ಮನೆ ರಾಜ್ಯ ಚಾಮರಾಜನಗರದ ಹುಂಡಿಪುರ ಗ್ರಾಮದಲ್ಲಿ ಸ್ಮಾರ್ಟ್‌, ಡಿಜಿಟಲ್ ಗ್ರಂಥಾಲಯ ಸ್ಥಾಪನೆ

ಚಾಮರಾಜನಗರದ ಹುಂಡಿಪುರ ಗ್ರಾಮದಲ್ಲಿ ಸ್ಮಾರ್ಟ್‌, ಡಿಜಿಟಲ್ ಗ್ರಂಥಾಲಯ ಸ್ಥಾಪನೆ

0

ಚಾಮರಾಜನಗರ(Chamarajanagar): ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಹುಂಡಿಪುರ ಗ್ರಾಮದಲ್ಲಿ ಡಿಜಿಟಲ್ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರ ನಿರ್ಮಾಣವಾಗಿದ್ದು, ಕೆಲವೇ ದಿನಗಳಲ್ಲಿ ಗ್ರಾಮದ ಜನರ ಬಳಕೆಗೆ ಮುಕ್ತವಾಗಲಿದೆ.

15ನೇ ಹಣಕಾಸಿನಲ್ಲಿ ಗ್ರಾಮ ಪಂಚಾಯಿತಿಗೆ ಸೇರಿದ ಹಳೇ ಕಟ್ಟಡವನ್ನು ದುರಸ್ಥಿ ಪಡಿಸಿ ಡಿಜಿಟಲ್ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರವನ್ನು ನಿರ್ಮಿಸಿದ್ದು ನೂತನ ಗ್ರಂಥಾಲಯದಲ್ಲಿ 12 ಕಂಪ್ಯೂಟರ್, ಇಂಟರ್ನೆಟ್ ಸಂಪರ್ಕ ಅಳವಡಿಸಿದ್ದು 6600 ಪುಸ್ತಕವನ್ನು ಖರೀದಿಸಿ ತರಲಾಗಿದೆ.‌

ಜಿಲ್ಲೆಯಲ್ಲಿ ಇದೇ ಮೊದಲಾಗಿದ್ದು ಇಲ್ಲಿ ರೈತರಿಗೆ, ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಸರ್ಕಾರಿ ದತ್ತಾಂಶ, ಯೋಜನೆ, ನೌಕರಿ ಸಂಬಂಧ, ಶಿಕ್ಷಣಕ್ಕೆ ಸಂಬಂಧಿಸಿದ ಹಲವು ಮಾಹಿತಿಯನ್ನು ಆನ್‍ಲೈನ್ ಮೂಲಕ ದೊರೆಯಲಿದೆ.

ಗ್ರಂಥಾಲಯದಲ್ಲಿ ವೈಫೈ ಇರುವ ಕಾರಣ ಸಾರ್ವಜನಿಕರು ಉಚಿತವಾಗಿ ಇಂಟರ್ನೆಟ್ ಬಳಸಬಹುದಾಗಿದೆ.

75ನೇ ಸ್ವಾತಂತ್ರೋತ್ಸವದ ಅಂಗವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ್ದ ಅಮೃತ ಗ್ರಾಮ ಪಂಚಾಯಿತಿ ಯೋಜನೆಗೆ ಹುಂಡೀಪುರ ಸೇರಿರುವುದು ವಿಶೇಷ.

ಹುಂಡಿಪುರ ಗ್ರಾಮದ ಡಿಜಿಟಲ್ ಗ್ರಂಥಾಲಯದಲ್ಲಿ ಏಕಕಾಲದಲ್ಲಿ ಆನ್‌ಲೈನಲ್ಲೇ 40 ಜನ ಕುಳಿತುಕೊಂಡು ಪ್ರಪಂಚದಲ್ಲಿರುವ ಎಲ್ಲಾ ಪುಸ್ತಕದ ಮಾಹಿತಿಯನ್ನು ಇಲ್ಲಿ ಪಡೆದುಕೊಳ್ಳಬಹುದಾಗಿದೆ.

ಗ್ರಂಥಾಲಯದಲ್ಲಿ ವಿದ್ಯಾರ್ಥಿಗಳಿಗೆ ಮತ್ತು ವಿದ್ಯಾರ್ಥಿನಿಯರಿಗೆ, ಜನರಿಗೆ, ಬೇರೆ ಬೇರೆ ಆಸನಗಳ ವ್ಯವಸ್ಥೆ ಮಾಡಲಾಗಿದೆ. ಚಿಕ್ಕ -ಮಕ್ಕಳಿಗೆ ಬೇರೆ ಆಸನದ ವ್ಯವಸ್ಥೆ ಮಾಡಿರುವುದು ಇಲ್ಲಿನ ವಿಶೇಷತೆ. ಇನ್ನೂ ಗಾಳಿ ಬೆಳಕು, ನೀರಿನ ವ್ಯವಸ್ಥೆ ಸೇರಿದಂತೆ ಸೌಲಭ್ಯ ನೋಡಬಹುದು.