ಮನೆ ರಾಜ್ಯ ಬಿಬಿಎಂಪಿ ವಾರ್ಡ್ ಗಳ ಮರುವಿಂಗಡಣೆ: ಆಕ್ಷೇಪಣೆ ಸಲ್ಲಿಸಲು 15 ದಿನಗಳ ಕಾಲಾವಕಾಶ

ಬಿಬಿಎಂಪಿ ವಾರ್ಡ್ ಗಳ ಮರುವಿಂಗಡಣೆ: ಆಕ್ಷೇಪಣೆ ಸಲ್ಲಿಸಲು 15 ದಿನಗಳ ಕಾಲಾವಕಾಶ

0

ಬೆಂಗಳೂರು(Bengaluru): ಬಿಬಿಎಂಪಿ  ವಾರ್ಡ್ ಗಳನ್ನು 198ರಿಂದ 243ಕ್ಕೆ ಏರಿಕೆ ಮಾಡಲಾಗಿದ್ದು,  ವಾರ್ಡ್ ಗಳ ಮರು ವಿಂಗಡಣೆ ಬಗ್ಗೆ ಆಕ್ಷೇಪಣೆ ಸಲ್ಲಿಸಲು 15 ದಿನಗಳ ಕಾಲಾವಕಾಶ ನೀಡಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದ್ದಾರೆ.

ಈ ಕುರಿತು ಮಾತನಾಡಿದ ಅವರು, ಸರ್ಕಾರದ ನಿಯಮದ ಪ್ರಕಾರ.  2011ರ ಜನಗಣತಿಯ  ಆಧಾರದ ಮೇಲೆ ವಾರ್ಡ್ ಗಳನ್ನು ವಿಂಗಡಣೆ ಮಾಡಲಾಗಿದೆ ಎಂದು ಆರೋಪಿಸಿದರು.

ಸಾರ್ವಜನಿಕರಿಂದ ಆಕ್ಷೇಪಣೆಗೂ 15 ದಿನಗಳ ಕಾಲಾವಕಾಶ ನೀಡಲಾಗಿದೆ. ಕೆಲವು ವಾರ್ಡ್ ಗಳ ಜನಸಂಖ್ಯೆ ಹೆಚ್ಚಿದ್ದರೇ, ಮತ್ತೆ ಕೆಲವು ವಾರ್ಡ್ ಗಳ ಸಂಖ್ಯೆ ಕಡಿಮೆಯಾಗಿದೆ. ಮರು ವಿಂಗಡಣೆಯ ನಂತರ ಜನಸಂಖ್ಯೆ ಕೂಡ ವಿಭಾಗಿಸಲಾಗಿದೆ . ಇನ್ನೂ ಹೊಸ ವಾರ್ಡ್ ಗಳ ಮ್ಯಾಪ್ ಅನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ತಿಳಿಸಿದರು.