗ್ನಿಟ್ಯೂಡ್‌ನಲ್ಲಿ ಭೂಕಂಪನ ದಾಖಲಾಗಿದೆ.

ಇನ್ನೂ ಹಾಸನ ಜಿಲ್ಲೆಯ ಹೊಳೆನರಸೀಪುರದಿಂದ 16 ಕಿಲೋ ಮೀಟರ್ ದಕ್ಷಿಣಕ್ಕೆ ಕಂಪನದ ಕೇಂದ್ರ ಬಿಂದು ಕಂಡುಬಂದಿದೆ.