ಮನೆ ಸುದ್ದಿ ಜಾಲ ದೇಶಾದ್ಯಂತ ಆತಂಕ ಸೃಷ್ಟಿಸಿದ ಕಿಲ್ಲರ್ ಕಾಫ್ ಸಿರಪ್ – ಗೈಡ್‌ಲೈನ್ಸ್‌ ಬಿಡುಗಡೆಗೆ ನಿರ್ಧಾರ..!

ದೇಶಾದ್ಯಂತ ಆತಂಕ ಸೃಷ್ಟಿಸಿದ ಕಿಲ್ಲರ್ ಕಾಫ್ ಸಿರಪ್ – ಗೈಡ್‌ಲೈನ್ಸ್‌ ಬಿಡುಗಡೆಗೆ ನಿರ್ಧಾರ..!

0

ಬೆಂಗಳೂರು : ದೇಶದಲ್ಲಿ ಕಾಫ್ ಸಿರಪ್ ಭೀತಿ ಹೆಚ್ಚಾಗಿದೆ. ಮಧ್ಯಪ್ರದೇಶದ ಛಿಂದ್ವಾರಾದಲ್ಲಿ ಮಕ್ಕಳಿಗೆ ಮಾರಕ ಕೋಲ್ಡ್ರಿಫ್ ಸಿರಪ್ ಶಿಫಾರಸು ಮಾಡಿದ ವೈದ್ಯ ಪ್ರವೀಣ್‌ನನ್ನು ಬಂಧಿಸಲಾಗಿದೆ. ಅಲ್ಲದೇ ಈ ಸಿರಪ್ ತಯಾರಿಸಿದ ತಮಿಳುನಾಡು ಮೂಲದ ಶ್ರೀಸನ್ ಫಾರ್ಮಾಸ್ಯುಟಿಕಲ್ಸ್, ಮಕ್ಕಳ ವೈದ್ಯ ಪ್ರವೀಣ್ ಸೋನಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಹೇಳಿದ್ದಾರೆ. ಈ ಎಲ್ಲಾ ಬೆಳವಣಿಗೆ ಮಧ್ಯೆ ಮಧ್ಯಪ್ರದೇಶ, ತಮಿಳುನಾಡು, ಕೇರಳ, ರಾಜಸ್ಥಾನ, ತೆಲಂಗಾಣದಲ್ಲಿ ಕೋಲ್ಡ್ರಿಫ್ ಸಿರಪ್ ಮಾರಾಟ ನಿಷೇಧ ಮಾಡಲಾಗಿದೆ.

ಆರು ರಾಜ್ಯಗಳಲ್ಲಿ ಕೆಮ್ಮು ಸಿರಪ್ ಸೇರಿದಂತೆ 19 ಔಷಧಿ ಉತ್ಪನ್ನಗಳ ಉತ್ಪಾದನಾ ಘಟಕಗಳಲ್ಲಿ ಕೇಂದ್ರ ಔಷಧ ಗುಣಮಟ್ಟ ಸಂಸ್ಥೆ (ಸಿಡಿಎಸ್‌ಸಿಓ) ಸ್ಯಾಂಪಲ್ಸ್ ಸಂಗ್ರಹಿಸಿ ತಪಾಸಣೆ ನಡೆಸಿದೆ. ಈ ಮಧ್ಯೆ ಮಕ್ಕಳಿಗೆ ಅನವಶಕ್ಯಕವಾಗಿ ಕೋಲ್ಡ್ ಸಿರಪ್ ಕೊಡದಂತೆ ಮಕ್ಕಳ ತಜ್ಞರು ಸಲಹೆ ನೀಡಿದ್ದಾರೆ.

ಇದರೊಂದಿಗೆ ರಾಜ್ಯ ಆರೋಗ್ಯ ಇಲಾಖೆಯಿಂದ ಪ್ರತ್ಯೇಕ ಮಾರ್ಗಸೂಚಿ ರಿಲೀಸ್‌ ಮಾಡಲು ಎಂದು ಪ್ರಧಾನ ಕಾರ್ಯದರ್ಶಿ ಹರ್ಷಾಗುಪ್ತ ಅವರು ತಿಳಿಸಿದ್ದಾರೆ. ನಾಳೆ ‌ಹರ್ಷಾಗುಪ್ತ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಲಿದ್ದು, ಬಳಿಕ ಮಕ್ಕಳಿಗೆ ಸಿರಾಪ್ ವಿತರಣೆಗೆ ಸಂಬಂಧಿಸಿದಂತೆ ಗೈಡ್‌ಲೈನ್ಸ್‌ ರಿಲೀಸ್‌ ಮಾಡಲಾಗುತ್ತದೆ. ಪೋಷಕರಿಗಷ್ಟೇ ಅಲ್ಲದೇ ಖಾಸಗಿ ಆಸ್ಪತ್ರೆ ಮತ್ತು ವೈದ್ಯರಿಗೂ ಕೂಡ ಮಾರ್ಗಸೂಚಿ ಬಿಡುಗಡೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.

