ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣದ ಪ್ರಭಾವದಿಂದಾಗಿ ಯಾರು ಏನ್ ಬೇಕಾದ್ರೂ ಆಗಬಹುದು. ಎಲ್ಲೋ ಕುಳಿತು ಹಾಡಿದವರು ರಾತ್ರೋ ರಾತ್ರಿ ಫೇಮಸ್ ಆದ ಸಾಕಷ್ಟು ನಿದರ್ಶನಗಳು ನಮ್ಮ ಕಣ್ಮುಂದಿವೆ.
ಅದೇ ರೀತಿಯಾಗಿ ಮೈಸೂರಿನ ಹುಡುಗಿ ನಿತ್ಯಶ್ರೀ ಇತ್ತೀಚೆಗೆ ಹಾಡಿದ ಹೂವಿನ ಬಾಣದಂತೆ ಹಾಡು ಸಖತ್ ವೈರಲ್ ಆಗಿತ್ತು. ಅದೆಷ್ಟರ ಮಟ್ಟಿಗೆ ಅಂದ್ರೆ ಎಲ್ಲರೂ ಹಳೆ ಹಾಡನ್ನು ಮರೆಸುವಷ್ಟರ ಮಟ್ಟಿಗೆ ಪ್ರಭಾವ ಬೀರಿತ್ತು.
ಈ ಹಾಡನ್ನು ಒಂದು ಪ್ರಸಿದ್ಧ ವೇದಿಕೆ ಮೇಲೆ ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ ಹಾಗೂ ವ್ಯಾಸರಾಜ್ ಎಂಜಾಯ್ ಮಾಡಿಕೊಂಡು ಹಾಡಿದ್ದರು. ಆದ್ರೆ ಈ ಬಗ್ಗೆ ನಿತ್ಯಶ್ರೀ ಪ್ರತಿಕ್ರಿಯೆ ನೀಡಿದ್ದರು. ಅಲ್ಲದೇ ಸಂದರ್ಶನದಲ್ಲಿ ಅರ್ಜುನ್ ಜನ್ಯಾ ಸರ್‌ಗೆ ಕ್ಷಮೆ ಕೇಳ್ತೀನಿ. ಆ ಹಾಡನ್ನು ಕೆಡಸಿದೆ ಎನ್ನುವ ಗಿಲ್ಟ್ ಫೀಲ್ ಆಗ್ತಿದೆ ಎಂದಿದ್ದರು.
ನಿತ್ಯಶ್ರೀ ಹಾಡಿದ ಹಾಡು ವೈರಲ್ ಆದ ಬಗ್ಗೆ ಹಾಗೂ ನಿತ್ಯಶ್ರೀ ಬೇಸರ ಪಟ್ಟುಕೊಂಡ ಬಗ್ಗೆ ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ ಪ್ರತಿಕ್ರಿಯೆ ನೀಡಿದ್ದಾರೆ. ಖಾಸಗಿ ಸಂದರ್ಶನವೊಂದರಲ್ಲಿ ಅರ್ಜುನ್ ಜನ್ಯಾ ಮಾತನಾಡಿದ್ದಾರೆ.
ನಿತ್ಯಶ್ರೀ ಖುಷಿ ಖುಷಿಯಾಗಿ ಹಾಡಿದ್ದಾರೆ. ಇನ್ನೋಸೆಂಟ್ ಆಗಿ ಕಾಣಿಸಿದೆ ಆ ಮಗು. ಆ ಮಗುನ ಜಡ್ಜ್ ಮಾಡೋದು ಬೇಡ. ಅವಳು ಹೇಗೆ ಹಾಡ್ತಿದಾಳೆ ಹಾಗೆ ಬಿಟ್ಟುಬಿಡಿ. ಎಲ್ಲರ ಮನೆಯಲ್ಲೂ ಈ ಥರದ ಸಿಂಗರ್ ಇರ್ತಾರೆ. ಅವಳಿಗೆ ಸಾಕಷ್ಟು ಕನಸುಗಳಿವೆ. ಕನಸನ್ನ ಸಾಕಾರಗೊಳಿಸಿಕೊಳ್ಳಲಿ ಎಂದು ಪ್ರತಿಕ್ರಿಯೆ ನೀಡಿದ್ದಾರೆ.














