ಮನೆ ರಾಜ್ಯ ಕಾಂತಾರ ಚಾಪ್ಟರ್-1 ಸಿನಿಮಾ ಪ್ರಚಾರಕ್ಕೆ ಸಾಥ್ ಕೊಟ್ಟ ಸೂಪರ್‌ಸ್ಟಾರ್ಸ್‌ಗಳು..

ಕಾಂತಾರ ಚಾಪ್ಟರ್-1 ಸಿನಿಮಾ ಪ್ರಚಾರಕ್ಕೆ ಸಾಥ್ ಕೊಟ್ಟ ಸೂಪರ್‌ಸ್ಟಾರ್ಸ್‌ಗಳು..

0

ಕಾಂತಾರ ಚಾಪ್ಟರ್-1 ಸಿನಿಮಾ ಇದೇ ಅಕ್ಟೋಬರ್ 2ರಂದು ವಿಶ್ವದಾದ್ಯಂತ ತೆರೆಗೆ ಬರಲು ಭರ್ಜರಿಯಾಗಿ ತಯಾರಿ ಮಾಡಿಕೊಂಡಿದೆ. ರಿಷಬ್ ಶೆಟ್ಟಿ ನಟಿಸಿ, ನಿರ್ದೇಶನ ಮಾಡಿರುವ ಈ ಸಿನಿಮಾದಲ್ಲಿ ಅತಿದೊಡ್ಡ ತಾರಾಗಣವಿದೆ.

ಸಿನಿಮಾ ತೆರೆಗೆ ಬರೋಕೆ ದಿನಗಣನೆ ಆರಂಭವಾಗಿದ್ದು, ಕೆಲವೇ ಕೆಲವು ದಿನಗಳು ಮಾತ್ರ ಬಾಕಿ ಇದೆ. ಹೀಗಾಗಿ ಸಿನಿಮಾದ ಪ್ರಚಾರಕ್ಕಾಗಿ ಚಿತ್ರತಂಡ ಭಾರತೀಯ ಚಿತ್ರರಂಗದ ಸೂಪರ್‌ಸ್ಟಾರ್ಸ್‌ಗಳನ್ನು ಹೊಂಬಾಳೆ ಸಂಸ್ಥೆ ಕಣಕ್ಕಿಳಿಸುತ್ತಿದೆ.

ಇದೇ ಸೆ.22ರಂದು ಕಾಂತಾರ ಚಾಪ್ಟರ್-1 ಚಿತ್ರದ ಟ್ರೇಲರ್ ರಿಲೀಸ್ ಆಗುತ್ತಿದೆ. ಈ ಸಿನಿಮಾದ ಟ್ರೇಲರ್ ಬಹುಭಾಷೆಯಲ್ಲಿ ಒಟ್ಟಿಗೆ ರಿಲೀಸ್ ಆಗಲಿದೆ. ಹಿಂದಿ ಟ್ರೇಲರ್‌ನ್ನ ಬಾಲಿವುಡ್ ನಟ ಹೃತಿಕ್ ರೋಷನ್ ರಿಲೀಸ್ ಮಾಡುತ್ತಿದ್ದಾರೆ.

ತಮಿಳು ವರ್ಷನ್ ಟ್ರೇಲರ್‌ನ್ನು ನಟ ಶಿವಕಾರ್ತಿಕೇಯನ್ ರಿಲೀಸ್ ಮಾಡಲಿದ್ದಾರೆ. ಇನ್ನು ಮಲಯಾಳಂ ಟ್ರೇಲರ್‌ನ್ನು ಬಹುತೇಕ ಪೃಥ್ವಿರಾಜ್ ಅಥವಾ ಮೋಹನ್‌ಲಾಲ್ ಅವರು ರಿಲೀಸ್ ಮಾಡಲಿದ್ದಾರೆ. ತೆಲುಗು ವರ್ಷನ್ ಟ್ರೇಲರ್‌ನ್ನ ಜೂ.ಎನ್‌ಟಿಆರ್ ಅಥವಾ ಪ್ರಭಾಸ್ ರಿಲೀಸ್ ಮಾಡಿ ಚಿತ್ರತಂಡಕ್ಕೆ ಸಪೋರ್ಟ್ ಮಾಡಲಿದ್ದಾರೆ.

ಚಿತ್ರದ ಟೈಟಲ್ ಟೀಸರ್ ಹಾಗೂ ಪೋಸ್ಟರ್‌ಗಳ ಮೂಲಕವೇ ಕ್ಯೂರಿಯಾಸಿಟಿ ಹುಟ್ಟಿಸಿರುವ ಕಾಂತಾರ ಸಿನಿಮಾ ಅಕ್ಟೋಬರ್ 2ರಂದು ಗ್ರ್ಯಾಂಡ್‌ ರಿಲೀಸ್‌ ಆಗಿ ತೆರೆಗಪ್ಪಳಿಸಲಿದೆ. ಕಾಂತಾರ ಸಿನಿಮಾ ನೋಡಲು ಕಾತುರದಿಂದ ಕಾಯುತ್ತಿರುವ ಅಭಿಮಾನಿಗಳಿಗೆ ಟ್ರೇಲರ್ ಹೇಗಿರಲಿದೆ ಅನ್ನೋ ಕೌತುಕತೆ ದುಪ್ಪಟ್ಟಾಗಿದೆ. ಕಾಂತಾರ ಸಿನಿಮಾಗೆ ಭಾರತದಾದ್ಯಂತ ಸ್ಟಾರ್ಸ್‌ ಸಪೋರ್ಟ್ ಸಿಕ್ಕಿದೆ. ಟ್ರೇಲರ್ ಹೇಗಿರಲಿದೆ ಎಂದು ಕಾದು ನೋಡಬೇಕಿದೆ.