ಮಕ್ಕಳ ಸಿರಪ್ ವಿತರಣೆಗೆ ಏನು ಗೈಡ್ ಲೈನ್ಸ್ ಏನು? –

  1. ಕಫಾ ಸಪರೇಟ್ ಮಾಡುವ ಸಿರಪ್ ಕೊಡಬಾರದು.
  2. ಕಫಾ ಹೊರಗಡೆ ತರುವುದಕ್ಕೆ ರೇರ್ ಕೇಸ್ ಇದ್ದರೆ ಜಾಗ್ರತೆಯಿಂದ ಸಿರಪ್ ಕೊಡಬಹುದು.
  3. ಓರಲ್ ಮೆಡಿಸನ್ ಮಕ್ಕಳಿಗೆ ಕೊಡಬಾರದು, ಡಾಕ್ಟರ್ ಕೂಡ ಪ್ರಿಸ್ಕ್ಷನ್ (ಚೀಟಿ) ಬರೆಯಬಾರದು.
  4. ಎರಡರಿಂದ ಎರೂವರೆ ವರ್ಷದ ಮಕ್ಕಳಿಗೆ ಸಿರಪ್ ಕೊಡಬಾರದು.
  5. ವೀಸಿಂಗ್ ಆದರೆ ಓರಲ್ ಮೆಡಿಸನ್ ಕೊಡಬಾರದು.
  6. ವೀಸಿಂಗ್‌ಗೆ ಮಾತ್ರೆ ಮತ್ತು ಇನ್ ಹೇಲರ್ ಕೊಡಬೇಕು, ಓರಲ್ ಕೊಡಬಾರದು. ವೀಸಿಂಗ್‌ ಅಂದ್ರೆ ಮೂಗು ಕಟ್ಟಿಕೊಂಡಂತಾದಾಗ ಉಸಿರಾಟದ ವೇಳೆ ಉಂಟಾಗುವ ಜೋರು ಶಬ್ಧ.

ಖಾಸಗಿ ಆಸ್ಪತ್ರೆ, ಸಣ್ಣ ಖಾಸಗಿ ಕ್ಲಿನಿಕ್‌ಗಳಿಗೆ ಏನು ಮಾರ್ಗಸೂಚಿ? –

  1. ಡೆತ್ ಮುಂಚಿತವಾಗಿ ಕಾಂಪ್ಲಿಕೇಷನ್ ಆಗಿರುತ್ತೆ ಅಂತಹ ಕೇಸ್ ರಿಪೋರ್ಟ್ ಆಗಬೇಕು.
  2. ಖಾಸಗಿ ಕ್ಲಿನಿಕ್ ಗಳು ಸಿರಪ್ ಬರೆಯಬಾರದು.
  3. ಖಾಸಗಿ ಆಸ್ಫತ್ರೆಯವರು ಗಂಭೀರ ಪ್ರಕರಣಗಳನ್ನ ವರದಿ ಮಾಡಬೇಕು.
  4. ಫಾರ್ಮಸಿ ಸಾಫ್ಟ್‌ವೇರ್ ಸೆಂಟ್ರಲ್ ಮಾಡಬೇಕು.
    5.‌ ಮಾನಿಟರಿಂಗ್ ಸ್ಟ್ರಾಂಗ್ ಆಗಬೇಕು.

ಮಕ್ಕಳಿಗೆ ಸಿರಪ್‌ ಕೊಡುವ ಮುನ್ನ ಪೋಷಕರೇನು ಮಾಡಬೇಕು? –

  1. ಸಿರಪ್ ಓಪನ್ ಮಾಡಿದ ತಕ್ಷಣ ಒಂದು ತಿಂಗಳ ಒಳಗಡೆ ಬಳಸಬೇಕು.
  2. ಸಿರಪ್ ಅನ್ನು ಓಪನ್ ಮಾಡಿದ ನಂತ್ರ 6 ತಿಂಗಳು, 1 ವರ್ಷದವರೆಗೂ ಬಳಸಬಾರದು.
  3. ಡಾಕ್ಟರ್ ಕೊಟ್ಟಿದ್ದಾರೆ ಅಂತಹ ಡಾಕ್ಟರ್ ಅನ್ನು ಕಾಂಟ್ಯಾಕ್ಟ್ ಮಾಡದೇ ಅದೇ ಸಿರಪ್ ಕೊಂಡುಕೊಂಡು ಬಳಸಬಾರದು.
  4. ಕಳೆದ ಬಾರಿ ಡಾಕ್ಟರ್ ಸೂಚಿಸಿದ್ದ ಸಿರಪ್ ಅನ್ನು ಪದೇ ಪದೇ ಬಳಸಬಾರದು.